Keerthy Suresh: ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ, ಚಿತ್ರಪ್ರೇಮಿಗಳ ಮನಗೆದ್ದಿರುವ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್, ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಹಬ್ಬಕ್ಕೂ ಸಿಗಲ್ಲ ಅನ್ನಭಾಗ್ಯ ಅಕ್ಕಿ: ಕೆಲವೆಡೆ 15 ಕೆ.ಜಿ. ಬದಲು 10 ಕೆ.ಜಿ. ವಿತರಣೆ
ಮೆಗಾಸ್ಟಾರ್ ಚಿರಂಜೀವಿ ಅವರ ‘ಭೋಲಾ ಶಂಕರ್’ ಮತ್ತು ‘ದಸರಾ’ ಸಿನಿಮಾಗಳ ಬಳಿಕ ಕೀರ್ತಿ ಸುರೇಶ್ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದೆ. ವರುಣ್ ಧವನ್ ಜತೆಗೆ ‘ಬೇಬಿ ಜಾನ್’ನಲ್ಲಿ ನಟಿಸಿದ ಕೀರ್ತಿ, ಈ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಆದರೆ, ಚಿತ್ರತಂಡ ನಿರೀಕ್ಷಿಸಿದಂತೆ ಬೇಬಿ ಜಾನ್ ಕಮಾಲ್ ಮಾಡದೆ, ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲನ್ನು ಕಂಡಿತು.
ಇದೀಗ ಕೆಲವು ವರ್ಷಗಳ ಅಂತರದ ನಂತರ ಮತ್ತೆ ತೆಲುಗು ಚಿತ್ರಗಳಲ್ಲಿ ಬಣ್ಣ ಹಚ್ಚಲು ಸಜ್ಜಾಗಿರುವ ಕೀರ್ತಿ ಸುರೇಶ್, ತೆಲುಗು ನಟ ನಿತಿನ್ ಅವರ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿ ವರದಿಗಳ ಪ್ರಕಾರ, ನಿತಿನ್ ಅಭಿನಯಿಸಲಿರುವ ತಾತ್ಕಾಲಿಕ ಶೀರ್ಷಿಕೆ ‘ಯೆಲ್ಲಮ್ಮ’ ಚಿತ್ರದಲ್ಲಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಸಲಿಗೆ ಈ ಚಿತ್ರದಲ್ಲಿ ನ್ಯಾಚುರಲ್ ಸೌತ್ ಬ್ಯೂಟಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಬೇಕಿತ್ತು. ಆದರೆ, ದಿನಾಂಕದ ಸಮಸ್ಯೆಯಿಂದಾಗಿ ಅವರು ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ಕನ್ನಡ ಕೃತಿಗಳು ಬೇರೆ ಭಾಷೆಗೆ ಅನುವಾದವಾಗಲಿ: ನಾಡೋಜ ಡಾ.ವೂಡೇ ಪಿ.ಕೃಷ್ಣ ಆಶಯ
ಪ್ರಾಜೆಕ್ಟ್ ಶುರುವಿಗೂ ಮೊದಲೇ ಸಾಯಿ ಪಲ್ಲವಿ ಅವರ ಅನುಪಸ್ಥಿತಿ ಖಚಿತವಾದ ಬೆನ್ನಲ್ಲೇ ನಿರ್ದೇಶಕ ವೇಣು, ನಾಯಕಿಯ ಪಾತ್ರಕ್ಕೆ ‘ಮಹಾನಟಿ’ ಕೀರ್ತಿ ಸುರೇಶ್ ಅವರನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಕೀರ್ತಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಪ್ರಸ್ತುತ, ಈ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೀರ್ತಿಗೆ ಈಗಾಗಲೇ ಕಥೆ ಹೇಳಲಾಗಿದ್ದು, ನಟಿ ಶೀಘ್ರದಲ್ಲೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ ಎಂಬ ವರದಿಗಳಿವೆ,(ಏಜೆನ್ಸೀಸ್).