ಸಂಬರಗಿ: ಸಮೀಪದ ಗುಂಡೆವಾಡಿ ಗ್ರಾಮದಲ್ಲಿ ಶನಿವಾರ ಕೆರೆ ತುಂಬುವ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಅನಂತಪೂರ-1, ಅನಂತಪೂರ-2, ಗುಂಡೆವಾಡಿ-1, ಗುಂಡೆವಾಡಿ-2, ಬಳ್ಳಿಗೇರಿ, ಪಾರ್ಥನಹಳ್ಳಿ-1, ಪಾರ್ಥನಹಳ್ಳಿ-2, ಚಮಕೇರಿ, ಮಲಾಬಾದ, ಬೆವನೂರ, ಚಮಕೇರಿ(ಬೇಡರಹಟ್ಟಿ) ಕೆರೆಗಳಿಗೆ ನೀರು ತುಂಬುವ ಕಾಮಗಾರಿಗೆ ಮಾರ್ಚ್ 1 ರಂದು ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಚಾಲನೆ ನೀಡಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಅನಂತಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ ಮಾತನಾಡಿದರು. ಶಾಸಕ ರಾಜು ಕಾಗೆ, ಓಂಪ್ರಕಾಶ ಡೊಳ್ಳಿ, ಸಿದರಾಯ ತೇಲಿ, ಬಸವರಾಜ ಅಂಗಡಿ, ಶಿವಾನಂದ ಗೊಲಬಾವಿ, ಗುಂಜಿಗಾಂವಿ, ಚಂದ್ರಕಾಂತ ಇಮ್ಮಡಿ, ಶಿವಾಜಿ ಯಮಗಾರ, ಸುರೇಶ ಮೆಂಡಿಗೇರಿ, ಪ್ರವೀಣ ಹುಣಸಿಕಟ್ಟಿ, ರವಿ ಕಾಂಬಳೆ, ಗುತ್ತಿಗೆದಾರ ಇಮಾಮಸಾಬ ಬಿರಾದಾರ, ಡಾ. ಚನ್ನಪ್ಪ ಶಂಕ್ರಟ್ಟಿ, ಅಶೋಕ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಮಹಾಂತೇಶ ಸಾಲಿಮಠ ಇತರರಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುಳಪ್ಪ ಜತ್ತಿ ವಂದಿಸಿದರು.