ಜಾಲತಾಣದಲ್ಲಿ ಕಿಚ್ಚು ಹಚ್ಚಿದ ನಟಿ ಕೀರ್ತಿ ಸುರೇಶ್​ ಸ್ಟನ್ನಿಂಗ್​ ಲುಕ್​: ನಮಗೆ ಹಳೆಯ ಕೀರ್ತಿಯೇ ಬೇಕೆಂದು ಹಠ ಹಿಡಿದ ಅಭಿಮಾನಿ!

ನವದೆಹಲಿ: ಟಾಲಿವುಡ್​ ಹಾಗೂ ಕಾಲಿವುಡ್​ ಚಿತ್ರರಂಗದ ಎಲ್ಲರ ಹಾಟ್​ ಫೇವರಿಟ್​ ಆಗಿರುವ ಮುದ್ದು ಮೊಗದ ಚೆಲುವೆ ಕೀರ್ತಿ ಸುರೇಶ್, ಸದ್ಯ ಚಿತ್ರೀಕರಣಕ್ಕಾಗಿ ಸ್ಪೇನ್​ನಲ್ಲಿದ್ದಾರೆ. ಈ ಮಧ್ಯೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​​​ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಸ್ಪೇನ್​ನ ಸುಂದರ ನಗರವಾದ ‘ಮಲಾಗಾ’ದಲ್ಲಿರುವ ಕೀರ್ತಿ ಸುರೇಶ್​, ತಾವು ತಂಗಿರುವ ಹೋಟೆಲ್​ ಕಟ್ಟಡದ ಮೇಲೆ ಸನ್​ ಗ್ಲಾಸ್​ ತೊಟ್ಟು, ಶ್ವೇತ ವರ್ಣದ ಬಾತ್​ರೋಬ್​ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಅಲ್ಲದೆ, ತಮ್ಮ ಫೋಟೋಗೆ ಸೂರ್ಯ ಚುಂಬಿತ ಶನಿವಾರ ಎಂದು ಬರೆದುಕೊಂಡಿದ್ದಾರೆ.

ಕೀರ್ತಿ ಸುರೇಶ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನು ಲೈಕ್​ ಮಾಡಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಅಭಿಮಾನಿಗಳು ಕೀರ್ತಿ ತೂಕದ ಇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮತ್ತೆ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಿ ಎಂದು ಅಭಿಮಾನಿಯೊಬ್ಬ ಕೇಳಿಕೊಂಡಿದ್ದರೆ, ನಮಗೆ ನಮ್ಮ ಹಳೆಯ ಕೀರ್ತಿ ಬೇಕು ಎಂದು ಮತ್ತೊಬ್ಬ ಅಭಿಮಾನಿ ಹಠ ಹಿಡಿದಿದ್ದಾನೆ.

ಮುಂಬರುವ ಸಖಿ ಚಿತ್ರದ ಚಿತ್ರೀಕರಣಕ್ಕಾಗಿ ಕೀರ್ತಿ ಅವರು ಸ್ಪೇನ್​ನಲ್ಲಿ ಬೀಡುಬಿಟ್ಟಿದ್ದಾರೆ. ಈಗಾಗಲೇ ಚಿತ್ರತಂಡ 45 ದಿನಗಳ ಶೂಟಿಂಗ್​ಗೆ ಪ್ಲ್ಯಾನ್​ ಮಾಡಿಕೊಂಡಿದ್ದು, ಯೂರೋಪ್​ನ ವಿವಿಧ ಭಾಗಗಳ ಸುಂದರ ತಾಣಗಳನ್ನು ತಮ್ಮ ಚಿತ್ರದಲ್ಲಿ ಸೆರೆಹಿಡಿಯಲಿದೆ. (ಏಜೆನ್ಸೀಸ್​)

View this post on Instagram

#sunkissedsaturday 🌞 #Malaga

A post shared by Keerthy Suresh (@keerthysureshofficial) on

Leave a Reply

Your email address will not be published. Required fields are marked *