24.9 C
Bangalore
Wednesday, December 11, 2019

ರಾಜ್ಯದಲ್ಲೂ ಮಹಾತಂತ್ರ; ಗೌಡರ ಬಳಿಕ ಅಖಾಡಕ್ಕೆ ಖರ್ಗೆ, ಸಿದ್ದು ಆಸೆಗೆ ತಡೆ

Latest News

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ಬೆಂಗಳೂರು: ಉಪಸಮರದ ಕೊನೇ ಹಂತದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ದಿಢೀರ್ ರಂಗಪ್ರವೇಶ ಸದ್ಯದ ರಾಜಕೀಯ ಸನ್ನಿವೇಶಕ್ಕೆ ಅಚ್ಚರಿಯ ತಿರುವು ತಂದಿದ್ದು, ಮೂರೂ ಪಕ್ಷಗಳಲ್ಲಿ ಹೊಸ ಬಗೆಯ ಲೆಕ್ಕಾಚಾರ ಶುರುವಾಗಿದೆ.

ವಾರದ ಹಿಂದಷ್ಟೇ ಬಿಜೆಪಿ ಬಗ್ಗೆ ಮೃದುನಿಲುವು ತೋರ್ಪಡಿಸಿದ್ದ ಜೆಡಿಎಸ್ ಇದೀಗ ಏಕಾಏಕಿ ನಡೆ ಬದಲಿಸಿ ಬಿಗುಮಾನ ತೋರುತ್ತಿರುವುದು ಮಹಾರಾಷ್ಟ್ರದಲ್ಲಿ ನಡೆದ ಮಹಾಮೈತ್ರಿಯನ್ನು ನೆನಪಿಸುವಂತಿದೆ. ಡಿ.9ರ ನಂತರ ನಡೆಯುವ ರಾಜಕೀಯ ಬೆಳವಣಿಗೆಯಲ್ಲಿ ತನ್ನ ನೇತೃತ್ವದಲ್ಲೇ ಸರ್ಕಾರ ರಚಿಸಬೇಕೆಂಬ ಧಾವಂತವನ್ನು ಕಾಂಗ್ರೆಸ್ ಪ್ರದರ್ಶಿಸಿದೆ.

86ರ ಹರೆಯದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ 77 ವರ್ಷದ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜೋಡಿ ಮುಂದಿನ 72 ಗಂಟೆಗಳಲ್ಲಿ ರಣತಂತ್ರ ಹೆಣೆಯುವ ಸಾಧ್ಯತೆ ಬಗ್ಗೆ ಗಾಢ ಚರ್ಚೆ ರಾಜಕೀಯ ವಲಯದಲ್ಲಿದೆ. ಒಂದು ವೇಳೆ ಉಪ ಉಪಚುನಾವಣೆಯಲ್ಲಿ ಬಿಜೆಪಿ 5 ಸ್ಥಾನಕ್ಕಿಂತ ಕಡಿಮೆ ಗೆದ್ದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಜೆಡಿಎಸ್ ಬೆಂಬಲಿತ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಗೋಚರಿಸಿದೆ.

ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡೇ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ರಾಜ್ಯದಲ್ಲಿ ಮೈತ್ರಿ ಬಗ್ಗೆ ಈಗಲೇ ಭವಿಷ್ಯ ಹೇಳಲಾಗದು, ಆದರೂ ಡಿ.9 ರಂದು ಸಿಹಿಸುದ್ದಿ ಕೊಡುತ್ತೇವೆ’ ಆತ್ಮವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಅವರ ಈ ಹೇಳಿಕೆ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಲವಲವಿಕೆ ಕಂಡುಬಂತು.

ಮಹಾರಾಷ್ಟ್ರ ಮಾದರಿ: ಶಿವಸೇನೆಯನ್ನು ಬೆಂಬಲಿಸಲು ಸುತಾರಾಂ ಸಿದ್ಧವಿಲ್ಲದ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಒಂದೇ ಉದ್ದೇಶದಿಂದ ನಿಲುವು ಬದಲಿಸಿತು. ಅದೇ ರೀತಿ ಇಲ್ಲೂ ಜೆಡಿಎಸ್ ಸಂಬಂಧವನ್ನು ಪುನರ್ ಸ್ಥಾಪಿಸಿ ಸರ್ಕಾರದಲ್ಲಿ ಪಾಲುದಾರನಾಗುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಮಲ್ಲಿಕಾರ್ಜುನ ಖರ್ಗೆಯವರೇ ಇಲ್ಲೂ ಅಖಾಡಕ್ಕಿಳಿದಿರುವುದು ವಿಶೇಷ. ಖರ್ಗೆ ಆಗಮನ ಎರಡನೇ ಬಾರಿ ಸಿಎಂ ಆಗುವ ಆಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ಪಾಲಿಗೆ ತಲೆನೋವು ಎಂದು ವ್ಯಾಖ್ಯಾನಿಸಲಾಗಿದೆ.

ಇದೀಗ ಕರ್ನಾಟಕದಲ್ಲೂ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಅವಕಾಶ ಸಿಕ್ಕರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೈಕಮಾಂಡ್ ಹಿಂದೆಮುಂದೆ ನೋಡಲ್ಲ ಎಂಬ ಲೆಕ್ಕಾಚಾರದಲ್ಲಿ ರಾಜ್ಯ ಕೈ ನಾಯಕರ ಒಂದು ಬಣವಿದೆ.

ಮಹಾರಾಷ್ಟ್ರದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಎದುರಾಳಿ ಶಿವಸೇನೆಯನ್ನು ಸ್ನೇಹಿತನ್ನಾಗಿ ಮಾಡಿಕೊಳ್ಳಲಾಯಿತು. ಇಲ್ಲಿ ಚುನಾವಣೆಗೆ ಇನ್ನು ಮೂರು ದಿನ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಅನುಕೂಲ ಮಾಡಿಕೊಟ್ಟರೆ ಡಿ.9ರ ಬಳಿಕ ಇಬ್ಬರಿಗೂ ಸರ್ಕಾರ ರಚಿಸಲು ಸುಲಭವಾಗುತ್ತದೆ ಎಂಬ ಆಲೋಚನೆಯಲ್ಲಿ ಕಾಂಗ್ರೆಸ್ ಇದೆ.

ಅರ್ಥಾತ್, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಅನುಕೂಲಕರವಾಗುವಂತೆ ಮತ ವರ್ಗಾವಣೆಗೆ ಎರಡೂ ಪಕ್ಷದ ಪ್ರಮುಖರು ತೀರ್ಮಾನ ಮಾಡುವ ಸಾಧ್ಯತೆ ಇದೆ. ತ್ರಿಕೋನ ಸ್ಪರ್ಧೆ ಇರುವೆಡೆ ಬಿಜೆಪಿಗೆ ಲಾಭವಾಗದಂತೆ ಒಳ ಒಪ್ಪಂದ ಮಾಡಿಕೊಂಡು ಕ್ಷೇತ್ರವನ್ನು ಬಿಟ್ಟುಕೊಡುವ ಆಲೋಚನೆ ಇದೆ. ಆದರೆ ಈ ಬಗ್ಗೆ ಈವರೆಗೆ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ.

ಜೆಡಿಎಸ್​ಗೆ ಅನುಕೂಲಕರವಾಗುವ ಕಡೆ ಕಾಂಗ್ರೆಸ್ ಹೆಜ್ಜೆ ಹಿಂದಿಡುವುದು, ಕಾಂಗ್ರೆಸ್ ಗೆಲ್ಲಬಹುದಾದ ಕಡೆ ಜೆಡಿಎಸ್ ಕೊನೇ ಹಂತದಲ್ಲಿ ಹೆಚ್ಚಿನ ಪ್ರಯತ್ನ ಮಾಡದೆ ಇರುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ವಿವರಿಸಿದ್ದಾರೆ. ಏನಿದ್ದರೂ ಈ ತೀರ್ವನವೆಲ್ಲ ಖರ್ಗೆ ಮತ್ತು ದೇವೇಗೌಡರ ನಡುವೆ ನಡೆಯುವ ಚರ್ಚೆ ಬಳಿಕವಷ್ಟೇ ಎಂದು ಹೇಳಿದ್ದಾರೆ.

ಉಪ ಚುನಾವಣೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದೆಂಬ ಸಂದೇಶ ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಹರಿದಾಡಿದರೆ ಸಹಜವಾಗಿ ದಲಿತ ಮತಗಳು ಅಘೋಷಿತ ಮೈತ್ರಿ ಅಭ್ಯರ್ಥಿಗೆ ದಕ್ಕಬಹುದು. ಬಿಜೆಪಿಗೆ ಹೋಗಬಹುದಾಗಿದ್ದ ದಲಿತ ಮತಗಳೂ ವಿಭಜನೆಯಾಗಬಹುದು ಎಂಬ ಮಾತುಗಳು ಕೆಪಿಸಿಸಿ ಕಚೇರಿಯಲ್ಲಿ ಕೇಳಿಬರುತ್ತಿವೆ.

‘ಕಾಂಗ್ರೆಸ್​ವುುಕ್ತ ಭಾರತ’ ಘೋಷಣೆ ಮಾಡಿದ ಬಿಜೆಪಿಗೆ ಎದಿರೇಟು ನೀಡಲು ಸೂಕ್ತ ಸಂದರ್ಭ ಎಂದರಿತು ಒಂದೊಂದೇ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನದಲ್ಲಿ ಕೈ ಹೈಕಮಾಂಡ್ ಯಶ ಕಂಡಿದೆ.

