ಕುಳಗೇರಿ ಕ್ರಾಸ್: ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ನಾಲ್ಕು ಅಂಗಡಿಗಳ ತಗಡು ಕತ್ತರಿಸಿ ಅಲ್ಪ ಕಾಸು ಕದ್ದು ಪರಾರಿಯಾದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ಮೂರು ಬೇಕರಿ, ಒಂದು ೋಟೋ ಸ್ಟುಡಿಯೋದ ಹಿಂಬದಿಯಲ್ಲಿ ತಗಡು ಕತ್ತರಿಸಿ ಖದೀಮ ಒಳ ನುಗ್ಗಿದ್ದಾರೆ. ತಲೆಗೆ ಟೋಪಿ ಹಾಕಿಕೊಂಡು ಒಳ ನುಗ್ಗಿದ ಕಳ್ಳ ಪ್ರತಿ ಅಂಗಡಿಯಲ್ಲಿನ ಚಿಲ್ಲರೆ ಕಾಸು ದೋಚಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಚಂದನ ೋಟೋ ಸ್ಟುಡಿಯೋ, ಶ್ರೀರಾಮ ಬೇಕರಿ, ಚಿರು ಐಯ್ಯಂಗಾರ ಬೇಕರಿಯಲ್ಲಿಯೂ ಕೈಚಳಕ ತೋರಿಸಿದ್ದಾನೆ.
ಸುಳಿವು ಬಿಟ್ಟು ಹೋದ ಕಳ್ಳ: ಸೃಜನ್ ಬೇಕರಿಯಲ್ಲಿ ಕ್ರೀಮ್ ಹಚ್ಚಿಕೊಂಡು ಬನ್ ತಿಂದ ಕಳ್ಳ ತಾನು ಹುನಗುಂದದಿಂದ ಕುಳಗೇರಿಗೆ ಪ್ರಯಾಣಿಸಿದ ಬಸ್ ಟಿಕೆಟ್ ಹಾಗೂ 10 ರೂ. ನೋಟು ಅಲ್ಲಿಯೇ ಬಿಟ್ಟು ಹೋಗಿದ್ದಾನೆ.
ಸ್ಥಳೀಯ ಪೊಲೀಸರು ಪ್ರಕರಣ ಸ್ಥಳ ಪರಿಶೀಲಿಸಿದ್ದಾರೆ.