ಖಾಲಿಸ್ತಾನ ಪರ ಹೋರಾಟಗಾರನೊಂದಿಗೆ ಸಚಿವ ಸಿಧು ಇರುವ ಫೋಟೋ ವೈರಲ್​, ವ್ಯಾಪಕ ಟೀಕೆ

ನವದೆಹಲಿ: ಕರ್ತಾರ್​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು, ಅಲ್ಲಿನ ಪ್ರಧಾನಿಯನ್ನು ಹೊಗಳಿ ವಿವಾದಕ್ಕೆ ಕಾರಣವಾಗಿರುವ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಈಗ ಮತ್ತೊಂದು ಟೀಕೆಗೆ ಗುರಿಯಾಗಿದ್ದಾರೆ.

ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಖಾಲಿಸ್ತಾನ ಪರ ಹೋರಾಟಗಾರ ನಾಯಕ ಗೋಪಾಲ್​ ಸಿಂಗ್​ ಚಾವ್ಲಾ ಪಕ್ಕ ನಿಂತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಅದನ್ನು ನೋಡಿದವರು ಸಿಧು ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಫೋಟೋವನ್ನು ಗೋಪಾಲ್​ಸಿಂಗ್​ ಚಾವ್ಲಾ ಅವರ ಫೇಸ್​ಬುಕ್ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಫೋಟೋದ ಬಗ್ಗೆ ಬಿಜೆಪಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ನಡೆಸುವ ಇಂಥ ದುರುದ್ದೇಶ ಪೂರಿತ ತಂತ್ರಗಾರಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಿಧು ಅವರು ಇಂತಹ ಜನರೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್​ ಕ್ವಮಾರ್​ ಜಾವೇದ್​ ಬಾಜ್ವಾ ಕೂಡ ಈ ಫೋಟೋದಲ್ಲಿ ಇರುವುದನ್ನು ಕಾಣಬಹುದು.
ಈ ಮೊದಲು ಭಾರತದ ಮೇಲೆ ದಾಳಿ ನಡೆಸಲು ಖಾಲಿಸ್ತಾನ ಉಗ್ರರಿಗೆ ಪಾಕಿಸ್ತಾನ ಹಣ ನೀಡುತ್ತಿದೆ ಎಂಬಿತ್ಯಾದಿ ಸುದ್ದಿಗಳೂ ಹರಡಿದ್ದವು.

ಇಮ್ರಾನ್​ ಖಾನ್​ ಬಣ್ಣಿಸಿದ ಸಿಧುಗೆ ಪ್ರಕಾಶ್​ ಜಾವಡೇಕರ್​ ತಿರುಗೇಟು: ಇದು ಲಾಫರ್​ ಚಾಲೆಂಜ್​ ಅಲ್ಲ ಎಂದ ಕೇಂದ್ರ ಸಚಿವ

 

ಖಾಲಿಸ್ತಾನ ಕಾರಿಡಾರ್?