ಸಿನಿಮಾ

ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷಗಳ ನಂತರ ಪತ್ತೆ

ದೆಹಲಿ: ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷಗಳ ನಂತರ ಪತ್ತೆಯಾಗಿರುವ ಘಟನೆ ದೆಹಲಿಯ ಗೋಕಲ್ಪುರಿಯಲ್ಲಿ ನಡೆದಿದೆ. ಸೀಮಾಪುರಿ ಪೊಲೀಸ್ ಠಾಣೆಯ ತಂಡವು ರಹಸ್ಯ ಮಾಹಿತಿಯ ಮೇರೆಗೆ ಬಾಲಕಿಯನ್ನು ಪತ್ತೆ ಹಚ್ಚಿದೆ.

ಇದನ್ನೂ ಓದಿ: ಶಾಲೆಯ ಆವರಣದಲ್ಲೇ ಬಡಿದಾಡಿಕೊಂಡ ಮುಖ್ಯಶಿಕ್ಷಕಿ-ಸಹಾಯಕ ಶಿಕ್ಷಕಿ: ವಿಡಿಯೋ ವೈರಲ್​

2006ರಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಪೋಷಕರ ದೂರಿನ ಮೇರೆಗೆ ದೆಹಲಿಯ ಗೋಕಲ್ಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಆಕೆಗೆ 32 ವರ್ಷ ವಯಸ್ಸಾಗಿದ್ದು, ಕಾರಣಾಂತರಗಳಿಂದ ಆಕೆಯ ಹೆಸರನ್ನು ಬಹಿರಂಗ ಪಡಿಸಿಲ್ಲ.

ಈ ಕುರಿತು ಮಾತನಾಡಿದ ಪೊಲೀಸರು, ಹುಡುಗಿ ತನ್ನ ಮನೆಯಿಂದ ನಾಪತ್ತೆಯಾದ ನಂತರ ಉತ್ತರ ಪ್ರದೇಶದ ಚೆರ್ದಿಹ್ ಜಿಲ್ಲೆಯ ಬಲಿಯಾ ಗ್ರಾಮದಲ್ಲಿ ದೀಪಕ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ನಂತರ, ಕೆಲವು ವರ್ಷಗಳ ಆಕೆ ದೀಪಕ್​ನನ್ನು ತೊರೆದು ಪ್ರತ್ಯೇಕವಾಗಿ ಗೋಕಲ್ಪುರಿಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್