Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕನ್ನಡ ಚಲನಚಿತ್ರ ಕಪ್​ಗೆ ಚಾರ್ಜರ್ಸ್ ಒಡೆಯರ್

Monday, 10.09.2018, 3:05 AM       No Comments

|ಗಣೇಶ್ ಉಕ್ಕಿನಡ್ಕ

ಬೆಂಗಳೂರು: ದಿಗ್ಗಜ ಕ್ರಿಕೆಟಿಗರು, ಸಿನಿಮಾ ಸ್ಟಾರ್ ನಟರಿದ್ದ ಕನ್ನಡ ಚಲನಚಿತ್ರ ಕಪ್ ಟಿ10 ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾದ ಮಾಜಿ ಸ್ಟಾರ್ ಬ್ಯಾಟ್ಸ್​ಮನ್ ತಿಲಕರತ್ನೆ ದಿಲ್ಶಾನ್ ಅವರ ಸ್ಪೋಟಕ ಬ್ಯಾಟಿಂಗ್, ಕರಾರುವಾಕ್ ಸ್ಪಿನ್ ದಾಳಿಯ ಆಲ್ರೌಂಡ್ ಅಬ್ಬರದಾಟದ ವಿದಾಯ ಸಿಕ್ಕಿತು. ವೃತ್ತಿಬದುಕಿನ ಫೇವರಿಟ್ ದಿಲ್​ಸ್ಕೂಪ್ ಶಾಟ್​ಗಳನ್ನೊಳಗೊಂಡ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗರೆದ ದಿಲ್ಶಾನ್​ರ(68ರನ್, 31ಎಸೆತ, 12ಬೌಂಡರಿ, 1ಸಿಕ್ಸರ್ ಮತ್ತು 1ಕ್ಕೆ 3 ವಿಕೆಟ್ ) ಮನಮೋಹಕ ನಿರ್ವಹಣೆಯೊಂದಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ 6 ವಿಕೆಟ್​ಗಳಿಂದ ರಾಕಿಂಗ್ ಸ್ಟಾರ್ ಯಶ್ ಒಳಗೊಂಡ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಸೋಲಿಸಿ 2ನೇ ಆವೃತ್ತಿಯ ಕೆಸಿಸಿ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

‘ವಿಜಯವಾಣಿ’ ಮಾಧ್ಯಮ ಸಹಯೋಗದ ಟೂರ್ನಿಯಲ್ಲಿ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಒಡೆಯರ್ ಚಾರ್ಜರ್ಸ್ ತಂಡದ ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ಫೀಲ್ಡಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಒವೇಸ್ ಷಾ(42*ರನ್, 11ಎಸೆತ) ಮತ್ತು ಕೆಪಿಎಲ್ ಸ್ಟಾರ್ ಆಲ್ರೌಂಡರ್ ಸ್ಟಾಲಿನ್ ಹೂವರ್(33ರನ್, 18ಎಸೆತ, 6ಬೌಂಡರಿ, 1ಸಿಕ್ಸರ್) ಅಬ್ಬರದಾಟದಿಂದ 8 ವಿಕೆಟ್​ಗೆ 122 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಒಡೆಯರ್ ಚಾರ್ಜರ್ಸ್ 10 ಓವರ್​ಗಳಲ್ಲಿ 4 ವಿಕೆಟ್​ಗೆ 127 ರನ್ ಪೇರಿಸಿ ಜಯಿಸಿತು. ಕೊನೇ ಓವರ್​ನಲ್ಲಿ ಅಗತ್ಯವಿದ್ದ 8 ರನ್ ಅಗತ್ಯವಿದ್ದಾಗ ದಿಲ್ಶಾನ್ ರನೌಟ್ ಆದರು. ಆಗ ಒಡೆಯರ್ ಪಾಳಯದಲ್ಲಿ ಸೋಲಿನ ಭೀತಿ ಎದುರಾಗಿತ್ತು. ಆದರೆ ಕೊನೇ 3 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಮೊದಲೆರಡು ಎಸೆತಗಳಲ್ಲಿ ರಿತೇಶ್ ಭಟ್ಕಳ(10*) ಡಬಲ್ಸ್ ರನ್ ಕಸಿದರೆ, ಕೊನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದರು.

