ವಿಜಯವಾಣಿ ಸುದ್ದಿಜಾಲ ಬೆಂಗಳೂರು
“ಕೆಜಿಎ್’ ಸರಣಿಯಲ್ಲಿ ರಾಕಿ ಭಾಯ್ ತಾಯಿ ಶಾಂತಮ್ಮ ಪಾತ್ರದಲ್ಲಿ ಮಿಂಚಿದ್ದ ನಟಿ ಅರ್ಚನಾ ಜೋಯಿಸ್ ಸದ್ಯ ಕಲರಿಪಾಯಟ್ ಕಲಿಯುತ್ತಿದ್ದಾರೆ. ಸುಮಾರು 15 ದಿನಗಳ ಕಾಲ ತಿರುವನಂತಪುರದಲ್ಲಿ ತರಬೇತಿ ಪಡೆದು ಇತ್ತೀಚೆಗಷ್ಟೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಹಾಗಂತ “ಕ್ಷೇತ್ರಪತಿ’ ನಟಿ “ಘೋಸ್ಟ್’ನಂತಹ ಮತ್ತೊಂದು ಆ್ಯಕ್ಷನ್ ಡ್ರಾಮಾದಲ್ಲಿ ಫೈಟ್ಸ್ ಮಾಡಲು ತಯಾರಿ ನಡೆಸಿದ್ದಾರೆ ಅಂತಲ್ಲ. ಬದಲಾಗಿ, “ಹೊಸತನ್ನು ಕಲಿಯುವ ಉತ್ಸಾಹ’ ಅವರನ್ನು ಕಲರಿ ಕಲಿಯುವಂತೆ ಮಾಡಿದೆಯಂತೆ.
ಈ ಬಗ್ಗೆ ಅರ್ಚನಾ, “ನಾನು ೈನ್ ಆರ್ಟ್ಸ್ನಲ್ಲಿ ಮೂರು ವರ್ಷ ಬ್ಯಾಚುಲರ್ ಆ್ ಕೋರಿಯಾಗ್ರಫಿ ಓದುವಾಗ ಭಾರತೀಯ ಸಮರಕಲೆಯ ಬಗ್ಗೆಯೂ ಸ್ವಲ್ಪ ಕಲಿತಿದ್ದೆ. ಆಗಿನಿಂದಲೂ ಕಲರಿಯ ಬಗ್ಗೆ ಆಸಕ್ತಿ ಇತ್ತು. ಆದರೆ, ಎಲ್ಲಿ ಹೋಗುವುದು? ಹೇಗೆ ಕಲಿಯುವುದು? ಅಂತ ಮಾಹಿತಿ ಇರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಗೆಳೆಯರ ಮೂಲಕ ತಿರುವನಂತಪುರದಲ್ಲಿ ಇರುವ ವಿಕೆಎಂ ಕಲರಿ ಶಾಲೆಯ ಬಗ್ಗೆ ತಿಳಿಯಿತು. ತಕ್ಷಣ ಅಪ್ಪ, ಅಮ್ಮ, ಪತಿಗೆ ವಿಷಯ ತಿಳಿಸಿ ಹೊರಟುಬಿಟ್ಟೆ. ನಾನು ಶಾಲೆ ಮತ್ತು ಕಾಲೇಜಿನ ಸಮಯದಲ್ಲಿ ಮನೆಯಿಂದಲೇ ಓಡಾಡುತ್ತಿದ್ದೆ. ಹೊರಗಿದ್ದು ಓದುವ, ಕಲಿಯುವ ಅನುಭವ ಇರಲಿಲ್ಲ. ಆ ಅನುಭವವೂ ದೊರೆಯಿತು’ ಎಂದು ಹೇಳಿಕೊಳ್ಳುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ ಒಂದೂವರೆ ತಾಸಿನಂತೆ, ದಿನಕ್ಕೆ ಮೂರು ತಾಸು ಕಲರಿ ತರಬೇತಿ ಪಡೆದಿರುವ ಅರ್ಚನಾ, ವರ್ಷಕ್ಕೆ ಮೂರು ಬಾರಿ ಹೋಗಿ ಮತ್ತಷ್ಟು ಕಲಿಯುವ ನಿರೀೆ ವ್ಯಕ್ತಪಡಿಸುತ್ತಾರೆ.
ಕಲಿಕೆಗೆ ಕೊನೆಯಿಲ್ಲ
ಭರತನಾಟ್ಯ ಪ್ರವಿಣೆಯಾಗಿರುವ ಅರ್ಚನಾ ಸದ್ಯ ಕಲರಿ ಕಲಿಯುತ್ತಿದ್ದು, ಮುಂದಿನ ದಿನಗಳಲ್ಲಿ ಈಜು ಮತ್ತು ಯೋಗ ಕಲಿಯಲೂ ಪ್ಲಾ$್ಯನ್ ಮಾಡಿಕೊಂಡಿದ್ದಾರೆ. “ಮೊದಲು ಜಿಮ್ ನಂಬುತ್ತಿರಲಿಲ್ಲ. ಈಗ ನಾನು, ಪತಿ ಶ್ರೇಯಸ್ ಇಬ್ಬರೂ ಜಿಮ್ಗೆ ಹೋಗುತ್ತಿದ್ದೇವೆ. ಡಾನ್ಸ್, ಯೋಗ, ಮಾರ್ಷಲ್ ಆರ್ಟ್ಸ್, ವರ್ಕೌಟ್ ಮಾಡುವುದರಿಂದ ದೇಹದ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಹೀಗಾಗಿ ಕಲಿಕೆ ನಿಲ್ಲಿಸಬಾರದು’ ಎನ್ನುತ್ತಾರೆ.
ಸದ್ಯದರಲ್ಲೇ ಸಿಹಿ ಸುದ್ದಿ
ಕಳೆದ ವರ್ಷ “ಹೊಂದಿಸಿ ಬರೆಯಿರಿ’, “ಕ್ಷೇತ್ರಪತಿ’, “ಘೋಸ್ಟ್’ ಚಿತ್ರಗಳ ಜತೆಗೆ “ಮ್ಯಾನ್ಷನ್ 24′ ಎಂಬ ತೆಲುಗು ವೆಬ್ಸರಣಿಯಲ್ಲೂ ಅರ್ಚನಾ ನಟಿಸಿದ್ದರು. ಇದೀಗ “ಯುದ್ಧಕಾಂಡ’ ಚಿತ್ರದಲ್ಲಿ ಅವರು ಅಜೇಯ್ ರಾವ್ಗೆ ನಾಯಕಿಯಾಗಿದ್ದು, ಸದ್ಯ ಸಿನಿಮಾ ರಿಲೀಸ್ಗೆ ರೆಡಿಯಿದೆ. “ಇತ್ತೀಚೆಗೆ ಒಂದು ಇಂಟರೆಸ್ಟಿಂಗ್ ಕಥೆ ಬಂದಿದೆ. ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆಯಾದರೆ ಉತ್ತಮ. ಕನ್ನಡದ ಜತೆಗೆ ತಮಿಳಿನಲ್ಲೂ ಈಗೀಗ ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಆದರೆ, ನಾನು ಸ್ವಲ್ಪ ಸಮಯ ತೆಗೆದುಕೊಂಡು ಓಕೆ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.