ಖೋಖೋ ವಿಶ್ವಕಪ್ ಟ್ರೋಫಿ, ಲಾಂಛನಪ್ರಾಣಿ ಅನಾವರಣ

blank

ನವದೆಹಲಿ: ಜನವರಿ 13ರಿಂದ 19ರವರೆಗೆ ದೆಹಲಿಯ ಐಜಿಎಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಆವೃತ್ತಿಯ ಖೋಖೋ ವಿಶ್ವಕಪ್ ಟೂರ್ನಿಯ ಟ್ರೋಫಿ ಹಾಗೂ ಲಾಂಛನಪ್ರಾಣಿಗಳನ್ನು (ಮಸ್ಕಟ್) ಶುಕ್ರವಾರ ಅನಾವರಣಗೊಳಿಸಲಾಯಿತು. ಜತೆಗೆ ಭಾರತ ಎ ಮತ್ತು ಭಾರತ ಬಿ ಹೆಸರಿನ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಎರಡು ತಂಡಗಳನ್ನು ಟೂರ್ನಿಯಲ್ಲಿ ಆಡಿಸಲಾಗುವುದು ಎಂದು ಭಾರತೀಯ ಖೋ ಖೋ ಡರೇಷನ್ (ಕೆಕೆಎ್ಐ) ತಿಳಿಸಿದೆ.

ಲಾಂಛನಪ್ರಾಣಿಗಳಾದ ತಾರಾ ಹಾಗೂ ತೇಜಸ್ ಅನ್ನು ಪರಿಚಯಿಸಿದ ಕೆಕೆಎ್ಐ ಅಧ್ಯಕ್ಷ ಸುಧಾಂಶು ಮಿತ್ತಲ್, ಪ್ರಸ್ತುತ ರಾಷ್ಟ್ರೀಯ ಶಿಬಿರದಲ್ಲಿರುವ ತಲಾ 60 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಲ್ಲಿ ತಲಾ 15 ಆಟಗಾರರ 4 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಜತೆಗೆ ತಂಡಗಳ ನಾಯಕರನ್ನು ಜನವರಿ 8ರಂದು ೋಷಿಸಲಾಗುವುದು ಎಂದು ಮಾಹಿತಿ ನೀಡಿದರು. ಟೂರ್ನಿಯ ಏಳು ದಿನವೂ ಎಲ್ಲ ತಂಡಗಳು ಪ್ರತಿದಿನ 2 ಪಂದ್ಯಗಳನ್ನು ಆಡುವ ಸವಾಲು ಹೊಂದಿರುವುದರಿಂದ 2 ತಂಡಗಳನ್ನು ಕಣಕ್ಕಿಳಿಸಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಪಾಕ್ ಆಟಗಾರರು ವೀಸಾದ ನಿರೀಕ್ಷೆಯಲ್ಲಿದ್ದಾರೆ. ಪುರುಷರ ವಿಭಾಗದ ವಿಜೇತರ ತಂಡ ನೀಲಿ ಬಣ್ಣದ ಟ್ರೋಫಿ ಪಡೆದರೆ, ಮಹಿಳಾ ಚಾಂಪಿಯನ್ಸ್ ಹಸಿರು ಬಣ್ಣದ ಟ್ರೋಫಿ ಪಡೆಯಲಿದ್ದಾರೆ. ಟೂರ್ನಿಯಲ್ಲಿ ಅಮೆರಿಕ, ಇಂಗ್ಲೆಂಡ್, ಜರ್ಮನಿ ಮತ್ತು ಬ್ರೆಜಿಲ್ ಸೇರಿ 24 ದೇಶಗಳು ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲಿವೆ. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಇಂಡೋನೇಷ್ಯಾ ಮಹಿಳಾ ತಂಡ ಮಾತ್ರ ಕಣಕ್ಕಿಳಿಯಲಿದೆ. ಜ.17 ರಂದು ಕ್ವಾರ್ಟರ್‌ಫೈನಲ್, ಜ.18 ರಂದು ಸೆಮಿಫೈನಲ್ ಮತ್ತು ಜ.19 ರಂದು ಫೈನಲ್ ಪಂದ್ಯಗಳು ನಿಗದಿಯಾಗಿವೆ.

Share This Article

ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ… Never reheat these foods

Never reheat these foods:  ಮನೆಗಳಲ್ಲಿ ಉಳಿದ ಆಹಾರವನ್ನು ಬಿಸಿ ಮಾಡಿ ನಂತರ ತಿನ್ನುವುದು ಸಾಮಾನ್ಯ.…

ಮಾವಿನಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? mango

mango: ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವು ಕೂಡ ಒಂದು.   ಅನೇಕರು ಮಾವಿನಹಣ್ಣು ತಿಂದ ನಂತರ ನೀರು…

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ…