ಆರೋಗ್ಯ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳು ಖಾಲಿ: ಬಡ್ತಿಯಿಂದ ವೈದ್ಯರು ವಂಚಿತ

ಬೆಂಗಳೂರು:ಹಲವು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳು ಖಾಲಿ ಉಳಿದಿರುವ ಪರಿಣಾಮ ದೈನಂದಿನ ಆಡಳಿತ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗುತ್ತಿದೆ.

ಇಲಾಖೆಯಲ್ಲಿ 5 ವಿಭಾಗೀಯ ಸಹ ನಿರ್ದೇಶಕ, 8 ಜಂಟಿ ನಿರ್ದೇಶಕ, 4 ಹೆಚ್ಚುವರಿ ನಿರ್ದೇಶಕ ಸೇರಿ ಒಟ್ಟು 17 ವಿವಿಧ ಪ್ರಮುಖ ಹುದ್ದೆಗಳು ಖಾಲಿ ಉಳಿದಿವೆ. ಇದನ್ನೇ ನೆಪ ಮಾಡಿಕೊಂಡ ಅರ್ಹತೆ ಇಲ್ಲದ ಅಧಿಕಾರಿಗಳು, ವಿಭಾಗೀಯ ಸಹ ನಿರ್ದೇಶಕ, ಜಂಟಿ ಸೇರಿ ಇತರೆ ನಿರ್ದೇಶಕ ಹುದ್ದೆಗಳಿಗೆ ಹೆಚ್ಚುವರಿ ಪ್ರಭಾರಿಯಾಗಿ ನೇಮಕವಾಗುತ್ತಿದ್ದಾರೆ.ಒಬ್ಬ ಅಧಿಕಾರಿ 2-3 ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ಮಾಡುತ್ತಿರುವುದುಂಟು. ಸಭೆ ಮತ್ತು ಮೀಟಿಂಗ್​ ಇದೆಯೆಂದು ನೆಪ ಮಾಡಿಕೊಂಡು ಕೆಲವರು ಎರಡು ಕಡೆಗಳಲ್ಲಿ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಹಿನ್ನೆಲೆಯಲ್ಲಿ ನೂರಾರು ಕಡತಗಳ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಎರಡು ಕಡೆಗಳಲ್ಲೂ ಸರ್ಕಾರಿ ಸೌಲಭ್ಯವನ್ನು ಬಳಸಿಕೊಳ್ಳುವ ಅಧಿಕಾರಿಗಳ ಅಂಧಾದರ್ಬಾರ್​ಗೆ ಬ್ರೇಕ್​ ಬೀಳುತ್ತಿಲ್ಲ.

ಬಡ್ತಿ ಸಿಗದೆ ನಿವೃತ್ತಿ
ಪ್ರತಿ ವರ್ಷದ ವಿವಿಧ ಶ್ರೇಣಿಯ ಹತ್ತಾರು ವೈದ್ಯರು ವಯೋನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿಗೆ 2&3 ವರ್ಷ ಇರುವ ಮುನ್ನ ಬಡ್ತಿಗಾಗಿ ಕಾದು ಕುಳಿತಿರುವ ಅರ್ಹ ವೈದ್ಯರು, ಪದ್ಧೋನ್ನತಿಯಿಂದ ವಂಚಿತರಾಗಿ ನಿವೃತ್ತರಾಗುತ್ತಿದ್ದಾರೆ. ಅರ್ಹತೆ ಇರುವ ವೈದ್ಯರನ್ನು ಹಿರಿತನ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ತಯಾರಿಸಿ ಜಂಟಿ ನಿರ್ದೇಶಕ, ವಿಭಾಗೀಯ ಸಹ ನಿರ್ದೇಶಕ, ಹೆಚ್ಚುವರಿಗೆ ನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕಿತ್ತು. ಇದ್ಯಾವ ಪ್ರಕ್ರಿಯೆ ನಡೆಯದೆ ಹಿನ್ನೆಲೆಯಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ತಜ್ಞ ವೈದ್ಯರಿಗೆ ಪದ್ಧೋನ್ನತಿ ಸಿಗದೆ ನಿರಾಸೆಯಾಗುತ್ತಿದ್ದಾರೆ.

