2 ಲಕ್ಷ ರೂ. ಹಣಕ್ಕಾಗಿ ಈತ ಮಾಡಿದ್ದು… ಪೋಷಕರೇ ಈ ಸುದ್ದಿ ನಿಮ್ಮ ಗಮನಕ್ಕೆ! ಇರಲಿ ಎಚ್ಚರ

ರಾಮನಗರ: ಮಂಜುನಾಥ ನಗರದಲ್ಲಿ ಹಣಕ್ಕಾಗಿ ಮಗುವನ್ನು ಅಪಹರಿಸಿದ್ದ ಯುವಕನೊಬ್ಬ ಭಾನುವಾರ ರಾತ್ರಿ ಪೊಲೀಸರ ಅತಿಥಿಯಾಗಿದ್ದಾನೆ. ಮಂಜುನಾಥ ನಗರದ ದರ್ಶನ್ (20) ಬಂಧಿತ. ನಗರದ ಮಂಜುನಾಥ ನಗರ ನಿವಾಸಿಯೊಬ್ಬರ 5 ವರ್ಷದ ಹೆಣ್ಣು ಮಗು ಮನೆಯಿಂದ ಸಂಜೆ 7.30ರ ವೇಳೆಗೆ ಕಾಣೆಯಾಗಿದ್ದಳು. ಇದರಿಂದ ಗಾಬರಿಗೊಂಡ ಮಗುವಿನ ಪಾಲಕರು ಸುಮಾರು ಅರ್ಧ ಗಂಟೆ ಹುಡುಕಾಟ ನಡೆಸಿದರು. ನಂತರ ಮಗುವಿನ ತಂದೆ ಸ್ನೇಹಿತರಿಗೆ ಮಾಹಿತಿ ನೀಡಿ ಮತ್ತೆ ಹುಡುಕಾಟ ನಡೆಸಿದರೂ ಮಗು ಪತ್ತೆ ಆಗಿರಲಿಲ್ಲ.

ಅಪರಿಚಿತ ಕರೆ: ಮಗು ನಾಪತ್ತೆ ಆಗಿರುವ ಆತಂಕದಲ್ಲಿದ್ದ ಮಗುವಿನ ತಂದೆ ಮೊಬೈಲ್ ಸಂಖ್ಯೆಗೆ ಅಪರಿಚಿತ ನಂಬರ್​ನಿಂದ ಕರೆಯೊಂದು ಬಂದಿತು. ಭಾನುವಾರ ರಾತ್ರಿ 9.18ವರೆಗೂ ನಾಲ್ಕು ಬಾರಿ ಕರೆ ಮಾಡಿ, ‘ನಿನ್ನ ಮಗು ನನ್ನ ಬಳಿ ಇದೆ. ನನಗೆ 2 ಲಕ್ಷ ರೂ. ಕೊಡಬೇಕು, ಹಣ ಕೊಡದಿದ್ದರೆ ಮಗುವನ್ನು ಸಾಯಿಸುವೆ’ ಎಂದು ಬೆದರಿಕೆ ಹಾಕಿ ಕರೆಯನ್ನು ಕಡಿತಗೊಳಿಸಿದ್ದ. ಇದರಿಂದ ತೀವ್ರವಾಗಿ ಗಾಬರಿಗೊಂಡ ಮಗುವಿನ ತಂದೆ, ಮಗುವಿಗಾಗಿ ಹುಡುಕಾಟ ಮುಂದವರಿಸಿದರು. ನಂತರ ರಾತ್ರಿ 9.45ರ ಸುಮಾರಿಗೆ ಬೋಳಪ್ಪನ ಕರೆ ಸಮೀಪದ ಶನಿಮಹಾತ್ಮ ದೇವಸ್ಥಾನದ ಬಳಿಯ ಸಿಮೆಂಟ್ ಅಂಗಡಿ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಬಾಯಿ, ಮೈ ಕೈಗೆ ಗಮ್ ಟೇಪ್ ಸುತ್ತಿದ್ದ ಮಗು ಪತ್ತೆ ಆಯಿತು.

