18 ಲೋಡ್ ಮೇವು ಭಸ್ಮ

ಕಾನಹೊಸಹಳ್ಳಿ(ಬಳ್ಳಾರಿ): ಪಟ್ಟಣದ ಹೊರವಲಯದ ತೋಟದಲ್ಲಿ ಬೆಂಕಿ ಆಕಸ್ಮಿಕದಿಂದ ಸಂಗ್ರಹಿಸಿಟ್ಟಿದ್ದ ಸುಮಾರು 18 ಲೋಡ್ ಶೇಂಗಾ ಮತ್ತು ಮೆಕ್ಕೆಜೋಳದ ಮೇವು ಬುಧವಾರ ಸುಟ್ಟು ಭಸ್ಮವಾಗಿದೆ. ಪಟ್ಟಣದ ರೈತ ಅಂಗಡಿ ತಿಪ್ಪೇಸ್ವಾಮಿ ತಮ್ಮ 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಮತ್ತು ಮೆಕ್ಕೆಜೋಳದ ಮೇವನ್ನು ತೋಟದ ಕಣದಲ್ಲಿ ಸಂಗ್ರಹಿಸಿಟ್ಟಿದ್ದರು. ಬೆಳಗ್ಗೆ ಬೆಂಕಿ ಆಕಸ್ಮಿಕ ತಗುಲಿ ಸಂಪೂರ್ಣ ಸುಟ್ಟಿದೆ. ಗ್ರಾಮಸ್ಥರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.