ರಾಷ್ಟ್ರಕೂಟ ಪ್ಯಾಂಥರ್ಸ್: 8 ವಿಕೆಟ್​ಗೆ 122(ಒವೇಸ್ ಷಾ 42*, ಸ್ಟಾಲಿನ್ ಹೂವರ್ 33, ರಾಜೀವ್ 14, ಕೃಷ್ಣ 19, ದಿಲ್ಶಾನ್ 1ಕ್ಕೆ 3, ಪೆಟ್ರೋಲ್ ಪ್ರಸನ್ನ 33ಕ್ಕೆ 1, ರಿತೇಶ್ ಭಟ್ಕಳ 10ಕ್ಕೆ 1, ಪ್ರತಾಪ್ 17ಕ್ಕೆ 1), ಒಡೆಯರ್ ಚಾರ್ಜರ್ಸ್: 10 ಓವರ್​ಗಳಲ್ಲಿ 4 ವಿಕೆಟ್​ಗೆ 127(ದಿಲ್ಶಾನ್ 68, ಸಿಎಂ ಗೌತಮ್ 19, ರಿತೇಶ್ ಭಟ್ಕಳ 10, ಸೈಯದ್ 3, ಪ್ರತಾಪ್ 9, ಕೃಷ್ಣ 31ಕ್ಕೆ 1).

ದಿಲ್ಶಾನ್ ಒಂದೇ ಓವರ್​ನಲ್ಲಿ 3 ವಿಕೆಟ್!

ಶನಿವಾರ ಬ್ಯಾಟಿಂಗ್​ನಲ್ಲೂ ಮಿಂಚಿದ್ದ ಲಂಕಾ ತಿಲಕರತ್ನೆ ದಿಲ್ಶಾನ್ ಒಂದೇ ಓವರ್​ನಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದರು. ಮೊದಲೆರಡು ಎಸೆತಗಳಲ್ಲಿ ಕ್ರಮವಾಗಿ ಕೃಷ್ಣ ಹಾಗೂ ಲೋಕಿಯನ್ನು ಔಟ್ ಮಾಡಿದರೆ, ಕೊನೇ ಎಸೆತದಲ್ಲಿ ಕಿಶೋರ್ ಕಾಮತ್​ರನ್ನು ಡಗ್​ಔಟ್ ಸೇರಿಸಿದರು. ಈ ಓವರ್​ನಲ್ಲಿ ದಿಲ್ಶಾನ್ ಕೇವಲ ಒಂದೇ ರನ್ ಬಿಟ್ಟು ಕೊಟ್ಟರು.

ಚಸ್ಟಾಲಿನ್-ಒವೇಸ್ ಭರ್ಜರಿ ಬ್ಯಾಟಿಂಗ್

ಬ್ಯಾಟಿಂಗ್ ಆರಂಭಿಸಿದ ರಾಷ್ಟ್ರಕೂಟ ಪ್ಯಾಂಥರ್ಸ್ ಒವೇಸ್ ಷಾ ಮತ್ತು ಕೆಪಿಎಲ್ ಸ್ಟಾರ್ ಆಲ್ರೌಂಡರ್ ಸ್ಟಾಲಿನ್ ಹೂವರ್ ಅಬ್ಬರದಾಟದಿಂದ ಬೃಹತ್ ಮೊತ್ತ ಪೇರಿಸಿತು. ತಂಡ ಮೊದಲ ಓವರ್​ನಲ್ಲಿ ರನ್ ಗಳಿಸಲೂ ಪರದಾಡಿದರೂ, ನಂತರದ ಎರಡೂ ಓವರ್​ಗಳಲ್ಲಿ ಒಡೆಯರ್ ಚಾರ್ಜರ್ಸ್ ಅತ್ಯಂತ ಕೆಟ್ಟ ಫೀಲ್ಡಿಂಗ್ ಮಾಡಿದ ಲಾಭದಿಂದ ಭರ್ಜರಿ ರನ್ ಕಸಿಯಿತು. ಕೆಪಿಎಲ್ ಸ್ಟಾರ್ ಆಲ್ರೌಂಡರ್ ಸ್ಟಾಲಿನ್ ಹೂವರ್ ಹಾಗೂ ರಾಜೀವ್(14) ಜೋಡಿ ಎಡಗೈ ವೇಗಿ ಅಭಿಲಾಷ್ ಎಸೆದ ಮೊದಲ ಓವರ್​ನಲ್ಲಿ ಕೇವಲ 4 ರನ್ ಕಸಿದರು. ಆದರೆ ನಂತರದ 2 ಓವರ್​ಗಳಲ್ಲಿ 37 ರನ್ ಚಚ್ಚುವ ಮೂಲಕ ಉತ್ತಮ ಚೇತರಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ 3.4 ಓವರ್​ಗಳಲ್ಲಿ 50 ರನ್ ಜತೆಯಾಟವಾಡಿತು. ಆದರೆ ಸ್ಪಿನ್ನರ್ ಪ್ರತಾಪ್ ಓವರ್​ನಲ್ಲಿ ರಾಜೀವ್, ಅಭಿಲಾಷ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಆದರೆ ತಿಲಕರತ್ನೆ ದಿಲ್ಶಾನ್ ದಾಳಿಗೆ ದಿಢೀರ್ ಕುಸಿತ ಕಂಡ ರಾಷ್ಟ್ರಕೂಟ 100 ಗಡಿ ದಾಟುವುದು ಕಷ್ಟವಾಗಿತ್ತು. ಅಂತಿಮವಾಗಿ ಒವೇಸ್ ಷಾ, ಸಿನಿಮಾ ರಂಗದ ಸ್ಪಿನ್ನರ್ ಪವನ್ ಒಡೆಯರ್ ಓವರ್​ನಲ್ಲಿ ಭರ್ಜರಿ ಸಿಕ್ಸರ್​ಗಳ ಸುರಿಮಳೆಯೊಂದಿಗೆ ತಂಡದ ಮೊತ್ತ 120ರ ಗಡಿ ದಾಟಿಸಿದರು.

