ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಕಿಕ್ಕೇರಿ: ಸರ್ಕಾರದ ಅಭಿವೃದ್ಧಿ ಕಾಮಗಾರಿ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದರು.

ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ನೆಲಹಾಸಿನ ಕಾಂಕ್ರಿಟೀಕರಣಗೊಳಿಸುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ತಾಪಂ ಉಪಾಧ್ಯಕ್ಷ ರವಿ, ಸದಸ್ಯ ಶಾರದಾ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಮಂಜೇಗೌಡ, ಕೆ.ಕೆ. ಚಂದ್ರಶೇಖರ್, ರಾಜೇಶ್, ಏಜಸ್‌ಪಾಷ, ಮುಖಂಡರಾದ ಕೆ.ಜಿ. ತಮ್ಮಣ್ಣ, ಕೆ.ಜಿ. ಅಣ್ಣಯ್ಯ, ಎಸ್‌ಟಿಡಿ ರಮೇಶ್, ಇಂಜಿನಿಯರ್ ನಾಗರಾಜಮೂರ್ತಿ, ಶಿವಕುಮಾರ್, ಗಣೇಶ್, ಗುತ್ತಿಗೆದಾರ ಚಂದ್ರೇಗೌಡ ಹಾಜರಿದ್ದರು.


Leave a Reply

Your email address will not be published. Required fields are marked *