ನವಲಗುಂದ: ಬೂತ್‌ಮಟ್ಟದ ಸಮಿತಿಗಳು ಮುಂಬರುವ ಚುನಾವಣೆಯ ಫಲಿತಾಂಶದ ದಿಕ್ಸೂಚಿಯಾಗಿರಲಿವೆ. ಹೀಗಾಗಿ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಗಮನಹರಿಸಬೇಕು ಎಂದು ಕೇಂದ್ರ ಮಾಜಿ ಸಚಿವ ರಾಧಾಕೃಷ್ಣನ್ ಹೇಳಿದರು.
ತಾಲೂಕಿನ ಕರ್ಲವಾಡ ಗ್ರಾಮದಲ್ಲಿ ಆಯೋಜಿಸಿದ್ದ ಸಂಘಟನಾ ಪರ್ವ ಸಭೆಯಲ್ಲಿ ಅವರು ಮಾತನಾಡಿದರು. ‘ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಿದ ಪರಿಣಾಮ ನಾನು ಕೇಂದ್ರದ ಸಚಿವನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು’ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪಕ್ಷ ಸಂಘಟನೆಗೆ ಬೂತ್ ಸಮಿತಿಗಳು ಮುನ್ನುಡಿಯಾಲಿವೆ. ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದರು.
ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿದರು. ಮಂಡಲ ಅಧ್ಯಕ್ಷ ಮುತ್ತಣ್ಣ ಮನಮಿ ಅಧ್ಯಕ್ಷತೆ ವಹಿಸಿದ್ದರು. ಶಿಸ್ತು ಸಮಿತಿ ಅದ್ಯಕ್ಷ ಲಿಂಗರಾಜ ಪಾಟೀಲ ಗ್ರಾಮದ ಬೂತ್ ಸಮಿತಿಯ ಅಧ್ಯಕ್ಷರನ್ನಾಗಿ ಮಡಿವಾಳಯ್ಯ ಹಿರೇಮಠ ಅವರನ್ನು ಆಯ್ಕೆ ಮಾಡಲಾಯಿತು.
ನವಲಗುಂದ ನಗರ ಘಟಕದ ಅಧ್ಯಕ್ಷ ಸಾಯಿಬಾಬಾ ಆನೆಗುಂದಿ, ಸಿದ್ದನಗೌಡ ಪಾಟಿಲ, ಅರುಣ ಮೆಣಸಿನಕಾಯಿ, ದೇವರಾಜಸ್ವಾಮಿ ಹಿರೇಮಠ, ಚಂದ್ರಶೇಖರ ಕರ್ಲವಾಡ, ಮಲ್ಲಿಕಾರ್ಜುನ ಸಂಗನಗೌಡರ, ಆನಂದ ಜಕ್ಕನಗೌಡರ, ಪ್ರಕಾಶ ಪಾಟೀಲ, ರೋಹಿತ ಮಟ್ಟಿಹಳ್ಳಿ, ಆನಂದ ಅಮಾತ್ಯನವರ ಇತರರಿದ್ದರು.