ಜೂ.2ರಂದು ಕೆಂಬನಿಗೆ ಸುವರ್ಣ ಸಂಭ್ರಮ

ಬೆಂಗಳೂರು: ನಿತ್ಯ ಲಕ್ಷಾಂತರ ಜನರು ಬಂದುಹೋಗುವ ಕೆಎಸ್​ಆರ್​ಟಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಜೂ.2ರಂದು 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಕುರಿತ ಅಪರೂಪದ ಮಾಹಿತಿ ಹಂಚಿಕೊಳ್ಳುವವರಿಗೆ ಉಚಿತ ಪ್ರಯಾಣದ ಅವಕಾಶ ನೀಡಲು ಮುಂದಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಸಾರ್ವಜನಿಕರನ್ನು ಭಾಗಿಯಾಗಿಸಲು ಕೆಎಸ್​ಆರ್​ಟಿಸಿ ಮುಂದಾಗಿದೆ. ಅದಕ್ಕಾಗಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ, ಇತಿಹಾಸ, ಚಿತ್ರಗಳು, ಕಥೆಗಳು, ಲೇಖನಗಳನ್ನು ಸಂಸ್ಥೆಗೆ ನೀಡುವಂತೆ ತಿಳಿಸಲಾಗಿದೆ. ಮೇ 25ರೊಳಗೆ [email protected], facebook/KSRTC.Karnataka, Twitter/KSRTC_jouney ಇಲ್ಲಿ ಹಂಚಿಕೊಳ್ಳಬೇಕು.

ಅದರಲ್ಲಿ ಉತ್ತಮ ಲೇಖನ, ಚಿತ್ರ, ಕಥೆ, ಮಾಹಿತಿಗೆ ಬಹುಮಾನ ನೀಡಲಾಗುತ್ತದೆ. ಅದರಂತೆ ಅಂಬಾರಿ ಡ್ರೀಮ್ ಕ್ಲಾಸ್ ಸ್ಲೀಪರ್ ಬಸ್​ನಲ್ಲಿ ಎರ್ನಾಕುಲಂ, ಪುಣೆ, ಸಿಕಂದರಾಬಾದ್ ಅಥವಾ ವಿಜಯವಾಡದಲ್ಲಿ ಯಾವುದಾದರೊಂದು ಸ್ಥಳಕ್ಕೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *