ವಿದೇಶಗಳ 375 ಚಿತ್ರಮಂದಿರಗಳಲ್ಲಿ ಕೆ.ಜಿ.ಎಫ್​. ಬಿಡುಗಡೆ; ಸ್ಯಾಂಡಲ್​ವುಡ್​ಗೆ ಇದು ಹೊಸ ದಾಖಲೆ

ಬೆಂಗಳೂರು: ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವ ಕೆ.ಜಿ.ಎಫ್.​ ಸಿನಿಮಾ ಈಗಾಗಲೇ ಹಲವು ರೀತಿಯಲ್ಲಿ ಸುದ್ದಿ ಮಾಡಿದೆ. ಹೊರದೇಶಗಳಲ್ಲಿ ಒಟ್ಟು 375 ಚಿತ್ರಮಂದಿರಗಳಲ್ಲಿ ಕೆ.ಜಿ.ಎಫ್.​ ಬಿಡುಗಡೆಯಾಗುತ್ತಿದ್ದು ಸ್ಯಾಂಡಲ್​ವುಡ್​ ಮಟ್ಟಿಗೆ ಇದೊಂದು ಹೊಸ ದಾಖಲೆಯಾಗಿದೆ.

ಜರ್ಮನಿಯಲ್ಲೂ ಕೆ.ಜಿ.ಎಫ್.​ ಇಂದು ಬಿಡುಗಡೆಯಾಗಿದೆ. ಬುಕಿಂಗ್​ ಆದ ಎರಡು ಗಂಟೆಗಳಲ್ಲೇ ಟಿಕೆಟ್​ ಪೂರ್ತಿ ಮಾರಾಟ ಆಗಿವೆ.

ನರ್ತಕಿಯಲ್ಲಿ ನಾಳೆ
ಕೆ.ಜಿ. ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ಕೆ.ಜಿ.ಎಫ್.​ ರಿಲೀಸ್​ ಆಗಲಿದ್ದು, ಇದೇ ಮುಖ್ಯ ಚಿತ್ರಮಂದಿರವಾಗಿದ್ದು ಅಭಿಮಾನಿಗಳು ಟಿಕೆಟ್​ಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದಾರೆ.

ಟಿಕೆಟ್​ ಸಿಗದಿದ್ದಕ್ಕೆ ಥಿಯೇಟರ್​ ಮಾಲೀಕರ ಮೇಲೆ ಕೂಡ ಬೇಸರ ಮಾಡಿಕೊಂಡಿದ್ದಾರೆ. ಗುರುವಾರ ಟಿಕೆಟ್​ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಯಾರಿಗೂ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವರ ಪೂಜೆ
ನಟ ಯಶ್ ಅಭಿನಯದ ಕೆ.ಜಿ.ಎಫ್​.​ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ಪೂಜೆ ನಡೆಸಿದ್ದಾರೆ. ಕಬ್ಬನ್​ಪಾರ್ಕ್​ ಬಳಿಯ ಶಾರದ ಚಿತ್ರಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಈ ಚಿತ್ರಮಂದಿರದಲ್ಲಿಯೂ ಬೆಳಗ್ಗೆ 6ಗಂಟೆಯಿಂದಲೇ ಪ್ರದರ್ಶನ ಆರಂಭಗೊಳ್ಳಲಿದೆ.