ಎಂಟು ಭಾಷೆಯಲ್ಲಿ ಸುದೀಪ್ ಪೈಲ್ವಾನ್!

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಐದು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಮಾಡಿ ಅಬ್ಬರಿಸಿತ್ತು ಯಶ್ ಅಭಿನಯದ ‘ಕೆಜಿಎಫ್’ ಚಿತ್ರ. ಇದೀಗ ‘ಕಿಚ್ಚ’ ಸುದೀಪ್ ನಾಯಕತ್ವದ ‘ಪೈಲ್ವಾನ್’ ಬಳಗ ಒಂದು ಹೆಜ್ಜೆ ಮುಂದೆ ಹೋಗಿ, ಎಂಟು ಭಾಷೆಗಳಲ್ಲಿ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಪ್ಲಾ್ಯನ್ ಮಾಡಿಕೊಂಡಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಜತೆಗೆ ಮರಾಠಿ, ಭೋಜಪುರಿ ಮತ್ತಿತರ ಭಾಷೆಗಳಲ್ಲೂ ‘ಪೈಲ್ವಾನ್’ ತೆರೆಕಾಣಿಸುವುದಕ್ಕೆ ನಿರ್ದೇಶಕ ಎಸ್. ಕೃಷ್ಣ ಯೋಜನೆ ರೂಪಿಸಿದ್ದಾರೆ. ಸದ್ಯ ಹೈದರಾಬಾದ್​ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಎಂಟು ಅದ್ದೂರಿ ಸೆಟ್​ಗಳನ್ನು ನಿರ್ವಿುಸಲಾಗಿದ್ದು, ಶೂಟಿಂಗ್ ನಡೆಯುತ್ತಿದೆ.