ಹುಬ್ಬಳ್ಳಿ: ಇಲ್ಲಿಯ ರೇಣುಕಾನಗರದ ಕೇಶವ ವಿದ್ಯಾ ಕೇಂದ್ರ ಶಾಲೆಯ 10ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ “ದೀಕ್ಷಾ’ ಶನಿವಾರ ಏರ್ಪಡಿಸಲಾಗಿತ್ತು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರಜಿ ಮಾತನಾಡಿ, ಮಕ್ಕಳ ಬುದ್ಧಿಗೆ ಶಿಕ್ಷಣ ಮತ್ತು ಮನಸ್ಸಿಗೆ ಸಂಸ್ಕಾರದ ಅವಶ್ಯಕ ಇದೆ. ಪೋಷಕರು ಆದರ್ಶಯುತ ಜೀವನ ನಡೆಸಬೇಕು. ಅದರ ಪರಿಣಾಮವಾಗಿ ಮಕ್ಕಳು ಸತಜೆಯಾಗುವರು. ಜೀವನದ ಮೊದಲ ಶಿಕ್ಷಣ ಸತ್ಯ ಹೇಳುವುದು ಮತ್ತು ಧರ್ಮ ಆಚರಣೆ ಎಂದು ತಿಳಿಸಿದರು.
ವಿದ್ಯಾಥಿರ್ಗಳು ದೇಶ ಮೊದಲು ನಂತರ ಕುಟುಂಬ, ಕೊನೆಗೆ ತನ್ನ ಜೀವನ ನಿರ್ವಹಣೆ ಎಂದು ಸಂಕಲ್ಪ ಮಾಡಿದರು.
ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಕೌಜಲಗಿ, ಆಡಳಿತಾಧಿಕಾರಿ ಶ್ರೀಧರಜೀ, ಮುಖ್ಯೋಪಾಧ್ಯಾಯಿನಿ ಶರಾವತಿ ಇತರರು ಉಪಸ್ಥಿತರಿದ್ದರು. ವಿನಾಯಕ ಗುರೂಜೀ ಕಾರ್ಯಕ್ರಮ ನಿರ್ವಹಣೆ ಮಾಡಿದರು.