VIDEO| ಕರೊನಾ ಡ್ಯಾನ್ಸ್​ಗೆ ಪೊಲೀಸರ ಹೆಜ್ಜೆ; ವೈರಲ್​ ಆಯ್ತು ಕೇರಳ ಪೊಲೀಸರು ಕೈ ತೊಳೆಯೋ ಡ್ಯಾನ್ಸ್​

blank

ತಿರುವನಂತಪುರ: ಕರೊನಾ ವೈರಸ್​ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಅನೇಕ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅನೇಕರು ಕರೊನಾ ವೈರಸ್​ ಕುರಿತಾಗಿ ವಿಶೇಷ ಹಾಡುಗಳನ್ನು ತಯಾರಿಸುತ್ತಿದ್ದರೆ ಇನ್ನು ಅನೇಕರು ಅದಕ್ಕೆಂದೇ ವಿಶೇಷ ರೀತಿಯಲ್ಲಿ ನೃತ್ಯ ಮಾಡಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಕೇರಳ ಪೊಲೀಸರು ಕೈ ತೊಳೆಯುವುದು ಹೇಗೆ ಎನ್ನುವುದನ್ನು ನೃತ್ಯದ ಮೂಲಕ ಹೇಳಿಕೊಟ್ಟಿದ್ದು ಆ ವಿಡಿಯೋ ಸಖತ್​ ವೈರಲ್​ ಆಗಿದೆ.

ಕೇರಳದ ರಾಜ್ಯ ಪೊಲೀಸ್​ ಮೀಡಿಯಾ ಸೆಂಟರ್​ ಒಂದು ವಿಶೇಷವಾದ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ಆರು ಜನ ಪೊಲೀಸ್​ ಸಿಬ್ಬಂದಿ ಮುಖಕ್ಕೆ ಮಾಸ್ಕ್​ ತೊಟ್ಟುಕೊಂಡು ಅಯ್ಯಪ್ಪನೂ ಕೋಶಿಯೂಂ​ ಸಿನಿಮಾದ ಕಲಕ್ಕಥ ಹಾಡಿಗೆ ನೃತ್ಯ ಮಾಡಿದ್ದಾರೆ. 1 ನಿಮಿಷ 25 ಸೆಕೆಂಡ್​ ಇರುವು ಈ ವಿಡಿಯೋದಲ್ಲಿ ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಯಾವ ರೀತಿಯಲ್ಲಿ ಕೈಗಳನ್ನು ತೊಳೆಯಬೇಕು ಎನ್ನುವುದನ್ನು ಪೊಲೀಸರು ತೋರಿಸಿಕೊಟ್ಟಿದ್ದಾರೆ.

ಮಂಗಳವಾರದಂದು ಸಂಜೆ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು ಇದೀಗ ವಿಡಿಯೋ ಸಖತ್​ ವೈರಲ್​ ಆಗಿದೆ. ಪೋಸ್ಟ್​ ಮಾಡಿದ ಕೇವಲ 17 ಗಂಟೆಗಳಲ್ಲಿ 9,37,000ಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ರಕ್ಷಣೆ ಮಾಡುವ ಪೊಲೀಸರು ಆರೋಗ್ಯದ ಬಗ್ಗೆಯೂ ಇಷ್ಟೊಂದು ಕಾಳಜಿ ವ್ಯಕ್ತ ಪಡಿಸಿರುವುದು ಅನೇಕರಿಂದ ಮೆಚ್ಚುಗೆ ಪಡೆದುಕೊಂಡಿದೆ. (ಏಜೆನ್ಸೀಸ್​)

https://www.facebook.com/statepolicemediacentrekerala/videos/240901263736432/

FACT CHECK| ಹೆಚ್ಚು ನೀರು ಕುಡಿದರೆ ಕರೊನಾ ಬರಲ್ವಾ? ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ವೈರಸ್​ ಹೊರಟು ಹೋಗುತ್ತಾ?

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಹೈ ಡ್ರಾಮಾ: ಉಪವಾಸ ಸತ್ಯಾಗ್ರಹ ಘೋಷಿಸಿದ ದಿಗ್ವಿಜಯ ಸಿಂಗ್, ಬೆಂಬಲಕ್ಕೆ ನಿಂತ ಡಿಕೆಶಿ

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…