ಕೆ.ಜಿ.ಎಫ್.​ ಮೂರನೇ ದಿನಕ್ಕೆ 60 ಕೋಟಿ ಗಳಿಕೆ: ತಮಿಳು ನೆಲದಲ್ಲಿ ಭರ್ಜರಿ ಓಟ

ಬೆಂಗಳೂರು: ಯಶ್​ ಅಭಿನಯದ “ಕೆ.ಜಿ.ಎಫ್​. ಚಾಪ್ಟರ್​ 1” ಚಿತ್ರ ಮೂರನೇ ದಿನಕ್ಕೆ 22.4 ಕೋಟಿ ರೂ. ಗಳಿಸಿದೆ. ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಹಿಂದಿಯಲ್ಲಿ ಮೂರನೇ ದಿನ ಅಂದರೆ ಭಾನುವಾರ 4.1 ರೂ.ಗಳಿಕೆ ಕಂಡಿದೆ. ಮೂರು ದಿನದಲ್ಲಿ ಕೆ.ಜಿ.ಎಫ್​.ನ ಒಟ್ಟು ಗಳಿಕೆಯ ಮೊತ್ತ 59.61 ಕೋಟಿ ರೂ. ಆಗಿದೆ.

ಚಿನ್ನದ ಗಣಿಯ ಕಥೆಯನ್ನೊಳಗೊಂಡ ಪ್ರಶಾಂತ್​ ನೀಲ್​ ನಿರ್ದೇಶನ ಕೆ.ಜಿ.ಎಫ್.​ ಚಲನಚಿತ್ರ ಡಿ.21ರಂದು ಬಿಡುಗಡೆಯಾಗಿ ಮೊದಲ ದಿನವೇ 18.1 ಕೋಟಿ ರೂಪಾಯಿ ಹಾಗೂ ಎರಡನೇ ದಿನ 19.2 ಕೋಟಿ ರೂ. ಸಂಗ್ರಹವಾಗಿತ್ತು. ಈ ವಾರ ಇನ್ನೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕೆ.ಜಿ.ಎಫ್. ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಟ್ವೀಟ್​ ಮಾಡಿರುವ ಬಾಲಿವುಡ್​ ಟ್ರೆಂಡ್ ವಿಮರ್ಶಕ ತರಣ್​ ಆದರ್ಶ್​ ಅವರು, ಸಿನಿಮಾದ ಮೂರು ದಿನಗಳ ಆದಾಯವನ್ನು ತಿಳಿಸಿದ್ದಾರೆ.

ತಮಿಳು ನೆಲದಲ್ಲಿ ಉತ್ತಮ ಪ್ರದರ್ಶನ
ಕೆ.ಜಿ.ಎಫ್.​ಗೆ ತಮಿಳುನಾಡಿನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ತಮಿಳು ಭಾಷೆಯಲ್ಲಿ ಮೊದಲ ದಿನ 50 ಥಿಯೇಟರ್​ಗಳಲ್ಲಿ ಬಿಡುಗಡೆ ಕಂಡಿತ್ತು. ಎರಡನೇ ದಿನ 65ಕ್ಕೆ ಏರಿತ್ತು. ಈಗ ಒಟ್ಟು 100 ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಗೊಳ್ಳುತ್ತಿದೆ. ಚೆನ್ನೈನಲ್ಲೂ ಮೊದಲ ದಿನ 14 ಶೋ ಮಾತ್ರ ಇತ್ತು. ನಾಲ್ಕನೇ ದಿನ 36 ಶೋ ಗೆ ಏರಿಕೆ ಕಂಡಿದೆ ಎನ್ನಲಾಗಿದೆ.

ಅಭಿಮಾನಿಗಳ ಪ್ರತಿಕ್ರಿಯೆ ಶೇರ್​ ಮಾಡಿದ ಯಶ್​
ಕೆ.ಜಿ.ಎಫ್. ಚಿತ್ರದ ಬಗ್ಗೆ ಅದನ್ನು ವೀಕ್ಷಿಸಿದ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಸಿನಿಮಾ ಬಗ್ಗೆ ಆಡಿದ ಒಳ್ಳೆಯ ಮಾತುಗಳ ವಿಡಿಯೋವನ್ನು ಯಶ್​ ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

Thank you for all the love and support! #KGF Excel Entertainment Hombale Films Lahari Music Ritesh Sidhwani Farhan Akhtar PrashanthNeel #AAFilms #VKiraigdur

Yash ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಡಿಸೆಂಬರ್ 23, 2018

Leave a Reply

Your email address will not be published. Required fields are marked *