ನಾಳೆ ಕೆಜಿಎಫ್​ ಬಿಡುಗಡೆ ನಿಶ್ಚಿತ ಎಂದ ನಿರ್ಮಾಪಕ ವಿಜಯ್​ ಕಿರಗಂದೂರು

ಬೆಂಗಳೂರು: ನಾಳೆ ದೇಶಾದ್ಯಂತ ಕೆಜಿಎಫ್​ ಚಿತ್ರ ಬಿಡುಗಡೆಯಾಗಲಿದೆ. ನಮಗೆ ಕೋರ್ಟ್​ನಿಂದ ಯಾವುದೇ ಆದೇಶ ಬಂದಿಲ್ಲ ಎಂದು ಚಿತ್ರ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ್ದಾರೆ.

ಪ್ರೇಕ್ಷಕರಲ್ಲಿ ಯಾವುದೇ ಗೊಂದಲ ಬೇಡ. ನಿಗದಿ ಪಡಿಸಿದ್ದ ಸಮಯದಲ್ಲೇ ಚಿತ್ರ ಬಿಡುಗಡೆಯಾಗುತ್ತದೆ. ರೌಡಿ ತಂಗಂ ಹಾಗೂ ಕೆ.ಜಿ.ಎಫ್​ಗೆ ಯಾವುದೇ ಸಂಬಂಧವಿಲ್ಲ. ಸಿನಿಮಾ ವೀಕ್ಷಣೆ ಬಳಿಕ ಎಲ್ಲವೂ ತಿಳಿಯಲಿದೆ ಎಂದು ತಿಳಿಸಿದ್ದಾರೆ.