ದೇಶ ರಕ್ಷಣೆಗೆ ಸೇನೆಗೆ ಸೇರಿ

ಕೆರೂರ: ಯುವಕರು ದೇಶ ಸೇವೆ ಮಾಡಲು ಮುಂದಾದಾಗ ಮಾತ್ರ ದೇಶವನ್ನು ಭಯೋತ್ಪಾದಕರಿಂದ ರಕ್ಷಿಸಲು ಸಾಧ್ಯ ಎಂದು ಜಿಲ್ಲಾ ಸಮಗಾರ ಹರಳಯ್ಯ ಸಮಾಜ ಮುಖಂಡ ಸುರೇಶ ಕಾಂಬಳೆ ಹೇಳಿದರು.

ಶ್ರೀನಿಧಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಹಾಗೂ ನೆಹರು ಯುವ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಜರುಗಿದ ಭಯೋತ್ಪಾದನೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರವ್ಯಾಪಿ ಸಮಸ್ಯೆಯಾಗಿರುವ ಭಯೋತ್ಪಾದನೆ ಹೋಗಲಾಡಿಸಲು ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಹನಮಂತ ಕಟ್ಟಿಮನಿ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆ ಅಧ್ಯಕ್ಷ ಶ್ರೀಧರ ಕಾಂಬಳೆ, ಗುಂಡಪ್ಪ ಬೀಳಗಿ, ನಾಗರಾಜ ಚಿಟಗುಬ್ಬಿ, ಶಿವು ಜಾಲಗಾರ, ಅಜುರುದ್ದೀನ ಹದ್ಲಿ, ಪಾಂಡುರಂಗ ಗದುಗಿನ, ಹನುಮಂತ ಹಡಪದ, ಸುನೀಲ ಕಾಂಬಳೆ, ಮಂಜುನಾಥ ಹೀರೆಮಠ ಇತರರಿದ್ದರು. ಶಕೀಲ ಅತ್ತಾರ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *