ವೀಲ್​ಚೇರ್​ ಮೇಲೆ ಕಾಜಲ್ ಕಿಕಿ ಡ್ಯಾನ್ಸ್​​: ನಟಿಯ ಜಾಗೃತಿ ಕಾರ್ಯ

ಹೈದರಾಬಾದ್​: ತೆಲುಗು ನಟಿ ಕಾಜಲ್ ಅಗರ್​ವಾಲ್ ಅವರು​ ಕಿಕಿ ಚಾಲೆಂಜ್​ ವಿರುದ್ಧ ಸಮರ ಸಾರಿದ್ದು, ವಿಭಿನ್ನವಾಗಿ ಅರಿವು ಮೂಡಿಸುವುದರೊಂದಿಗೆ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಕಿಕಿ ಚಾಲೆಂಜ್​ ಮಾಡಬೇಡಿ ಅದು ಅಪಾಯಕಾರಿ ಎಂದು ಪೊಲೀಸರು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದರೂ ಕಿಕಿ ನೃತ್ಯಕ್ಕೆ ಸೊಂಟ ಬಳುಕಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಾಗೇ ಪೊಲೀಸರ ಜಾಗೃತಿ ಕಾರ್ಯವೂ ಮುಂದುವರಿದೆ.

ಜಾಗೃತಿ ಕಾರ್ಯಕ್ಕೆ ಕೈಜೋಡಿಸಿರುವ ಟಾಲಿವುಡ್​ ಬೆಡಗಿ ಕಾಜಲ್​ ಅಗರ್​ವಾಲ್​ ಹಾಗೂ ನಟ ಬೆಲ್ಲಂಕೊಂಡ ಶ್ರೀನಿವಾಸ್ ವೀಲ್​ಚೇರ್​ ಮೇಲೆ ಕುಳಿತು ಕಿಕಿ ಹಾಡಿಗೆ ವಿಶಿಷ್ಟವಾಗಿ ನೃತ್ಯ ಮಾಡಿದ್ದಾರೆ. ಈ ಮೂಲಕ ಕಿಕಿ ಚಾಲೆಂಜ್​ ಸ್ವೀಕರಿಸುವವರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕಿಕಿ ಡ್ಯಾನ್ಸ್​ ಮಾಡಿರುವ ವಿಡಿಯೋವನ್ನು ನಟಿ ಕಾಜಲ್​​ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು ಸಾಕಷ್ಟು ವೈರಲ್​ ಆಗುತ್ತಿದೆ.