“ಕೇಜ್ರಿವಾಲ್ ಸರ್ಕಾರ ಕರೊನಾ ಸಾವಿನ ಅಸಲಿ ಸಂಖ್ಯೆಯನ್ನು ಮರೆಮಾಚಿದೆ”

ನವದೆಹಲಿ : ಅನ್ಯ ರಾಜ್ಯಗಳಿಗೆ ಹೋಲಿಸಿದರೆ, ದೆಹಲಿಯಲ್ಲಿ ಕರೊನಾ ಮರಣ ದರ ಅತಿಹೆಚ್ಚಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಕರೊನಾದಿಂದ ಮೃತಪಟ್ಟಿರುವವರ ಸಂಖ್ಯೆಯ ವಿವರಗಳಲ್ಲಿ ದೆಹಲಿಯನ್ನು ಮೊದಲ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರ ತಂದುನಿಲ್ಲಿಸಿದೆ ಎಂದು ಬಿಜೆಪಿಯ ದೆಹಲಿ ಪ್ರದೇಶ ಅಧ್ಯಕ್ಷ ಆದೇಶ್ ಗುಪ್ತ ಹೇಳಿದ್ದಾರೆ.

ಟ್ವಿಟರ್​ನಲ್ಲಿ ಕೇಜ್ರಿವಾಲ್ ಮೇಲೆ ವಾಗ್ದಾಳಿ ಮಾಡಿರುವ ಗುಪ್ತ, ಕಳೆದ ವರ್ಷದಂತೆಯೇ ಈ ವರ್ಷವೂ ಸಿಎಂ ಕೇಜ್ರಿವಾಲ್​ ಅಂಕಿಅಂಶಗಳಲ್ಲಿ ಎಡವಟ್ಟು ಮಾಡಿ, ಕರೊನಾದಿಂದ ಮೃತಪಟ್ಟವರ ಅಸಲಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ. ಈ ಮೂಲಕ ಕೆಲಸ ಮಾಡುವುದಕ್ಕಿಂತ ಅವರ ಆದ್ಯತೆ ತಮ್ಮ ವಿಫಲತೆಗಳನ್ನು ಮುಚ್ಚಿಡುವುದೇ ಆಗಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಕರೊನಾ ಎರಡನೇ ಅಲೆಯಿಂದಾಗಿ ದೆಹಲಿವಾಸಿಗಳು ಚಿಕಿತ್ಸಾ ಸೌಲಭ್ಯ ಲಭಿಸದೆ ಸಾವಪ್ಪುತ್ತಿದ್ದರೆ, ಕೇಜ್ರಿವಾಲ್, ಹಾಳಾಗುತ್ತಿರುವ ಪರಿಸ್ಥಿತಿಯ ಹೊಣೆಯನ್ನು ಯಾರ ಮೇಲೆ ಹೇರಬೇಕೆಂಬ ಯೋಚನೆಯಲ್ಲಿದ್ದರು. ತಮ್ಮ ಹೊಣೆಗಾರಿಕೆಯಿಂದ ದೂರ ಓಡುವುದು ಕೇಜ್ರಿವಾಲ್​ರ ಅಭ್ಯಾಸವಾಗಿ ಹೋಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸೆಖೆಯಾಗ್ತಿದೆ ಎಂದು ಮನೆಯ ಹೊರಗೆ ಹೋದವ ಶವವಾಗಿ ಪತ್ತೆ! ಬೆಚ್ಚಿಬೀಳಿಸುತ್ತೆ ನಿನ್ನೆ ರಾತ್ರಿಯ ಘಟನೆ

ಏಪ್ರಿಲ್ 1 ರಿಂದ ಮೇ 17 ರ ನಡುವೆ ದೆಹಲಿಯ ಮೂರು ನಗರ ನಿಗಮಗಳಲ್ಲಿರುವ ಸ್ಮಶಾನ ಮತ್ತು ಖಬರಿಸ್ತಾನಗಳಲ್ಲಿ 16,593 ಶವಗಳ ಅಂತಿಮ ಸಂಸ್ಕಾರ ಕರೊನಾ ವಿಧಾನದಂತೆ ನಡೆದಿದೆ ಎಂದು ಅಂಕಿಅಂಶಗಳು ತೋರಿಸಿವೆ. ಆದರೆ, ಈ ಸಮಯದಲ್ಲಿ ಕೇಜ್ರಿವಾಲ್ ಸರ್ಕಾರ ಕರೊನಾ ಮರಣ ಸಂಖ್ಯೆಯನ್ನು 11,061 ರಷ್ಟಿದೆ ಎಂದು ಹೇಳಿದೆ. ನಗರ ನಿಗಮದ ಪ್ರಕಾರ ಏಪ್ರಿಲ್​ ಕೊನೆಯ ವಾರದಲ್ಲಿ ದಿನಕ್ಕೆ 700 ಕ್ಕಿಂತ ಹೆಚ್ಚು ಕರೊನಾ ರೋಗಿಗಳ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಸರ್ಕಾರ ಪ್ರತಿದಿನ 450 ಕ್ಕಿಂತ ಹೆಚ್ಚು ಸಾವು ಸಂಭವಿಸಿಲ್ಲ ಎಂದು ಹೇಳಿತು ಎಂದಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಾ ಕರೊನಾ ಸೋಂಕಿಗೆ ಗುರಿಯಾಗಿ ಮೃತಪಟ್ಟ ನೂರಾರು ಕರೊನಾ ವಾರಿಯರ್​ಗಳ ಕುಟುಂಬಗಳು ಸರ್ಕಾರದ ಸಹಾಯಕ್ಕೆ ಕಾಯುತ್ತಿದ್ದರೂ, ಅವರ ಬಗ್ಗೆ ಸಿಎಂ ಗಮನ ಹರಿಸುತ್ತಿಲ್ಲ. ಮೃತರನ್ನು ಪಿಕ್​ ಅಂಡ್​ ಚೂಸ್​ ಪಾಲಿಸಿಯ ಆಧಾರದ ಮೇಲೆ ಕರೊನಾ ವಾರಿಯರ್​ಗಳೆಂದು ಸನ್ಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಂಟ್ರಲ್ ವಿಸ್ತಾ ಅವೆನ್ಯೂ ​​ನಿರ್ಮಾಣ ಕಾರ್ಯಕ್ಕೆ ತಡೆ ಇಲ್ಲ : ದೆಹಲಿ ಹೈಕೋರ್ಟ್

ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ: ಈ ಮಹಾನಗರದಲ್ಲಿ ದಾಟಿತು ಶತಕ!

ಕರೊನಾ: ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಅಧಿಕ

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…