Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಜೇಸ್ಕಾಂ ಕಂದಾಯ ಶಾಖೆ ಆರಂಭಿಸಿ

Wednesday, 11.07.2018, 3:35 AM       No Comments

ಕೆಂಭಾವಿ: ಪುರಸಭೆ ಕೇಂದ್ರ ಸ್ಥಾನವಾದ ಕೆಂಭಾವಿ ಪಟ್ಟಣದಲ್ಲಿ ಜಿಸ್ಕಾಂನ ಕಂದಾಯ ಶಾಖೆ ಕಚೇರಿ ಆರಂಭಿಸುವ ಮೂಲಕ ವಿದ್ಯುತ್ ಸಮಸ್ಯೆ ಕೂಡಲೇ ಸ್ಪಂದಿಸಬೇಕು ಎಂದು ವಲಯ ಸಾರ್ವಜನಿಕರ ಒತ್ತಾಯವಾಗಿದೆ.

ಪಟ್ಟಣ ಸೇರಿ ವಲಯಾದ್ಯಂತ ವಿವಿಧ ಮೂಲಗಳಿಂದ ಇಲಾಖೆಗೆ ತಿಂಗಳಿಗೆ ಸುಮಾರು 30 ಲಕ್ಷ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಪಾವತಿಯಾಗುತ್ತಿದ್ದರೂ, ಗ್ರಾಹಕರ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕಂದಾಯ ಶಾಖೆ ಸ್ಥಾಪಿಸದೆ ಇರುವುದು ಹಲವರಲ್ಲಿ ಅನುಮಾನ ಮೂಡಿದೆ.

ರಾಷ್ಟ್ರೀಕೃತ ಬ್ಯಾಂಕ್, ಯುಕೆಪಿ ವಸತಿ ಗೃಹಗಳು, ಕೈಗಾರಿಕಾ ತರಬೇತಿ ಕೇಂದ್ರಗಳು, ಶಾಲೆ-ಕಾಲೇಜುಗಳು, ಆಸ್ಪತ್ರೆ ಸೇರಿ ವಲಯದಲ್ಲಿ ಸುಮಾರು 40ರಿಂದ 45 ಹಳ್ಳಿಗಳು ಒಳಪಟ್ಟಿವೆ. ಯಾವುದೇ ಗ್ರಾಹಕರ ವಿದ್ಯುತ್ ಬಿಲ್ ಮತ್ತು ಜೆಸ್ಕಾಂಗೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳಿದ್ದಲ್ಲಿ ಸುರಪುರನಲ್ಲಿರುವ ಜೆಸ್ಕಾಂ ಉಪ ವಿಭಾಗಕ್ಕೆ ಸಂಪಕರ್ಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಗುತ್ತಿಬಸವೇಶ್ವರ ಏತ ನೀರಾವರಿ ಹಾಗೂ ಮಲ್ಲಾಬಾದ್ ಏತ ನೀರಾವರಿಯಿಂದ 90ರಿಂದ 95 ಲಕ್ಷ ರೂ.ಗಳ ಬಿಲ್ ಸಂಗ್ರಹವಾಗುತ್ತಿದೆ ಎನ್ನಾಲಾಗಿದೆ. ಕೆಂಭಾವಿ ವಲಯ ಜಿಲ್ಲೆಯಲ್ಲಿ ಅತಿ ದೊಡ್ಡ ಶಾಖೆಯಾಗಿದ್ದು, ಜೆಸ್ಕಾಂ ಇಲಾಖೆಗೆ ಸಾಕಷ್ಟು ಆದಾಯ ತರುತ್ತಿದೆ. ಮಳೆ ಗಾಳಿಯಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದರೆ ತಕ್ಷಣ ಸರಿಪಡಿಸಲು ವಿದ್ಯುತ್ ಕಂಬಗಳ ಲಭ್ಯತೆ ಕೂಡ ಇಲ್ಲದಂತಾಗಿದೆ.

ಈಗಾಗಲೇ ಪಟ್ಟಣಕ್ಕೆ ಹೆಚ್ಚುವರಿ 3 ವಿದ್ಯುತ್ ಪರಿವರ್ತಕಗಳು ಮಂಜೂರಾಗಿದ್ದರು, ಕಂಬಗಳ ಕೊರತೆಯಿಂದ ಪರಿವರ್ತಕಗಳನ್ನು ಆಳವಡಿಸಿಲ್ಲ.
ಜೆಸ್ಕಾಂನ ವ್ಯವಸ್ಥಾಪಕ ನಿದರ್ೇಶಕರು ಈ ಕುರಿತು ಮುತುವಜರ್ಿ ವಹಿಸಿ ಪಟ್ಟಣದಲ್ಲಿ ಕಂದಾಯ ಶಾಖೆ ಸ್ಥಾಪಿಸಿ, ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಕಂಬಗಳ ಲಭ್ಯತೆಯನ್ನು ಒದಗಿಸಿ ಪರಿವರ್ತಕಗಳ ಅಳವಡಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪಟ್ಟಣದಲ್ಲಿ ಕಂದಾಯ ಶಾಖೆ ಸ್ಥಾಪನೆ ಕುರಿತು ಈಗಾಗಲೇ ಎಲ್ಲ ದಾಖಲೆಗಳ ಸಮೇತ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಂದಾಯ ಶಾಖೆ ಆರಂಭಿಸುವುದರಿಂದ ವಲಯದಲ್ಲಿ ಬರುವ ಎಲ್ಲ ಗ್ರಾಮಗಳ ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಅನುಕೂಲವಾಗಲಿದೆ.
| ಶ್ರೀಶೈಲ್ ಶಾಖಾಧಿಕಾರಿಗಳು ಜೆಸ್ಕಾಂ

ಪಟ್ಟಣದಲ್ಲಿ ಕಂದಾಯ ಶಾಖೆ ಸ್ಥಾಪಿಸುವಂತೆ ಪುರಸಭೆಯಿಂದ ಜೆಸ್ಕಾಂ ವ್ಯವಸ್ಥಾಪಕ ನಿದರ್ೇಶಕರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಇಲಾಖೆಯಿಂದ ಯಾವುದೆ ರೀತಿಯ ಉತ್ತರ ಬಂದಿಲ್ಲ.ಈ ಬಾರಿ ಶಾಸಕರ ಜತೆ ಚಚರ್ಿಸಿ ಮತ್ತೊಮ್ಮೆ ಗಮನಕ್ಕೆ ತರಲಾಗುವುದು.
| ದೇವಪ್ಪ ಮ್ಯಾಗೇರಿ. ಪುರಸಭೆ ಅಧ್ಯಕ್ಷ

Leave a Reply

Your email address will not be published. Required fields are marked *

Back To Top