ರಾಜ್ಯದಲ್ಲಿ ಮಳೆ ಇಳಿಮುಖ:ಹಲವೆಡೆ ಬಿಸಿಲು ವಾತಾವರಣ

1,531 ವೈದ್ಯಾಧಿಕಾರಿ ಹುದ್ದೆ ಖಾಲಿ
ರಾಜ್ಯದಲ್ಲಿ ಅನುಭವಿ ತಜ್ಞವೈದ್ಯರ ಕೊರತೆ ಕಾಡುತ್ತಿರುವ ಬೆನ್ನಲ್ಲೇ 1,531 ವೈದ್ಯಾಧಿಕಾರಿ ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮರೀಚಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಆರೋಗ್ಯಾಧಿಕಾರಿಗಳು, ಅನುಭವಿ ತಜ್ಞರು ಸೇರಿ ವಿವಿಧ ಶ್ರೇಣಿಯ ಹತ್ತಾರು ವೈದ್ಯರು ನಿವೃತ್ತಿಗೊಳ್ಳುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳನ್ನು ವೈದ್ಯರ ಅಭಾವ ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಖಾಲಿ ಇರುವ “ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ’ಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಅನುಮತಿ ನೀಡಲಾಗಿದೆ. ಆರೋಗ್ಯ ಇಲಾಖೆ ಮುಖೇನ ಸೇವಾನಿರತ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಬರುವವರನ್ನು ತಜ್ಞತೆ ಹುದ್ದೆಗೆ ನೇಮಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ವೈದ್ಯರ ಕೊರತೆ ನೀಗಿಸಲು ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ.

ಶೇ.30 ಹುದ್ದೆ ಖಾಲಿ
ಆರೋಗ್ಯ ಇಲಾಖೆಯಲ್ಲಿ ತಜ್ಞವೈದ್ಯರು 2,832, ವೈದ್ಯರು 3,046, ಶ್ರೂಷುಕಿ ​ 8,471, ಲ್ಯಾಬ್​ ತಂತ್ರಜ್ಞರು 2,411, ಫಾರ್ಮಸಿಸ್ಟ್​ 2,932, ಕಿರಿಯ ಸಹಾಯಕರು 9,850, ಎ್​ಡಿಎ 2,673, ಎಸ್​ಡಿಎ 2,559 ಮತ್ತು ಡಾಟಾ ಎಂಟ್ರಿ 1,432 ಸೇರಿ 36,206 ಹುದ್ದೆಗಳ ಮಂಜೂರಾದ ಪೈಕಿ 25, 658 ಹುದ್ದೆಗಳು ಭರ್ತಿಯಾಗಿದ್ದು, 10, 548 ಹುದ್ದೆಗಳು ಖಾಲಿ ಉಳಿದಿವೆ. ಅಲ್ಲದೆ, ಆರೋಗ್ಯ ಇಲಾಖೆಯಲ್ಲಿ ತಜ್ಞರು, ವೈದ್ಯರು, ಸ್ಟಾಫ್​​​ನರ್ಸ್​, ಲ್ಯಾಬ್​ ತಂತ್ರಜ್ಞರು, ಫಾರ್ಮಸಿಸ್ಟ್​, ಕಿರಿಯ ಸಹಾಯಕರು, ಎ್​ಡಿಎ, ಎಸ್​ಡಿಎ ಮತ್ತು ಡಾಟಾ ಎಂಟ್ರಿ ಸೇರಿ ನಿಯೋಜಿತ ಹುದ್ದೆಗಳಲ್ಲಿ ಶೇ.25ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಗೆ ಕಷ್ಟವಾಗಿದೆ.

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…