ಕ್ರಮ ಸಂಖ್ಯೆ ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗ; ಸಿಟ್ಟಾದ ಕೆಜಿಎಫ್ ಬಾಬು ಬೆಂಬಲಿಗರು

ಬೆಂಗಳೂರು: ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗ ವಿರುದ್ಧ ಕೆಜಿಎಫ್ ಬಾಬು ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆ 12 ಆಗಿದ್ದು ಚುನಾವಣಾ ಆಯೋಗ ಅದನ್ನು 13 ಎಂದು ತಪ್ಪಾಗಿ ದಾಖಲಿಸಿದೆ. ಈ ಹಿನ್ನೆಲೆ ಕೆಜಿಎಫ್ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.   ಬೂತ್ ಹೊರಭಾಗದಲ್ಲಿ ಆಯೋಗದಿಂದ ಅಭ್ಯರ್ಥಿಗಳ ವಿವರ ಪಟ್ಟಿ ಪ್ರಕಟ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಕ್ರಮ ಸಂಖ್ಯೆ12 ರ ಬದಲು 13 ಎಂದು ಚುನಾವಣಾ ಆಯೋಗ ಯಡವಟ್ಟು ಮಾಡಿಕೊಂಡಿದೆ.