More

    ಮಸೀದಿಯೊಳಗೆ ಮಂಟಪ ನಿರ್ಮಿಸಿ ಹಿಂದು ಜೋಡಿಗೆ ಮದುವೆ: ವಧುವಿಗೆ 10 ಗ್ರಾಂ ಚಿನ್ನ, 2 ಲಕ್ಷ ರೂಪಾಯಿ ಉಡುಗೊರೆ

    ಕೊಚ್ಚಿನ್​: ಹಿಂದು ಜೋಡಿಗೆ ಸರಳವಾಗಿ ಹಿಂದು ಸಂಪ್ರದಾಯದಂತೆ ಮದುವೆ ಕಾರ್ಯ ನೆರವೇರಿಸಿದ ವಿಶೇಷ ಕ್ಷಣಕ್ಕೆ ಕೇರಳದ ಮಸೀದಿಯೊಂದು ಸಾಕ್ಷಿಯಾಗಿದೆ.

    ಭಾನುವಾರ ಕೇರಳದ ಅಲಪ್ಪುಳ ಸಮೀಪದ ಮುಸ್ಲಿಂ ಜಮಾತ್​ ಮಸೀದಿಯಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದವರ ಸಮ್ಮುಖದಲ್ಲಿ ವಿವಾಹ ಸಂಭ್ರಮ ನೆರವೇರಿದೆ. ಇದಕ್ಕಾಗಿ ಮಸೀದಿಯೊಳಗೆ ಸಣ್ಣ ಮಂಟಪವನ್ನು ನಿರ್ಮಿಸಲಾಗಿತ್ತು. ಮಧ್ಯಾಹ್ನ 12.15ಕ್ಕೆ ವಿವಾಹ ಮುಹೂರ್ತ ನೆರವೇರಿತು. ಎರಡು ಸಮುದಾಯವರು ನವ ಜೋಡಿಗೆ ಆಶೀರ್ವದಿಸಿದರು.

    ವಧು ಅಂಜು ಮತ್ತು ವರ ಶರತ್​ ಹಾರವನ್ನು ಬದಲಾಯಿಸಿಕೊಂಡು, ಹಿಂದು ಸಂಪ್ರಾದಯದಂತೆ ಮಸೀದಿಯ ಆವರಣದ ಒಳಗೆ ಪುರೋಹಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

    ಅಂದಹಾಗೆ ವಧು ಅಂಜು ಕಳೆದ ವರ್ಷ ಹೃದಯಾಘಾತದಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ. ಮೂವರು ಹೆಣ್ಣುಮಕ್ಕಳಲ್ಲಿ ಅಂಜು ಮೊದಲನೆಯವಳಾಗಿದ್ದಾಳೆ. ಪತಿಯ ನಿಧನದ ಬಳಿಕ ಅಂಜು ತಾಯಿ ಬಿಂದು ಅವರು ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾರೆ. ಹೀಗಾಗಿ ಮಗಳ ಮದುವೆಗೆ ಮಸೀದಿ ಸಮಿತಿಯ ನೆರವು ಕೋರಿದ್ದರು. ಇದಕ್ಕೆ ಸಮ್ಮತಿಸಿದ ಮಸೀದಿ ಸಮಿತಿ ಹಣ ನೀಡಿದ್ದಲ್ಲದೆ, ಮದುವೆಯನ್ನು ಮಸೀದಿಯೊಳಗೆ ಮಾಡಿಕೊಟ್ಟಿದ್ದಾರೆ.

    ವಧುವಿಗೆ ಮದುವೆ ಉಡುಗೊರೆಯಾಗಿ 10 ಸವರನ್​ ಚಿನ್ನ ಮತ್ತು 2 ಲಕ್ಷ ರೂ. ಹಣವನ್ನು ಸಮಿತಿ ನೀಡಿದೆ. ಮದುವೆಯನ್ನು ಸಂಪೂರ್ಣ ಹಿಂದು ಸಂಪ್ರದಾಯದಂತೆಯೇ ಮಾಡಿಸಿದ್ದಾರೆ. ಬಿರಿಯಾನಿ ಬದಲಾಗಿ ಸಸ್ಯಹಾರಿ ಊಟವನ್ನು ಉಣಬಡಿಸಲಾಯಿತು. ಸುಮಾರು 1000 ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಚೆರುವಳ್ಳಿ ಜಮಾತ್​ ಸಮಿತಿಯ ಕಾರ್ಯಾಧ್ಯಕ್ಷ ನುಜುಮುದೀನ್​ ಅಲುಮ್ಮೂಟಿಲ್​ ತಿಳಿಸಿದ್ದಾರೆ.

    ಈ ವಿಶೇಷ ಮದುವೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಗಮನ ಸೆಳೆದಿದ್ದು, ಫೇಸ್​ಬುಕ್​ನಲ್ಲಿ ನವಜೋಡಿಯ ಫೋಟೋ ಶೇರ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಧಾರ್ಮಿಕ ಸೌಹಾರ್ದತೆಯಂತಹ ಉದಾಹರಣೆಗಳನ್ನು ನಮ್ಮ ರಾಜ್ಯ ಸದಾ ಎತ್ತಿಹಿಡಿಯುತ್ತದೆ. ಈ ವಿವಾಹ ಸಮಾರಂಭ ನಮ್ಮ ಪರಂಪರೆಯ ಹೊಸ ಅಧ್ಯಾಯ ಎಂದು ವರ್ಣಿಸಿದ್ದಾರೆ.

    ಧರ್ಮದ ಹೆಸರಿನಲ್ಲಿ ಜನರನ್ನು ಪ್ರತೇಕಿಸಲು ಯತ್ನಿಸುತ್ತಿರುವ ಸಮಯದಲ್ಲಿ ಇಂತಹ ಜನರು ಅಡೆತಡೆಗಳನನ್ನು ಮೀರಿ ಇಂತಹ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಸ್ವಾಗಾತಾರ್ಹ ಎಂದು ಪರೋಕ್ಷವಾಗಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಬೊಟ್ಟು ಮಾಡಿದ್ದಾರೆ. ಮದುವೆ ಕಾರ್ಯಕ್ಕೆ ಸಹಕರಿಸಿ ಮಸೀದಿ ಸಮಿತಿಗು ಹಾಗೂ ನವಜೋಡಿಗೂ ಕೇರಳ ಸಿಎಂ ಶುಭಕೋರಿದ್ದಾರೆ. (ಏಜೆನ್ಸೀಸ್​)

    മതസാഹോദര്യത്തിന്റെ മനോഹരമായ മാതൃകകൾ കേരളം എക്കാലത്തും ഉയർത്തിപ്പിടിച്ചിട്ടുണ്ട്. ആ ചരിത്രത്തിലെ പുതിയൊരേടാണ് ഇന്ന്…

    Pinarayi Vijayan ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜನವರಿ 19, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts