ಬೆಳಗಾವಿ: ಬಾಯಿಯ ಹಾಗೂ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಆರೋಗ್ಯ ಕಾಪಾಡಿಕೊಂಡಷ್ಟೇ ಮುಖ್ಯವಾಗಿದೆ ಎಂದು ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹೇಳಿದರು.
ನಗರದ ಉದ್ಯಮಭಾಗದ ಕೆಎಲ್‌ಇ ಆಸ್ಪತ್ರೆಯಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ, ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಆರೋಗ್ಯ ವ್ಯಾಖ್ಯಾನಿಸುವಾಗ ಬಾಯಿಯ ಹಾಗೂ ಹಲ್ಲುಗಳ ಆರೋಗ್ಯವು ಅತ್ಯಮೂಲ್ಯವಾದ ಪಾತ್ರ ವಹಿಸುತ್ತದೆ. ಅಂತೆಯೇ ವೈದ್ಯರು ತಪಾಸಣೆಯ ಸಮಯದಲ್ಲಿ ಬಾಯಿ ಪರೀಕ್ಷಿಸುತ್ತಾರೆ. ಇದರಿಂದ ವ್ಯಕ್ತಿಯ ರೋಗ ಪರೀಕ್ಷೆಗೆ ಅನುಕೂಲವಾಗುತ್ತದೆ ಎಂದರು.
ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ.ಧಾರವಾಡ ಮಾತನಾಡಿ, ನಾವು ಆರೋಗ್ಯವಾಗಿರಬೇಕು ಎಂದರೆ ನಮಗೆ ಅವಶ್ಯಕತೆಯಿರುವ ಆಹಾರವನ್ನು ಪೌಷ್ಟಿಕಾಂಶವಾಗಿ ಮಾರ್ಪಡಿಸಿ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ದಂತಗಳ ಪಾತ್ರ ಮಹತ್ತರವಾಗಿದೆ. ಸುಂದರ ದಂತ ಪಂಕ್ತಿಗಳು ಆರೋಗ್ಯಯುತ ಶರೀರದ ಸೂಚಕವಾಗಿವೆ ಎಂದರು.
ಶಿಬಿರದಲ್ಲಿ 115 ನಾಗರಿಕರಿಗೆ ದಂತ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ಮಾಡಲಾಯಿತು. ವೈದ್ಯ ಡಾ.ಮದನ ಡೋಂಗ್ರೆ, ಡಾ.ಸಿ.ಎನ್. ತುಗಶೆಟ್ಟಿ, ಡಾ.ರೂಪಾಲಿ ಸಂಕೇಶ್ವರಿ, ಸಂತೋಷ ಇತಾಪೆ, ಮಹಾಂತೇಶ ಇಂಚಲ, ಕೃಷ್ಣಾ ಗುಮಾಸ್ತೆ, ಲಕ್ಷ್ಮೀ ಪಾಟೀಲ, ಸಾಗರ ಅಕನೋಜಿ ಇತರರಿದ್ದರು.
ಹಲ್ಲು, ಬಾಯಿ ಆರೋಗ್ಯ ಕಾಪಾಡಿಕೊಳ್ಳಲಿ
ವೆಜ್ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್ ವಿಧಾನ Recipe
ಸ್ಟ್ರೀಟ್ ಫುಡ್ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips
ಹೈಹೀಲ್ಸ್ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…
ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…