ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆ, ಇಂಜಿನಿಯರಿಂಗ್ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ 2019-20ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಬಿಡುಗಡೆ ಮಾಡಿದರು.

ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ಕೆಇಎ ಏ. 29 ಮತ್ತು 30 ರಂದು ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ 7ನೇ ಸ್ಥಾನ ಬೆಂಗಳೂರಿಗೆ, 2ನೇ ಸ್ಥಾನ ಮಂಗಳೂರಿಗೆ ಹಾಗೂ 1ನೇ ಸ್ಥಾನವನ್ನು ಬಳ್ಳಾರಿ ಪಡೆದುಕೊಂಡಿದೆ.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳ ಪೈಕಿ 6ನೇ ಸ್ಥಾನ ಬೆಂಗಳೂರಿಗೆ, 2ನೇ ಸ್ಥಾನ ಮಂಗಳೂರಿಗೆ, 1ನೇ ಸ್ಥಾನ ಮೈಸೂರು ಹಾಗು ದಾವಣಗೆರೆಗೆ ಲಭ್ಯವಾಗಿದೆ.

ಬಿಎಸ್ಸಿ ಕೃಷಿ ವಿಭಾಗದಲ್ಲಿ ಮೊದಲ 10 ಸ್ಥಾನಗಳ ಪೈಕಿ 3ನೇ ಸ್ಥಾನ ಬೆಂಗಳೂರು, 4 ಮಂಗಳೂರು, ಮೈಸೂರು, ಹಾಸನ ಮತ್ತು ಶಿವಮೊಗ್ಗ ತಲಾ 1ನೇ ಸ್ಥಾನ ಪಡೆದುಕೊಂಡಿವೆ.

ಪಶು ವೈದ್ಯಕೀಯ ವಿಭಾಗದಲ್ಲಿ 10 ಸ್ಥಾನಗಳ ಪೈಕಿ ಬೆಂಗಳೂರಿಗೆ 8, ದಾವಣಗೆರೆ 1, ಮೈಸೂರು 1ನೇ ಸ್ಥಾನ ಪಡೆದಿವೆ.

ಇಂಜಿನಿಯರಿಂಗ್​ನಲ್ಲಿ ಜಫಿನ್ ಬಿಜು ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. 1,94,311 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮಧ್ಯಾಹ್ನ 1 ಗಂಟೆಯಿಂದ ಪ್ರಾಧಿಕಾರದ ವೆಬ್​ಸೈಟ್ http://kea.kar.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು. http/cet.kar.nic.in., http://karresults.nic.in ವೆಬ್​ಸೈಟ್​ಗಳಲ್ಲೂ ಫಲಿತಾಂಶ ಸಿಗಲಿದೆ.

ಅರ್ಹ ಅಭ್ಯರ್ಥಿಗಳು ಕರ್ನಾಟಕದ ಕಾಲೇಜುಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಹೋಮಿಯೋಪಥಿ, ಆಯುರ್ವೇದ, ಯೋಗ, ಮೆಡಿಸಿನ್, ನ್ಯಾಚುರೋಪಥಿ, ಆರ್ಕಿಟೆಕ್ಚರ್, ಬಿ.ಫಾರ್ವ, ಡಿ.ಫಾರ್ಮಾ, ಅಗ್ರಿಕಲ್ಚರ್, ಗೃಹ ವಿಜ್ಞಾನ ಕೋರ್ಸ್​ಗಳಿಗೆ ಪ್ರವೇಶ ಪಡೆಯಲಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *