ಜ.24ಕ್ಕೆ ಜೂ. ಕಿಚ್ಚನ ಚಿತ್ರ ; ಕೆಆರ್​ಜಿ, ಸುಪ್ರಿಯಾನ್ವಿ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಸಂಚಿತ್​ ಸಂಜೀವ್​

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಟ ಕಿಚ್ಚ ಸುದೀಪ್​ ಸದ್ಯ “ಮ್ಯಾಕ್ಸ್​’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅದರ ನಡುವೆಯೇ, ಹೊಸ ವರ್ಷಕ್ಕೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅಕ್ಕ ಸುಜಾತಾ ಪುತ್ರ ಸಂಚಿತ್​ ಸಂಜೀವ್​ನ ನಾಯಕನಾಗಿ ಲಾಂಚ್​ ಮಾಡಲು ಮುಂದಾಗಿದ್ದಾರೆ. ಸುಪ್ರಿಯಾನ್ವಿ (ಅರ್ಥಾತ್​ ಸುದೀಪ್​, ಪ್ರಿಯಾ ಮತ್ತು ಸಾನ್ವಿ) ಪ್ರೊಡಕ್ಷನ್ಸ್​ ಮೂಲಕ, ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಜತೆ ಸೇರಿ ಸಂಚಿತ್​ ಚೊಚ್ಚಲ ಸಿನಿಮಾ ಘೋಷಿಸಿದ್ದಾರೆ. ಇನ್ನು ಕಳೆದ ನ. 28ರಂದು ಸೆಟ್ಟೇರಿರುವ ಯುವರಾಜಕುಮಾರ್​ ನಾಯಕನಾಗಿ ನಟಿಸುತ್ತಿರುವ, ರೋಹಿತ್​ ಪದಕಿ ನಿರ್ದೇಶಿಸುತ್ತಿರುವ “ಎಕ್ಕ’ ಚಿತ್ರದ ಶೂಟಿಂಗ್​ ಪೂರ್ಣಗೊಂಡ ಬಳಿಕ ಕೆಆರ್​ಜಿ ಸ್ಟುಡಿಯೋಸ್​ ಸಂಚಿತ್​ ಸಿನಿಮಾ ಪ್ರಾರಂಭಿಸಲಿದೆ.

ಜ.24ಕ್ಕೆ ಜೂ. ಕಿಚ್ಚನ ಚಿತ್ರ ; ಕೆಆರ್​ಜಿ, ಸುಪ್ರಿಯಾನ್ವಿ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಸಂಚಿತ್​ ಸಂಜೀವ್​

ಈ ಚಿತ್ರದ ಮೂಲಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮೈಸೂರು ಮೂಲದ ವಿವೇಕ, ಡೈರೆಕ್ಟರ್​ ಕ್ಯಾಪ್​ ಧರಿಸಲಿದ್ದಾರೆ. ಸಂಚಿತ್​ ಮತ್ತು ವಿವೇಕ ಇಬ್ಬರಿಗೂ ಇದು ಮೊದಲ ಪ್ರಯತ್ನವಾದ ಕಾರಣ ಚಿತ್ರದ ಬಗ್ಗೆ ಕುತೂಹಲವಿದೆ. ಇದೊಂದು ಕೆಮ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು, ಇದೇ ತಿಂಗಳ 24ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಅಂದೇ ಲುಕ್​ ಮತ್ತು ಟೈಟಲ್​ ರಿಲೀಸ್​ ಮಾಡಿ, ಚಿತ್ರೀಕರಣ ಪ್ರಾರಂಭಿಸುವ ಆಲೋಚನೆ ಚಿತ್ರತಂಡದ್ದು. ಉಳಿದಂತೆ ಚಿತ್ರದ ನಾಯಕಿ, ತಂತ್ರಜ್ಞರು ಮತ್ತು ತಾರಾಬಳಗದ ಬಗ್ಗೆ ಅಂದೇ ಮಾಹಿತಿ ದೊರೆಯಲಿದೆ.

ಜ.24ಕ್ಕೆ ಜೂ. ಕಿಚ್ಚನ ಚಿತ್ರ ; ಕೆಆರ್​ಜಿ, ಸುಪ್ರಿಯಾನ್ವಿ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಸಂಚಿತ್​ ಸಂಜೀವ್​

“ಜಿಮ್ಮಿ’ ಮುಂದಕ್ಕೆ…
ಇನ್ನು ಈ ವರ್ಷವೇ ಸಂಚಿತ್​ ಸಂಜೀವ್​ ಮೊದಲ ಸಿನಿಮಾ ರಿಲೀಸ್​ ಆಗಿಬಿಡಬೇಕಿತ್ತು. ಏಕೆಂದರೆ 2023ರ ಜೂ.25ರಂದು ಅವರು ನಾಯಕನಾಗಿ ನಟಿಸಬೇಕಿದ್ದ ಮೊದಲ ಸಿನಿಮಾ “ಜಿಮ್ಮಿ’ ಅನೌನ್ಸ್​ ಆಗಿತ್ತು. ಆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಖುದ್ದು ಸಂಚಿತ್​ ಹೊತ್ತಿದ್ದರು. ರವಿಚಂದ್ರನ್​, ಶಿವರಾಜಕುಮಾರ್​ “ಜಿಮ್ಮಿ’ ಚಿತ್ರದ ಟೈಟಲ್​ ಟೀಸರ್​ ರಿಲೀಸ್​ ಮಾಡಿ, ಸಂಚಿತ್​ನನ್ನು ವೇದಿಕೆಗೆ ಕರೆತಂದು ಪರಿಚಯಿಸಿದ್ದರು. ವಿಶೇಷ ಅಂದರೆ ಈ ಟೀಸರ್​ಗೆ ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಹಾಡಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್​ ಪ್ರಾರಂಭವಾಗಲಿಲ್ಲ. ಅದರ ನಡುವೆ ಜೂನಿಯರ್​ ಕಿಚ್ಚ ಸಂಚಿತ್​ ಸಂಜೀವ್​, ಸಂಚೀ ಎಂಬ ಹೆಸರಿನಲ್ಲಿ ಇದೀಗ ನಾಯಕನಾಗಿ ಡೆಬ್ಯೂ ಮಾಡಲು ರೆಡಿಯಾಗಿದ್ದಾರೆ.

ಜ.24ಕ್ಕೆ ಜೂ. ಕಿಚ್ಚನ ಚಿತ್ರ ; ಕೆಆರ್​ಜಿ, ಸುಪ್ರಿಯಾನ್ವಿ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಸಂಚಿತ್​ ಸಂಜೀವ್​

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…