ಬೆಳಗಾವಿ: ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮೂತ್ರಪಿಂಡ ವಿಭಾಗವು ಮಾ. 12ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೂತ್ರಪಿಂಡ (ಕಿಡ್ನಿ) ತಪಾಸಣಾ ಉಚಿತ ಶಿಬಿರ ಆಯೋಜಿಸಿದೆ.
ಮಧುಮೇಹ ಮತ್ತು ರಕ್ತದೊತ್ತಡ, ಕಿಡ್ನಿಯಲ್ಲಿ ಹರಳುಗಳಿಂದ ಬಳಲುತ್ತಿದ್ದರೆ, ವೃದ್ಧಾಪ್ಯ, ಬಹಳ ದಿನಗಳಿಂದ ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದರೆ, ಬೊಜ್ಜು, ಬಹುವಿಧ ಹರಳು ಹಾಗೂ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರೆ, ಮೂತ್ರನಾಳದ ಸೋಂಕು, ಕುಟುಂಬದಲ್ಲಿ ಯಾರಾದರೂ ಕಿಡ್ನಿ ತೊಂದರೆಗೊಳಗಾಗಿದ್ದ ಇತಿಹಾಸವಿದ್ದರೆ, ದೀರ್ಘಕಾಲೀನ ಯಕೃತ್ (ಲೀವರ್) ಮತ್ತು ಹೃದ್ರೋಗದಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ, ಜನಸಂಪರ್ಕ ವಿಭಾಗ, ದೂ. 0831 2473777, ವಿಸ್ತರಣೆ. 1116, 1302 ಅಥವಾ ಮೊ. 9141080949 ಸಂಪರ್ಕಿಸಬಹುದು ಎಂದು ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.