ನನ್ನನ್ನು ಸಂತೋಷ ಪಡಿಸು ಕೆಲಸ ಕೊಡುತ್ತೇನೆ: ಬಾಲಿವುಡ್​ ನಟಿ ರಿಚಾ ಭದ್ರ ಬಿಚ್ಚಿಟ್ಟ ಸ್ಪೋಟಕ ಮಾಹಿತಿ

ನವದೆಹಲಿ: ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಎಂಬುದು ಒಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವಾಗ ಮೀಟೂ ಅಭಿಯಾನ ಬೆಳಕಿಗೆ ಬಂತೂ ಅಂದಿನಿಂದ ಹಲವು ನಟಿಯರು ತಮಗೆ ಎದುರಾದ ಕರಾಳತೆಯನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮುಂದೆ ಬಿಚ್ಚಿಡುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ತನಗಾದ ನೋವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ತೊಡಿಕೊಂಡಿದ್ದಾರೆ.

ಬಾಲಿವುಡ್​ ನಟಿ ರಿಚಾ ಭದ್ರ ಅವರು ನಿರ್ಮಾಪಕ ಹಾಗೂ ನಿರ್ದೇಶಕರೊಬ್ಬರು ತಮಗೆ ಬೇಡಿಕೆ ಇಟ್ಟ ಘಟನೆಯನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ. ಕೆಲಸಕ್ಕಾಗಿ ಅವರನ್ನು ಸಂತೋಷ ಪಡಿಸಬೇಕಾಗಿತ್ತಂತೆ. ಈ ರೀತಿ ಬೇಡಿಕೆಯನ್ನು ನನ್ನ ಮುಂದಿಟ್ಟಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.

ಪ್ರಾರಂಭದಲ್ಲಿ ನಾನು ಕಾಸ್ಟಿಂಗ್​ ಕೌಚ್​ ತೊಂದರೆಯನ್ನು ಎದುರಿಸಿರಲಿಲ್ಲ. ಆದರೆ, ಮದುವೆ ನಂತರ ಹಲವು ಸ್ಥಳಗಳಲ್ಲಿ ನಾನು ಸಿನಿಮಾ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ, ಈ ವೇಳೆ ನನ್ನ ಜತೆ ಸಂಧಾನದ ಮಾತುಕತೆಯಾಡಿದ್ದರು. ಓರ್ವ ನಿರ್ದೇಶಕನು ಕೂಡ ನನ್ನನ್ನು ಸಂತೋಷ ಪಡಿಸು ನಾನು ನಿನಗೆ ಕೆಲಸ ನೀಡುತ್ತೇನೆ ಎಂದಿದ್ದ ಎಂದು ನಟಿ ತಿಳಿಸಿದ್ದಾರೆ.

ನಿರ್ದೇಶಕ ಹೋಟೆಲ್​ನಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದ. ಆದರೆ, ನಾನು ಕಾಫಿಶಾಪ್​ನಲ್ಲಿ ಭೇಟಿಯಾಗೋಣ ಎಂದಿದ್ದೆ. ಅಂದೆ ನಾನು ಸಿನಿಮಾ ಇಂಡಸ್ಟ್ರಿ ಬಗ್ಗೆ ಹೊಂದಿದ್ದ ಎಲ್ಲ ಆಸೆಗಳಿಗೆ ಪೂರ್ಣ ವಿರಾಮ ಹಾಕಿಬಿಟ್ಟೆ. ನಾನು ಬಾಲನಟಿಯಾಗಿ ಗಳಿಸಿದ್ದ ಹೆಸರನ್ನು ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ ಎಂದು ರಿಚಾ ಭದ್ರ ಹೇಳಿದ್ದಾರೆ.

ಸದ್ಯ ಕಿರುತೆರೆಯಲ್ಲಿ ಬಿಜಿಯಾಗಿರುವ ರಿಚಾ ಸಿನಿಮಾ ಕ್ಷೇತ್ರದಿಂದ ದೂರ ಉಳಿಸಿದ್ದಾರೆ. ನಾನು ನನ್ನ ಕುಟುಂಬದ ವಿರುದ್ಧವಾಗಿ ಹೋಗಲು ಇಚ್ಛಿಸುವುದಿಲ್ಲ. ಕೇವಲ ಖ್ಯಾತಿಗಾಗಿ ಕೆಳಮಟ್ಟದ ಪಾತ್ರವನ್ನು ಆಯ್ದುಕೊಳ್ಳುವುದಿಲ್ಲ. ಒಬ್ಬ ಬಾಲನಟಿಯಾಗಿ ನನ್ನ ಗುಜರಾತಿ ಪ್ರೊಡಕ್ಷನ್​ ಹೌಸ್​ ಅನ್ನು ಸದಾ ರಕ್ಷಣೆ ಮಾಡುತ್ತೇನೆ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ಕಾಳಜಿಯನ್ನು ಹೊಂದಿದೆ. ಹೀಗಾಗಿ ನಾನೆಂದಿಗೂ ನನ್ನ ಮಿತಿಯನ್ನು ಮೀರುವುದಿಲ್ಲ. ಹೊಸ ಯೋಜನೆಗಳಿಂದ ದೂರವಿದ್ದೇನೆ ಎಂದು ತಿಳಿಸಿದ್ದಾರೆ.

ರಿಚಾ ಭದ್ರಾ ಕಿಚಡಿ ಎಂಬ ಬಾಲಿವುಡ್​ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿ ಪರಿಚಿತರಾಗಿದ್ದರು. (ಏಜೆನ್ಸೀಸ್​)