ಕಿಚ್ಚ ಟೀಮ್ ಗೆಲ್ಲಿಸಿದ ಸೆಹ್ವಾಗ್ ಆರ್ಭಟ!

ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಭಾನುವಾರ ಸ್ಪೋಟಕ ಬ್ಯಾಟಿಂಗ್ ಮೂಡ್​ನಲ್ಲಿದ್ದರು. ಶನಿವಾರವಾಡಿದ ಆಟಕ್ಕಿಂತ ಭಿನ್ನ ಹಾಗೂ ಆಕ್ರಮಣಕಾರಿಯಾಗಿ ಆಡಿದ ಕದಂಬ ಲಯನ್ಸ್ ತಂಡದ ಸೆಹ್ವಾಗ್ ಬೌಂಡರಿ, ಸಿಕ್ಸರ್​ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಇವರ ಆಟದೊಂದಿಗೆ ಕಿಚ್ಚ ಸುದೀಪ್ ಸಾರಥ್ಯದ ಕದಂಬ ಲಯನ್ಸ್ ತಂಡ 23 ರನ್​ಗಳಿಂದ ಹೊಯ್ಸಳ ಈಗಲ್ಸ್ ತಂಡವನ್ನು ಸುಲಭವಾಗಿ ಸೋಲಿಸಿ ಟೂರ್ನಿಗೆ ಗೆಲುವಿನ ವಿದಾಯ ಹೇಳಿತು. ಸೆಹ್ವಾಗ್ 17 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 46 ರನ್ ದಾಖಲಿಸಿ ರನೌಟ್ ಆದರು. ಸುದೀಪ್ ಜತೆ ಆರಂಭಿಕನಾಗಿ ಕಣಕ್ಕಿಳಿದ ಸೆಹ್ವಾಗ್ ಮೊದಲ ವಿಕೆಟ್​ಗೆ 48 ರನ್ ಸೇರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಕದಂಬ ತಂಡ, 2 ವಿಕೆಟ್​ಗೆ 117ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಹೊಯ್ಸಳ ತಂಡ ದಕ್ಷಿಣ ಆಫ್ರಿಕಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ಹರ್ಷಲ್ ಗಿಬ್ಸ್(35ರನ್, 19ಎಸೆತ, 2 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ಹೊರತಾಗಿಯೂ 7 ವಿಕೆಟ್​ಗೆ 94 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕದಂಬ ಲಯನ್ಸ್: 2 ವಿಕೆಟ್​ಗೆ 117 (ಸೆಹ್ವಾಗ್ 46, ಸುದೀಪ್ 7, ಪ್ರದೀಪ್ 38*, ರೋಹಿತ್ 24*, ಅರ್ಜುನ್ 12ಕ್ಕೆ1), ಹೊಯ್ಸಳ ಈಗಲ್ಸ್: 7 ವಿಕೆಟ್​ಗೆ 94 (ಗಿಬ್ಸ್ 35, ಪ್ರಶಾಂತ್ 17, ಅಜಿತ್ ಜಯರಾಜ್ 16ಕ್ಕೆ2, ರೇಣುಕ್ 17ಕ್ಕೆ 1, ಪ್ರದೀಪ್ 10ಕ್ಕೆ 1).

ಸ್ಟಾಲಿನ್ ಹೂವರ್ ಸೂಪರ್ ಸಿಕ್ಸರ್ಸ್

ಭಾನುವಾರದ ಮೊದಲ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ನಟ ಯಶ್ ಸಾರಥ್ಯದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಕೆಪಿಎಲ್ ಸ್ಟಾರ್ ಆಲ್ರೌಂಡರ್ ಸ್ಟಾಲಿನ್ ಹೂವರ್ (72*ರನ್, 28ಎಸೆತ, 6ಬೌಂಡರಿ, 7ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗಂಗಾ ವಾರಿಯರ್ಸ್ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ, ಪುನೀತ್ ರಾಜ್​ಕುಮಾರ್ ಸಾರಥ್ಯದ ಗಂಗಾ ವಾರಿಯರ್ಸ್ ತಂಡ ನಿಹಾಲ್ ಉಳ್ಳಾಲ್ (47ರನ್, 21ಎಸೆತ) ಅರ್ಧಶತಕ ವಂಚಿತ ಆಟದಿಂದ 7ವಿಕೆಟ್​ಗೆ 109 ರನ್ ಪೇರಿಸಿತು. ಪ್ರತಿಯಾಗಿ ಪ್ಯಾಂಥರ್ಸ್ 7.5 ಓವರ್​ಗಳಲ್ಲಿ 1ವಿಕೆಟ್​ಗೆ 112 ರನ್ ಪೇರಿಸಿ ಜಯಿಸಿತು. ಮೊದಲ ಪಂದ್ಯದಲ್ಲಿ ಶೂನ್ಯ ರನ್​ಗೆ ಔಟಾಗಿದ್ದ ಸ್ಟಾಲಿನ್ ಹೂವರ್, ಆ ಸಿಟ್ಟನ್ನು ಸೇರಿಸಿ ಎಲ್ಲಾ ಬೌಲರ್​ಗಳನ್ನು ಮನಬಂದಂತೆ ಚಚ್ಚಿದರು.

ಗಂಗಾ ವಾರಿಯರ್ಸ್: 7ವಿಕೆಟ್​ಗೆ 109 (ನಿಹಾಲ್ 47, ಲ್ಯಾನ್ಸ್ ಕ್ಲುಸ್ನರ್ 10, ಶ್ರೀನಿವಾಸ್ ಕಿರಣ್ 11, ಸುಚಿತ್ 11, ಕೆ ಕಾಮತ್ 20ಕ್ಕೆ 3, ಪ್ರೀತಂ ಗುಬ್ಬಿ 22ಕ್ಕೆ 2, ರಾಜೀವ್ 18ಕ್ಕೆ 1), ರಾಷ್ಟ್ರಕೂಟ ಪ್ಯಾಂಥರ್ಸ್ 7.5 ಓವರ್​ಗಳಲ್ಲಿ 1ವಿಕೆಟ್​ಗೆ 112 (ಸ್ಟಾಲಿನ್ 72*, ಕೃಷ್ಣಾ 22*).

ದಿಲ್ಶಾನ್ ಅರ್ಧಶತಕದ ಅಬ್ಬರ

ಪ್ಯಾಂಥರ್ಸ್ ನೀಡಿದ ಕಠಿಣ ಸವಾಲನ್ನು ಬೆನ್ನಟ್ಟಲು ಒಡೆಯರ್ ತಂಡಕ್ಕೆ ವೃತ್ತಿಪರ ಬ್ಯಾಟ್ಸ್​ಮನ್​ಗಳೊಬ್ಬರು ಮಿಂಚುವುದು ಅನಿವಾರ್ಯವಾಗಿತ್ತು. ಇದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ದಿಲ್ಶಾನ್ ಸಹ ಬ್ಯಾಟ್ಸ್​ಮನ್​ಗೆ ಹೆಚ್ಚು ಬ್ಯಾಟಿಂಗ್ ನೀಡದೆ ತಾವೇ ಹೆಚ್ಚಿನ ಎಸೆತಗಳನ್ನು ಎದುರಿಸಿ ಕಲಾತ್ಮಕ ಶಾಟ್​ಗಳ ಮೂಲಕ ಬ್ಯಾಟಿಂಗ್ ಮಾಡಿದರು. ಇದರಿಂದ ಒಡೆಯರ್ ತಂಡ 8 ಓವರ್​ಗಳಲ್ಲಿ 104 ರನ್ ಪೇರಿಸಿತು. ಕೊನೇ ಎರಡು ಓವರ್​ಗಳಲ್ಲಿ 19 ರನ್ ಅಗತ್ಯವಿದ್ದಾಗ ಕ್ರೀಸಿನಲ್ಲಿದ್ದ ದಿಲ್ಶಾನ್ ಮತ್ತು ಕರ್ನಾಟಕ ರಣಜಿ ತಂಡದ ಬ್ಯಾಟ್ಸ್​ಮನ್ ಸಿಎಂ ಗೌತಮ್19) ಗೆಲುವಿನ ಅಂತರ ಕಡಿಮೆಗೊಳಿಸಿದರೂ 12ರನ್ ಅಗತ್ಯವಿದ್ದಾಗ ಗೌತಮ್ ಔಟಾದರು. 9ನೇ ಓವರ್​ನ ಕೊನೇ ಎಸೆತದಲ್ಲಿ ದಿಲ್ಶಾನ್ ಬೌಂಡರಿ ಬಾರಿಸಿದರು.

Leave a Reply

Your email address will not be published. Required fields are marked *

Back To Top