ತುದಿಗಾಲಲ್ಲಿ ಕಾಂಗ್ರೆಸ್

2018ರ ಸಾರ್ವತ್ರಿಕ ಚುನಾವಣೆ ಬಳಿಕ ಜೆಡಿಎಸ್ ಮುಂದೆ ಬಿಟ್ಟು ಸರ್ಕಾರದಲ್ಲಿ ಪಾಲುದಾರನಾಗಿದ್ದ ಕಾಂಗ್ರೆಸ್ ಇದೀಗ ಮುನ್ನಲೆಗೆ ಬರುವ ಆಲೋಚನೆ ತೋರ್ಪಡಿಸಿದೆ. ಜೆಡಿಎಸ್ ಬೆಂಬಲ ಪಡೆದು ತಾನು ಸರ್ಕಾರ ರಚಿಸುವ

ಬಗ್ಗೆ ಆಸಕ್ತಿ ತಾಳಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತುಗಳೇ ಈ ಬೆಳವಣಿಗೆಗೆ ಇಂಬುನೀಡುವಂತಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟು 11 ಸ್ಥಾನ ಗಳಿಸಿದರೆ ಮತ್ತೆ ಸರ್ಕಾರ ರಚಿಸಬಹುದೆಂಬ ಲೆಕ್ಕಾಚಾರ ಶುರುವಾಗಿದೆ.

ಮೈತ್ರಿ ಸರ್ಕಾರ ಹೇಗೆ?

224 ಸದಸ್ಯ ಬಲದ ವಿಧಾನಸಭೆಯ 15 ಕ್ಷೇತ್ರಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆ ಫಲಿತಾಂಶದ ಬಳಿಕ ವಿಧಾನಸಭೆ ಒಟ್ಟು ಬಲಾಬಲ 222ಕ್ಕೇರಲಿದೆ. ಪ್ರಸ್ತುತ ಬಿಜೆಪಿ ಸರ್ಕಾರ 106 ಸದಸ್ಯ ಬಲ(ಪಕ್ಷೇತರ ಸೇರಿ) ಹೊಂದಿದೆ. ಇದೇ ಸರ್ಕಾರ ಮುಂದುವರಿಯಬೇಕೆಂದರೆ ತನ್ನ ಸಂಖ್ಯೆಯನ್ನು ಕನಿಷ್ಠ 112ಕ್ಕೇರಿಸಿಕೊಳ್ಳ ಬೇಕು. ಅಂದರೆ ಉಪ ಚುನಾವಣೆಯಲ್ಲಿ ಕನಿಷ್ಠ 6 ಸ್ಥಾನ ಗೆಲ್ಲಬೇಕು. ಪ್ರಸ್ತುತ ಕಾಂಗ್ರೆಸ್(66), ಜೆಡಿಎಸ್ (34), ಬಿಎಸ್ಪಿ (1) ಸೇರಿ 101 ಶಾಸಕ ಬಲವಿದ್ದು, ಉಪ ಚುನಾವಣೆಯಲ್ಲಿ ಈ ಒಟ್ಟು ಬಲ 112 ದಾಟಿದರೆ ಬಿಜೆಪಿ ಸರ್ಕಾರಕ್ಕೆ ಆಪತ್ತು ಖಚಿತ. ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಈ ಹಿಂದಿನ ಚುನಾವಣೆಯಲ್ಲಿ 12 ಕಡೆ ಕಾಂಗ್ರೆಸ್, 3 ಕಡೆ ಜೆಡಿಎಸ್ ಗೆದ್ದಿತ್ತು. ಹೀಗಾಗಿ ಬಿಜೆಪಿಗೇನು ಸಲೀಸಲ್ಲ ಎಂಬ ಮಾತೂ ಇದೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಎಂಬುದು ತಲೆ ತಿರುಕರ ಮಾತು. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ 

ಡಿ.9ರಂದು ಗುಡ್ ನ್ಯೂಸ್ ಕೊಡುತ್ತೇವೆ. ಸಮಾನ ಮನಸ್ಕ ಪಕ್ಷಗಳ ಜತೆ ಸಂಪರ್ಕದಲ್ಲಿದ್ದು ಅಗತ್ಯ ಬಿದ್ದಾಗ ಬಿಜೆಪಿ ದೂರವಿಟ್ಟು ಒಳ್ಳೆಯ ಸರ್ಕಾರ ಅಧಿಕಾರಕ್ಕೆ ತರುವ ಕಾರ್ಯ ಮಾಡುತ್ತೇವೆ.

| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಹಿರಿಯ ನಾಯಕ

ಯಡಿಯೂರಪ್ಪ ಕೈಯಲ್ಲಿ 105 ಶಾಸಕರು ಇಲ್ವಾ? ನಾವು ಯಾವುದೇ ಕಾರಣಕ್ಕೂ ಈ ಹಿಂದಿನ ತಪ್ಪನ್ನು ಮಾಡುವುದಿಲ್ಲ.

| ಎಚ್.ಡಿ.ದೇವೇಗೌಡ ಜೆಡಿಎಸ್ ವರಿಷ್ಠ 

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...