More

    ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ; ಅನುದಾನ ವಾಪಸ್ ಹೋದರೆ ಅಽಕಾರಿಗಳ ವೇತನ ಕಡಿತ

    ಧಾರವಾಡ: ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ವಿವಿದ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಸಕಾಲದಲ್ಲಿ ಬಳಕೆ ಮಾಡಬೇಕು. ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋದರೆ ಸಂಬಧಿ೦ಸಿ ಇಲಾಖೆಯ ಅಽಕಾರಿಯ ವೇತನದಲ್ಲಿ ಕಡಿತ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ೪ನೇ ತ್ರೆÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಸರ್ಕಾರದ ಅನುದಾನ ಬಳಕೆ ಮಾಡದ ಅಽಕಾರಿಯನ್ನು ಹೊಣೆ ಮಾಡಿ ಅವರಿಂದ ವಸೂಲು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ನಿಗದಿತ ಅವಽಯಲ್ಲಿ ಅನುದಾನ ಸಂಪೂರ್ಣ ಬಳಕೆ ಆಗಬೇಕು ಎಂದು ಸೂಚಿಸಿದರು.

    ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಶಿಫಾರಸು:
    ಜೆಜೆಎಂ, ನೀರಾವರಿ, ಲೋಕೋಪಯೋಗಿ, ಇತರ ಇಲಾಖೆಗಳ ಕಾಮಗಾರಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಉಪ ಗುತ್ತಿಗೆ ನೀಡಿ ಕಣ್ಮರೆಯಾಗುತ್ತಿದ್ದಾರೆ. ಗುತ್ತಿಗೆದಾರರು ಶಾಸಕರಿಗೂ ಸ್ಪಂದಿಸುತ್ತಿಲ್ಲ. ಕರೆ ಸ್ವೀಕರಿಸುವುದಿಲ್ಲ. ನೋಟಿಸ್ ಕೊಟ್ಟರೂ ಉತ್ತರಿಸುವುದಿಲ್ಲ. ಸಕಾಲಕ್ಕೆ ಕಾಮಗಾರಿ ಮುಗಿಸುತ್ತಿಲ್ಲ. ಹೀಗೆ ಉಪ ಗುತ್ತಿಗೆ ನೀಡುವ ಗುತ್ತಿಗೆದಾರರನ್ನು ಪತ್ತೆ ಮಾಡಿ ತಿಳಿಸಿ. ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಲಾಡ್ ಎಚ್ಚರಿಕೆ ನೀಡಿದರು.

    • ನೀರು ಸರಬರಾಜು ಮುಂದುವರಿಕೆ ಗೊಂದಲ:
      ಕು0ದಗೋಳ ತಾಲೂಕಿನ ಕೆಲ ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್ ಮೂಲಕ ಪೂರೈಸುತ್ತಿದ್ದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಪ್ರಸ್ತಾಪಿಸಿದರು. ಜಿಲ್ಲಾಽಕಾರಿ ಸೂಚನೆಯಂತೆ ನಿಲ್ಲಿಸಲಾಗಿದೆ ಎಂದು ತಹಸೀಲ್ದಾರರು ಸಭೆಗೆ ತಿಳಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಜಿಲ್ಲಾಽಕಾರಿ ದಿವ್ಯ ಪ್ರಭು, ೯೦ ದಿನಗಳ ಬರಗಾಲ ಘೋಷಣೆ ಅವಽ ಮುಗಿದಿದ್ದು, ಇಲಾಖೆ ನಿರ್ದೇಶನದಂತೆ ನಿಲ್ಲಿಸಲು ಸೂಚಿಸಲಾಗಿದೆ ಎಂದರು. ಪ್ರತಿಕ್ರಿಯಿಸಿದ ಸಚಿವ ಲಾಡ್, ಕುಡಿಯುವ ನೀರು ಸರಬರಾಜು ಅಗತ್ಯವಿರುವ ಗ್ರಾಮಗಳಲ್ಲಿ ಮುಂದುವರಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿಗಳ ಅನುದಾನ ಬಳಸಿಕೊಂಡು ನೀರು ಪೂರೈಕೆಯನ್ನು ಮುಂದುವರಿಸಬೇಕು ಎಂದು ಸೂಚಿಸಿದರು.
    • ತಲೆ ಚಚ್ಚಿಕೊಂಡ ಸಚಿವ:
      ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅಽಕಾರಿ ಸಮರ್ಪಕ ಮಾಹಿತಿ ನೀಡಲಿಲ್ಲ. ಸಾಮಾನ್ಯ ಜ್ಞಾನ ಇಲ್ಲದೆ ಸಭೆಗೆ ಪಿಕ್‌ನಿಕ್ ಬಂದAತೆ ಬಂದಿದ್ದೀರಾ? ಇಲಾಖೆ ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಲಾಗದವರು ಬೆಳೆಗಾರರಿಗೆ ಏನು ಮಾಹಿತಿ ನೀಡುತ್ತೀರಿ? ಎಂದು ಸಚಿವ ಲಾಡ್ ತಲೆ ಚಚ್ಚಿಕೊಂಡರು. ರೇಷ್ಮೆ ಸಾಕಣೆ ಮಾಡಿ ಯಶಸ್ವಿಯಾದವರನ್ನು ಕರೆದುಕೊಂಡು ರೈತರಿಗೆ ಭೇಟಿ ಮಾಡಿಸಿ ಅವರಿಂದಲೇ ಮಾಹಿತಿ ನೀಡಿ ಪ್ರಚಾರ ಕೈಗೊಳ್ಳಿ ಎಂದು ಸೂಚಿಸಿದರು.
    • ಎಸ್‌ಎಸ್‌ಎಲ್ ಫಲಿತಾಂಶ ಹೆಚ್ಚಿಸಿಲ್ಲ ಏಕೆ?
      ಕಳೆದ ಸಾಲಿನ ಎಸ್‌ಎಸ್‌ಎಲ್ ಫಲಿತಾಂಶದಲ್ಲಿ ಜಿಲ್ಲೆ ಹಿನ್ನಡೆಯಾಗಿದ್ದೇಕೆ? ಎಂದು ಸಚಿವ ಲಾಡ್ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರನ್ನು ಪ್ರಶ್ನಿಸಿದರು. ಸಬೂಬು ಹೇಳದೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿ ಎಂದರು.
      ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ಜಿಲ್ಲಾಽಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಸ್ವರೂಪ ಟಿ.ಕೆ., ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಽÃಕ್ಷಕ ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಜಿಲ್ಲಾ ಮಟ್ಟದ ಅಽಕಾರಿಗಳಿದ್ದರು.
    See also  ‘ಇಂದ್ರಕೀಲಕ ಊರ್ವಶಿ ಶಾಪ’ ಎಂಬ ಯಕ್ಷಗಾನ ತಾಳ ಮದ್ದಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts