ಚಲಿಸುವ ಕಾರಿನೊಂದಿಗೆ ಡ್ಯಾನ್ಸ್​ ನನ್ನ ಐಡಿಯಾ ಅಲ್ಲವೆಂದ ಕಿಕಿ ಕ್ರಿಯೇಟರ್​

ವಾಷಿಂಗ್ಟನ್​: ಬಹು ವಿವಾದಿತ ಚಾಲೆಂಜ್​ ಕಿಕಿ ಡ್ಯಾನ್ಸ್​ ಅನ್ನು ಇನ್​ ಮೈ ಫೀಲಿಂಗ್ಸ್​ ಹೆಸರಿನಲ್ಲಿ ಪ್ರಾರಂಭಿಸಿದ ಇಂಟರ್​ನೆಟ್​ ಹಾಸ್ಯಗಾರ ಶಿಗ್ಗಿ, ಚಲಿಸುತ್ತಿರುವ ಕಾರಿನ ಜತೆ ಹೆಜ್ಜೆ ಹಾಕುವುದು ನನ್ನ ಐಡಿಯಾ ಅಲ್ಲ ಎಂದಿದ್ದಾರೆ.

ನಾನು ಶುರು ಮಾಡಿದ್ದು ಹೀಗಲ್ಲ. ಡ್ರೇಕ್​ ಅವರ ಹಾಡಿಗೆ ತಕ್ಕಂತೆ ನೃತ್ಯ ಮಾಡಬೇಕಿತ್ತು. ಆದರೆ,ಸಾರ್ವಜನಿಕರು ಚಲಿಸುತ್ತಿರುವ ಕಾರಿನಿಂದ ಜಂಪ್​ ಮಾಡಿ ಅದರ ಜತೆ ಡ್ಯಾನ್ಸ್​ ಮಾಡುತ್ತ ಹೆಜ್ಜೆ ಹಾಕಿದ್ದಾರೆ. ಟ್ರಾಫಿಕ್​ನಲ್ಲಿ ಹೀಗೆಲ್ಲ ಮಾಡಿ ಅಪಾಯ ಸೃಷ್ಟಿಸಿದ್ದಾರೆ ಎಂದಿದ್ದಾರೆ.

ಶಿಗ್ಗಿ ಡ್ರೇಕ್​ ಅವರ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು InMYFeeling ಹ್ಯಾಶ್​ ಟ್ಯಾಗ್​ ಹಾಕಿ ಪೋಸ್ಟ್​ ಮಾಡಿದ್ದರು. ಆದರೆ, ವಿಡಿಯೋದಲ್ಲಿ ಚಲಿಸುತ್ತಿರುವ ಕಾರು ಇರಲಿಲ್ಲ. ಈ ಸವಾಲು ಮುಂದುವರಿದಂತೆ ಬೇರೆಯದೇ ಸ್ವರೂಪ ಪಡೆಯಿತು ಎಂದು ಹೇಳಿರುವ ಶಿಗ್ಗಿ, ಇಂಥ ಹುಚ್ಚಾಟವನ್ನು ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: