ಕಿಡ್ನಿ ವೈಫಲ್ಯ, ಆರ್ಥಿಕ ಸಹಾಯಕ್ಕೆ ಮನವಿ

ದಾವಣಗೆರೆ: ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ 19 ವರ್ಷದ ಪುತ್ರ ವೀರೇಶ್ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವಂತೆ ತಂದೆ ಮಲ್ಲಿಕಾರ್ಜುನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ತಾನು ವೆಂಕಟೇಶ್ವರ ಕಾಲನಿ ನಿವಾಸಿ. ತನಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ.ಪುತ್ರ ವೀರೇಶ್ ಐಟಿಐ ಪರೀಕ್ಷೆ ಬರೆದು ಫಲಿತಾಂಶ ನಿರೀಕ್ಷೆಯಲ್ಲಿದ್ದಾನೆ. ಆರು ತಿಂಗಳಿಂದ ಎರಡೂ ಕಿಡ್ನಿ ಕಾರ್ಯ ನಿರ್ವಹಿಸುತ್ತಿಲ್ಲ. ಒಂದು ಕಿಡ್ನಿ ಅಳವಡಿಕೆಗೆ 7-8 ಲಕ್ಷ ರೂ. ವೆಚ್ಚವಾಗುತ್ತದೆಂದು ವೈದ್ಯರು ತಿಳಿಸಿದ್ದಾರೆ.

ಜೀವನ ನಿರ್ವಹಣೆಗೆ ಚಹಾ ಅಂಗಡಿ ಇದೆ. ಅದರಿಂದ ಬರುವ ಆದಾಯದಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಆಗುತ್ತಿಲ್ಲ. ದಾನಿಗಳು, ಉಳಿತಾಯ ಖಾತೆ ನಂ. 3945001700021521, ಐಎಫ್‌ಎಸ್‌ಸಿ ಕೋಡ್: ಪಿಯುಎನ್‌ಬಿ 0394500, ಬ್ಯಾಂಕ್ ಆಫ್ ಪಂಜಾಬ್, ದಾವಣಗೆರೆ ಶಾಖೆಗೆ ಹಣ ಪಾವತಿಸುವ ಮೂಲ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು. ವೀರೇಶ್, ಅರ್ಪಿತಾ ಇದ್ದರು.