ಕೆ.ಜಿ.ಎಫ್​ ನೂರು ದಿನ ಪ್ರದರ್ಶನ ಕಾಣಲೆಂದು ಪುಣೆಯ ಗಣೇಶನಿಗೆ ಪೂಜೆ ಸಲ್ಲಿಸಿದ ರಾಯಚೂರಿನ ಅಭಿಮಾನಿ

ರಾಯಚೂರು: ಕೆ.ಜಿ.ಎಫ್​ ಈಗಾಗಲೇ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಯಶ್​ ಅಭಿಮಾನಿಗಳಂತೂ ಫುಲ್​ ಖುಷಿಯಾಗಿದ್ದಾರೆ.

ಈ ಮಧ್ಯೆ ರಾಯಚೂರಿನ ಅಭಿಮಾನಿ ರಾಘವೇಂದ್ರ ಎಂಬುವರು ಕೆ.ಜಿ.ಎಫ್​ ನೂರಕ್ಕೂ ಹೆಚ್ಚು ದಿನ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿ ಪುಣೆಯ ಗಣಪತಿ ದೇವಾಲಯದಲ್ಲಿ ಪೂಜೆ ಮಾಡಿದ್ದಾರೆ.

ಯಶ್​ ಭಾವಚಿತ್ರವಿರುವ ಕೆಜಿಎಫ್​ ಚಿತ್ರದ ಫೋಟೋ ಇಟ್ಟು ಪುಣೆಯ ಗಣಪತಿ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ನಡೆಸಿದ್ದಾರೆ.

ಪುಣೆಯ ಗಣಪತಿ ದೇವಸ್ಥಾನ ಪ್ರಸಿದ್ಧವಾಗಿದ್ದು ಬಾಲಿವುಡ್ ದಿಗ್ಗಜರಾದ ಅಮಿತಾಬ್​ ಬಚ್ಚನ್​, ಸಲ್ಮಾನ್​ ಖಾನ್​, ಶಾರುಖ್​ಖಾನ್​ ಸೇರಿ ಹಲವು ನಾಯಕರು ಈ ದೇವಾಲಯದ ಗಣೇಶನಿಗೆ ಪೂಜೆ ಸಲ್ಲಿಸುತ್ತಾರೆ. ರಾಘವೇಂದ್ರ ಅವರು ಈ ಗಣೇಶನ ಪಾದದಲ್ಲಿ ಕೆಜಿಎಫ್​ ಚಿತ್ರದ ಫೋಟೋ ಇಟ್ಟು ಚಿತ್ರ ಶತದಿನ ಪೂರೈಸಲಿ ಎಂದು ಪ್ರಾರ್ಥನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)