More

    ಪೌರತ್ವ ಕಾಯ್ದೆಗೆ ಸಮ್ಮತಿಸಿದ ಹಿಂದು ಕುಟುಂಬಕ್ಕೆ ನೀರಿಲ್ಲ: ಟ್ವೀಟ್​ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ದೂರು

    ಮಲಪ್ಪುರಂ (ಕೇರಳ): ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಧರ್ಮ, ಜನಾಂಗ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಸಂಸದೆ ಶೋಭಾ ಅವರು ಜನವರಿ 22ರಂದು ಟ್ವೀಟ್​ ಮಾಡಿದ್ದರು. ಅದರಲ್ಲಿ ಮಲಪ್ಪುರಂ ಬಳಿಯ ಕುಟ್ಟಿಪುರಂ ಗ್ರಾಮದ ಹಿಂದುಗಳಿಗೆ ನೀರು ಪೂರೈಕೆ ಮಾಡಿಲ್ಲ. ಅದಕ್ಕೆ ಕಾರಣ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮ್ಮತಿಸಿದ್ದರಿಂದ ಅವರಿಗೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

    ಇದನ್ನು ಆಧಾರವಾಗಿಟ್ಟುಕೊಂಡು ಸಂಸದೆ ಶೋಭಾ ವಿರುದ್ಧ ದೂರು ದಾಖಲಾಗಿದೆ. ಜನವರಿ 22 ರಂದು ಸಂಸದೆ ಶೋಭಾ ಅವರು ಮಾಡಿದ ಟ್ವೀಟ್​ ಇಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts