ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಪೈಲ್ವಾನ್​: ಹೇಗಿದೆ ಗೊತ್ತಾ ಕಿಚ್ಚನ​ ಗತ್ತು ಗಮ್ಮತ್ತು?

ಬೆಂಗಳೂರು: ಸ್ಯಾಂಡಲ್​​ವುಡ್​ನ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾದ ಕ್ರೇಜ್​ ದಿನೇದಿನ ​ಹೆಚ್ಚಾಗುತ್ತಿದೆ. ಮೊದಲ ಬಾರಿಗೆ ಪೈಲ್ವಾನ್​ ಆಗಿ ತೊಡೆ ತಟ್ಟಿರುವ ಕಿಚ್ಚನಿಗೆ ಎಲ್ಲರೂ ಜೈ ಅಂತಿದ್ದಾರೆ. ಅದರಂತೆ ಟೀಸರ್​ ರಿಲೀಸಾದಾಗಲೂ ಭರ್ಜರಿ ಕಮೆಂಟ್ಸ್​​​ ಬಂದಿದ್ದು, ಸಖತ್​​ ಟ್ರೆಂಡ್​ ಕ್ರಿಯೇಟ್​ ಆಗಿತ್ತು. ಇದೀಗ ಕಿಚ್ಚ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಲ್ಲಿವರೆಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು. ಆದರೆ, ಯಾವತ್ತೂ ದೇಹ ಹುರಿಗೊಳಿಸುವ ಗೋಜಿಗೆ ಹೋದವರಲ್ಲ. ಆದರೆ, ಮೊದಲ ಬಾರಿಗೆ ಪೈಲ್ವಾನ್ ಆಗೋಕೆ, ಜಿಮ್​ನಲ್ಲಿ ಬೆವರಿಳಿಸಿರುವ ಕಿಚ್ಚ ಕಟ್ಟುಮಸ್ತಾದ ದೇಹದೊಂದಿಗೆ ಪೈಲ್ವಾನ್​ ಅಖಾಡದಲ್ಲಿ ಭರ್ಜರಿಯಾಗಿ ತೊಡೆ ತಟ್ಟಿದ್ದಾರೆ.

ಕಿಚ್ಚ ಸುದೀಪ್ ಸಿನಿಮಾಗೆ ತಕ್ಕಂತೆ ತಮ್ಮ ದೇಹವನ್ನ ಹುರಿ ಮಾಡಿದ್ದು, ಅದರ ಸ್ಯಾಂಪಲ್​ ನಾವೀಗಾಗಲೇ ನೋಡಿದ್ದೇವೆ. ಈಗ ಲೇಟೆಸ್ಟ್​ ಫೋಟೋ ಒಂದನ್ನು ಕಿಚ್ಚ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಎಲ್ಲದಕ್ಕೂ ಆರಂಭ ಇರುತ್ತೆ ಹಾಗೇ ಎಲ್ಲದಕ್ಕೂ ರಿಸಲ್ಟೂ ಕೂಡ ಇರುತ್ತೆ ಎಂದು ಬರೆದುಕೊಂಡಿದ್ದಾರೆ.

ಪೈಲ್ವಾನ್‌ ಚಿತ್ರಕ್ಕಾಗಿ ವರ್ಕೌಟ್ ಮಾಡುವ ಮೊದಲು ಸುದೀಪ್​​ 89 ಕೆ.ಜಿ ತೂಕ ಇದ್ದರು. ಸೊಂಟದ ಸುತ್ತಳತೆ 36 ಇತ್ತು. ವರ್ಕೌಟ್​ ನಂತರ 73 ಕೆ.ಜಿಗೆ ಇಳಿದಿದ್ದು, ವೇಸ್ಟ್​ ಸೈಜ್​ 31.5ಕ್ಕೆ ಇಳಿದಿದೆ. ಜಿಮ್‌ನಲ್ಲಿ ಬೆವರಿಳಿಸುವ ಮೂಲಕ ಬರೋಬ್ಬರಿ 16 ಕೆ.ಜಿ ತೂಕ ಕಡಿಮೆ ಮಾಡಿದ್ದೀನಿ ಎಂದು ಸುದೀಪ್ ಟ್ವೀಟ್​ ಮಾಡಿದ್ದರು.

ಅಭಿಮಾನಿಗಳಿಗೋಸ್ಕರ ಕಿಚ್ಚ ರಾ ಲುಕ್​ ರಿವೀಲ್​ ಮಾಡಿದ್ದಾರೆ. ಆ ಮೂಲಕ ಮತ್ತಷ್ಟು ಕುತೂಹಲವನ್ನು ಸೃಷ್ಟಿ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ಸ್ ನಡೀತಿದ್ದು, ಚುನಾವಣಾ ಅಬ್ಬರ ಮುಗಿಯುತಿದ್ದ ಹಾಗೇ ಪೈಲ್ವಾನ್​ ಅಖಾಡಕ್ಕೆ ಧುಮುಕೋದು ಪಕ್ಕಾ ಆಗಿದೆ. (ದಿಗ್ವಿಜಯ ನ್ಯೂಸ್​)