ಮಕ್ಕಳ ಕಳ್ಳಿಯೆಂದು ಅಪರಿಚಿತ ಮಹಿಳೆಗೆ ಥಳಿಸಿದ ಸಾರ್ವಜನಿಕರು

ಕೋಲಾರ: ಮುಳಬಾಗಿಲು ತಾಲೂಕಿನ ಕೀಲಹೊಳಲಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಮಕ್ಕಳ ಕಳ್ಳಿ ಎಂಬ ಅನುಮಾನದಿಂದ ಸಾರ್ವಜನಿಕರು ಥಳಿಸಿದ್ದಾರೆ.

ಮಹಿಳೆ ಅನ್ಯಭಾಷೆಯಲ್ಲಿ ಮಾತನಾಡುತ್ತಿದ್ದಳು. ಆಕೆಯ ಬಳಿ ಇದ್ದ ಚೀಲದಲ್ಲಿ ಚಾಕು, ಚಿಲ್ಲರೆ ಹಣ, ಮಕ್ಕಳ ಆಟಿಕೆ, ವಿಚಿತ್ರ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *