ಕೆಜಿಎಫ್ ಟ್ರೈಲರ್ ನೋಡಿ ಬೆರಗಾದ ಬಾಹುಬಲಿ, ಸೆನ್ಸಾರ್​ನಲ್ಲೂ ಸಿನಿಮಾ ಪಾಸ್

ಮುಂಬೈ: ಯಶ್ ನಟನೆಯ ಕೆಜಿಎಫ್ ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲ, ಬಾಲಿವುಡ್ ನಲ್ಲೂ ಹವಾ ಸೃಷ್ಟಿಸಿದ್ದು, ಈಗಾಗಲೇ ಪ್ರೋಮೋ, ಹಾಡಿನ ಟ್ರೈಲರ್ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ.

ಡಿ.21ರಂದು ಕೆಜಿಎಫ್ ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದ್ದು, ಪಂಚ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಅದ್ಧೂರಿ ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಈ ನಡುವೆ ನಡೆಯಲಿರುವ KGF ಪ್ರೀ ರಿಲೀಸ್ ಇವೆಂಟ್​ಗೆ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್​ರನ್ನು ರಾಕಿಂಗ್ ಸ್ಟಾರ್ ಯಶ್ ಆಹ್ವಾನಿಸಿದ್ದಾರೆ.

ಶುಕ್ರವಾರ ರಾತ್ರಿ ಮುಂಬೈನಲ್ಲಿ ಪ್ರಭಾಸ್​ರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ಟಾರ್ ನಟರಿಬ್ಬರು ಒಟ್ಟಿಗೆ ಡಿನ್ನರ್ ಮಾಡಿದ್ದು, ಕೆಜಿಎಫ್ ಟ್ರೈಲರ್ ನೋಡಿ ಪ್ರಭಾಸ್​ ದಂಗಾದಿದ್ದಾರಂತೆ. ಇನ್ನು ಕೆಜಿಎಫ್ ಮೇಕಿಂಗ್ ಪ್ರಭಾಸ್ ಯಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದು ಅವರಿಗೆ ಶುಭ ಹಾರೈಸಿದ್ದಾರೆ.

ಈ ಮಧ್ಯೆ ಸೆನ್ಸಾರ್ ಮಂಡಳಿಯಲ್ಲಿ ಕೆಜಿಎಫ್​ ಪಾಸಾಗಿದ್ದು, ಯಾವುದೇ ಕಟ್ಸ್ ಇಲ್ಲದೇ U/A ಸರ್ಟಿಫಿಕೇಟ್ ಸಿಕ್ಕಿದೆ. (ದಿಗ್ವಿಜಯ ನ್ಯೂಸ್)