ಸಿಕ್ಕಿಬಿದ್ದ ಆರೋಪಿ: ಮಗು ಸಿಕ್ಕ ನಂತರ ಸುಮ್ಮನಾಗದ ಸ್ಥಳೀಯ ಯುವಕರ ತಂಡ ಸ್ಥಳದಲ್ಲಿಯೇ ಹುಡುಕಾಟ ನಡೆಸಿದರು. ಈ ವೇಳೆ ಅಲ್ಲಿಯೇ ಸಿಕ್ಕಿ ಬೀಳುವ ಆತಂಕದಲ್ಲಿ ಅವಿತುಕೊಂಡಿದ್ದ ದರ್ಶನ್ ಕಂಡುಬಂದ. ಈ ವೇಳೆ ‘ಮಗುವನ್ನು ಅಪಹರಿಸಿದ್ದು ನಾನೇ, ನನಗೆ 2 ಲಕ್ಷ ರೂ. ಅಗತ್ಯವಿತ್ತು’ ಎಂದು ಆತ ಬಾಯ್ಬಿಟ್ಟ. ನಂತರ ದರ್ಶನ್​ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸೋಮವಾರ ಆತನನ್ನು ಕೋರ್ಟ್​ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಡಿಯೋ ವೈರಲ್: ಮಗುವನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಮ್ ಟೇಪ್​ನಿಂದ ಮಗುವಿನ ಕೈ, ಕಾಲು, ಬಾಯಿ ಹಾಗೂ ದೇಹವನ್ನು ಕಟ್ಟಿಹಾಕಿದ್ದರಿಂದ ಮಗು ನಿತ್ರಾಣ ಸ್ಥಿತಿಯಲ್ಲಿದ್ದು, ಯುವಕರ ತಂಡ ಮಗುವಿಗೆ ಧೈರ್ಯ ಹೇಳಿ ಟೇಪ್ ಬಿಚ್ಚಿರುವ ಹಾಗೂ ಆರೋಪಿಯನ್ನು ಹಿಡಿದು ವಿಚಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸ್ ಆಪ್​ನಲ್ಲಿ ಹರಿದಾಡುತ್ತಿದೆ.

ಕಷ್ಟದ ಬದುಕು: ಬಂಧಿತ ದರ್ಶನ್ ಕುಟುಂಬ ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಿದೆ. ತಂದೆ ಕಳೆದ 6-7 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಾಯಿ ಹಾಗೂ ತಂಗಿಯೊಂದಿಗೆ ಮಂಜುನಾಥ ನಗರದಲ್ಲಿ ವಾಸವಿದ್ದ. ಮಾದಕ ವಸ್ತುವಿನ ವ್ಯಸನಿ ಆಗಿದ್ದ ದರ್ಶನ್, ಕೆಲಸಕ್ಕೂ ಹೋಗದೆ ಮನೆ ಬಾಡಿಗೆ ಕಟ್ಟಿರಲಿಲ್ಲ. ಚಟಕ್ಕಾಗಿ ಸುಮಾರು 2 ಲಕ್ಷ ರೂ.ದವರೆಗೆ ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಇದನ್ನು ತೀರಿಸುವ ಸಲುವಾಗಿ ಪಕ್ಕದ ಮನೆಯ ಮಗುವನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ದರ್ಶನ್ ತಾಯಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಮ್​ಟೇಪ್​ ಸುತ್ತಿದ್ದ: ಮಗುವನ್ನು ಅಪಹರಿಸಿದ್ದ ದರ್ಶನ್ ಸಮೀಪದ ಸಿಮೆಂಟ್ ಅಂಗಡಿ ಬಳಿ ಮಗು ಚೀರಾಟ ಮಾಡದಂತೆ ಕೈ, ಕಾಲು, ಬಾಯಿ ಹಾಗೂ ದೇಹವನ್ನು ಗಮ್ ಟೇಪ್​ನಿಂದ ಸುತ್ತಿದ್ದ. ಅಲುಗಾಡದಂತೆ ಮಾಡಿ ಕತ್ತಲಲ್ಲೇ ಮಗುವನ್ನು ಬಿಟ್ಟು ಬಂದಿದ್ದ. ನಂತರ ಕುಟುಂಬದವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಮಗು ಪತ್ತೆಯಾದ ನಂತರ ತಾನು ಸಿಕ್ಕಿ ಬೀಳುತ್ತೇನೆಂಬ ಭಯ ಕಾಡತೊಡಗಿತು. ಆಗ, ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.

ಅದೊಂದು ಪತ್ರ ನೋಡಿ ನನ್ನ ಕೈ-ಕಾಲು ನಡುಗಿತ್ತು! ಫ್ಯಾನ್​ ಕೊಟ್ಟ ಲೆಟರ್​ ಮರೆಯದ ವಿರಾಟ್​ ಹೇಳಿದ್ದಿಷ್ಟು

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…