ನಮ್ಮದು ಜ್ಯಾತ್ಯತೀತ ಕ್ಯಾಂಪಸ್​​ ಎಂದು ಉತ್ತರ ಭಾರತ ವಿದ್ಯಾರ್ಥಿಗಳ ಸರಸ್ವತಿ ಪೂಜೆ ನಿರಾಕರಿಸಿದ ಕೇರಳ ಕಾಲೇಜು

ಕೊಚ್ಚಿನ್​: ಕೇರಳದ ಅಲಪುವಾ ಜಿಲ್ಲೆಯಲ್ಲಿರುವ ಕೊಚ್ಚಿನ್​ನ ಇಂಜಿನಿಯರಿಂಗ್​ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜೆ ಮಾಡಲು ಅನುಮತಿ ನಿರಾಕರಿಸಿರುವ ಬಗ್ಗೆ ಗುರುವಾರ ವರದಿಯಾಗಿದೆ.

ಸರಸ್ವತಿ ಪೂಜೆ ಮಾಡುವ ಉತ್ತರ ಭಾರತದ ವಿದ್ಯಾರ್ಥಿಗಳ ವಿನಂತಿಯನ್ನು ಉಪಕುಲಪತಿಗಳು ತಿರಸ್ಕರಿಸಿದ್ದಾರೆ. ನಮ್ಮದು ಜ್ಯಾತ್ಯತೀತ ಕ್ಯಾಂಪಸ್​ ಆದಾಗಿನಿಂದ ಕಾಲೇಜು ಆವರಣದೊಳಗೆ ಯಾವುದೇ ಧಾರ್ಮಿಕ ಆಚರಣೆ ಹಾಗೂ ಚಟುವಟಿಕೆಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ಕೊಚ್ಚಿನ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯ(CUSAT)ದ ಜಂಟಿ ರಿಜಿಸ್ಟ್ರಾರ್​ ಫೆ.1ರಂದು ನೀಡಿರುವ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ಇಂಜಿನಿಯರಿಂಗ್​ ಕಾಲೇಜು ಕಳೆದ ವರ್ಷವೇ ಕುಸ್ಯಾಟ್​ ಅಂಗಸಂಸ್ಥೆಗೆ ಸೇರಿದೆ. ಜನವರಿ 25 ರಂದು ಕ್ಯಾಂಪಸ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೋಮಾಂಸ ಕಟ್ಲೇಟ್​ಗಳನ್ನು ಸರ್ವ್​ ಮಾಡಿದ್ದರಿಂದ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಿಂದಾಗಿ ಅನಿವಾರ್ಯವಾಗಿ ಧಾರ್ಮಿಕ ಆಚರಣೆಯನ್ನು ರದ್ದುಗೊಳಿಸಲಾಗಿದೆ.

ಉತ್ತರ ಭಾರತದಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಭಾಗ ಎ ವಿಭಾಗದಲ್ಲಿದ್ದು, ಜನವರಿ 25ರಂದು ನಡೆದ ಸಮಿನಾರ್​ನಲ್ಲಿ ನಾವು ಸಸ್ಯಹಾರಿಗಳು ಎಂದು ಹೇಳಿದ ನಂತರವೂ ನಮಗೆ ಗೋಮಾಂಸವನ್ನು ಸರ್ವ್​ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಎ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಜನವರಿ 22ರಂದು ವಿರೋಧದ ನಡುವೆಯೂ ಸರಸ್ವತಿ ಪೂಜೆಯನ್ನು ಹಮ್ಮಿಕೊಂಡಿದ್ದರು. ಅದಕ್ಕೆ ಸೇಡು ತೀರಿಕೊಳ್ಳಲು ಗೋಮಾಂಸ ಸರ್ವ್​ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.(ಏಜೆನ್ಸೀಸ್​)