ಕೇರಳ: ಮೊದಲ ಮಂಗಳಮುಖಿ ಪತ್ರಕರ್ತೆ ಹೈಡಿ ಸಾದಿಯಾ ಅವರು ಅಥರ್ವ ಮೋಹನ್ ಜತೆ ಇಂದು ಎರ್ನಾಕುಲಂನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕೇರಳ ರಾಜ್ಯದಲ್ಲಿ ನಡೆದ ಮಂಗಳಮುಖಿಯೊಂದಿಗಿನ ನಾಲ್ಕನೇ ಮದುವೆ ಇದಾಗಿದೆ. ಈ ಮದುವೆ ವಿಶೇಷ ಕಾಯ್ದೆಯಡಿ ನೋಂದಣಿಯಾಗಿದೆ.
2018ರಲ್ಲಿ ಇಶಾನ್ ಮತ್ತು ಸೂರ್ಯ ಎಂಬುವ ಮಂಗಳಮುಖಿಯ ಮದುವೆ ನಡೆದಿತ್ತು. ಇದು ವಿಶೇಷ ಕಾನೂನಿನಡಿ ನೋಂದಣಿಯಾಗಿದ್ದ ಮೊದಲ ಮದುವೆಯಾಗಿತ್ತು. ಈ ಸಮಾರಂಭದಲ್ಲಿ ಆಗಿನ ಸಚಿವರು ಮತ್ತು ಗಣ್ಯರು ಭಾಗವಹಿಸಿದ್ದರು. (ಏಜೆನ್ಸೀಸ್)