Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕೆಸಿಸಿ ಅಂಗಳದಲ್ಲಿ ಸೆಲೆಬ್ರಿಟಿ ಸಂಭ್ರಮ

Monday, 10.09.2018, 3:03 AM       No Comments

ಕನ್ನಡ ಚಲನಚಿತ್ರ ಕಪ್ ಎಂದರೆ ಅದು ಬಾಕಿ ಕ್ರಿಕೆಟ್ ಟೂರ್ನಿಗಿಂತ ಸಂಪೂರ್ಣ ಭಿನ್ನ ಎಂಬುದಕ್ಕೆ ಚಿನ್ನಸ್ವಾಮಿ ಅಂಗಳದಲ್ಲಿ ಕಾಣಸಿಗುವ ಕಲರ್​ಫುಲ್ ದೃಶ್ಯಗಳೇ ಸಾಕ್ಷಿ. ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಡೆದ ಈ ಟೂರ್ನಿಯಲ್ಲಿ ಸ್ಯಾಂಡಲ್​ವುಡ್​ನ ತಾರೆಯರು ಬ್ಯಾಟ್ ಬೀಸಿ ಹಣಾಹಣಿ ನಡೆಸುವುದರ ಜತೆಗೆ ಮನರಂಜನೆ ನೀಡುವಲ್ಲಿಯೂ ಹಿಂದೆ ಬೀಳಲಿಲ್ಲ. ನೆರೆದಿದ್ದ ಸಾವಿರಾರು ಅಭಿಮಾನಿಗಳ ಮನದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಕೌತುಕ ಒಂದೆಡೆಯಾದರೆ, ಸ್ಟಾರ್ ನಟರ ಹುಮ್ಮಸ್ಸನ್ನು ಕಣ್ತುಂಬಿಕೊಳ್ಳುವ ಖುಷಿ ಮತ್ತೊಂದೆಡೆ. ಸುದೀಪ್, ಪುನೀತ್, ಶಿವರಾಜ್​ಕುಮಾರ್, ಯಶ್, ಉಪೇಂದ್ರ, ಗಣೇಶ್ ಮೈದಾನದ ತುಂಬ ಉಲ್ಲಾಸದಿಂದ ಓಡಾಡಿಕೊಂಡಿದ್ದನ್ನು ನೋಡುವುದೇ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಅಂತಿಮ ಪಂದ್ಯಕ್ಕೂ ಮುನ್ನ ನಡೆದ ಮನರಂಜನಾ ಕಾರ್ಯಕ್ರಮಗಳು ಟೂರ್ನಿಯ ರಂಗನ್ನು ಹೆಚ್ಚಿಸಿತ್ತು. ಆ ಎಲ್ಲ ಕಲರ್​ಫುಲ್ ಕ್ಷಣಗಳ ಝುಲಕ್ ಇಲ್ಲಿದೆ…

ಶಿವಣ್ಣ ಸೆಲ್ಪಿ ಸರಳತೆ

ಸಾಮಾನ್ಯವಾಗಿ ಸ್ಟಾರ್ ನಟರು ತಾವು ಹೋದಲ್ಲಿ ಬಂದಲ್ಲಿ ಅಭಿಮಾನಿಗಳಿಗೆ ಸೆಲ್ಪಿ ಕೊಟ್ಟು ಕೊಟ್ಟು ಸುಸ್ತಾಗಿರುತ್ತಾರೆ. ಅದ್ಯಾವುದನ್ನೂ ಲೆಕ್ಕಿಸದೆ, ನೂರಕ್ಕೂ ಹೆಚ್ಚು ಅಭಿಮಾನಿಗಳಿಗೆ ಸೆಲ್ಪಿ ನೀಡಿ ಸರಳತೆ ಮೆರೆದರು ಶಿವರಾಜ್​ಕುಮಾರ್. ಪೆವಿಲಿಯನ್ ಅಂಚಿನಲ್ಲಿದ್ದ ಅಭಿಮಾನಿಗಳತ್ತ ತೆರಳಿದ ಶಿವಣ್ಣ, ಅವರಿಂದಲೇ ಪೋನ್ ಪಡೆದು ಅವರೊಂದಿಗೆ ಫೋಟೋ ತೆಗೆದುಕೊಟ್ಟರು. ವಿಶೇಷ ಏನೆಂದರೆ, 30 ನಿಮಿಷಕ್ಕೂ ಹೆಚ್ಚು ಹೊತ್ತು ಫೋಟೋ ತೆಗೆದುಕೊಳ್ಳುವುದರಲ್ಲೇ ಕಾಲ ಕಳೆದರೂ, ಕಿಂಚಿತ್ತೂ ಬೇಸರಗೊಳ್ಳದೆ, ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದರು.

ಡ್ರಮ್ ಬಾರಿಸಿದ ಹ್ಯಾಟ್ರಿಕ್ ಹೀರೋ

ಶಿವಣ್ಣ ನಟನೆಯಷ್ಟೇ ಅಲ್ಲದೆ ಡ್ರಮ್ ಸೆಟ್ ಬಾರಿಸುವುದಲ್ಲೂ ನಿಪುಣರು. ಈಗಾಗಲೇ ಅದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಆ ಸಂದರ್ಭ ಕೆಸಿಸಿಯಲ್ಲಿಯೂ ಮರುಕಳಿಸಿತು. ಡ್ರಮ ದೇವ್ ಅವರಿಂದ ಸ್ಟಿಕ್ ಪಡೆದು ಒಂದು ಕೈ ನೋಡಿಯೇ ಬಿಟ್ಟರು. ಅವರು ಡ್ರಮ್ ಬಾರಿಸುತ್ತಿದ್ದಂತೆ ಸುತ್ತಲಿನ ಅಭಿಮಾನಿಗಳು ಒನ್ಸ್ ಮೋರ್ ಎಂದು ಜೋರಾಗಿ ಕೂಗಿದರು. ಜೋಶ್​ನಲ್ಲೇ ಮತ್ತೆ ಮತ್ತೆ ಡ್ರಮ್ ನಾದ ಹೊಮ್ಮಿಸಿದರು

ಸೆಹ್ವಾಗ್​ಗೆ ಸುದೀಪ್ ಬ್ಯಾಟಿಂಗ್ ಟಿಪ್ಸ್!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ವೀರೇಂದ್ರ ಸೆಹ್ವಾಗ್​ಗೆ ಸುದೀಪ್ ಬ್ಯಾಟಿಂಗ್ ಟಿಪ್ಸ್ ನೀಡಿದರು! ಅಚ್ಚರಿ ಅನಿಸಿದರೂ ಹೀಗೊಂದು ಪ್ರಸಂಗ ನಡೆಯಿತು. ‘ಕದಂಬ ಲಯನ್ಸ್’ ಮತ್ತು ‘ಹೊಯ್ಸಳ ಈಗಲ್ಸ್’ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಉಭಯ ತಂಡಗಳು ಅಭ್ಯಾಸದಲ್ಲಿ ತೊಡಗಿಕೊಂಡಿದ್ದವು. ಆಗ ಬ್ಯಾಟಿಂಗ್ ವೈಖರಿ ಬಗ್ಗೆ ಇಬ್ಬರು ಪರಸ್ಪರ ಚರ್ಚೆ ನಡೆಸಿದ್ದರು. ದೂರದಿಂದ ನೋಡಿದಾಗ ಸುದೀಪ್ ಅವರೇ ಸೆಹ್ವಾಗ್​ಗೆ ಬ್ಯಾಟಿಂಗ್ ಟಿಪ್ಸ್ ನೀಡುತ್ತಿದ್ದಾರೇನೋ ಎಂಬಂತಿತ್ತು ಆ ದೃಶ್ಯ.

ಯಶ್-ಪುನೀತ್ ರೌಂಡ್ಸ್…

ಅಭಿಮಾನಿಗಳಿಗೆ ಹತ್ತಿರದಿಂದ ದರ್ಶನ ನೀಡುವ ಉದ್ದೇಶದಿಂದ ಪುನೀತ್​ರಾಜ್​ಕುಮಾರ್ ಮತ್ತು ಯಶ್ ಫೆವಿಲಿಯನ್ ಪರೇಡ್ ನಡೆಸಿದರು. ಇಡೀ ಮೈದಾನವನ್ನು ಒಂದು ಸುತ್ತು ಹಾಕಿ ಸೆಲ್ಪಿಗೆ ಪೋಸ್ ಕೊಟ್ಟರು.

ಮೈದಾನದಲ್ಲೇ ಪುನೀತ್ ಡಾನ್ಸ್

ಟಿವಿ ಪರದೆ ಮೇಲೆ ಪವರ್​ಸ್ಟಾರ್ ಪುನೀತ್​ರಾಜ್​ಕುಮಾರ್ ಡಾನ್ಸ್ ಶುರುವಾದರೆ, ಪುಟಾಣಿ ಮಗು ಸಹ ಕುಳಿತಲ್ಲೇ ಮೈ ಕುಣಿಸುತ್ತೆ. ಅಂಥದರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಎದುರು ಅಪ್ಪು ಡಾನ್ಸ್ ಮಾಡಿದರೆ ಹೇಗಿರುತ್ತೆ? ಹೌದು, ‘ಜಾಕಿ ಜಾಕಿ..’ ಹಾಡಿನ ಸದ್ದು ಕೇಳಿಸಿದ್ದೇ ತಡ ಮೈ ಕೊಡವಿ ಸ್ಟೆಪ್ ಹಾಕೇ ಬಿಟ್ಟರು. ಇಡೀ ಕ್ರೀಡಾಂಗಣವೇ ಅಪ್ಪು ಡಾನ್ಸ್​ಗೆ ಶಿಳ್ಳೆ, ಚಪ್ಪಾಳೆಯ ಮಳೆಗೆರೆಯಿತು. ಬರೀ ಒಂದೇ ಬಾರಿ ನೃತ್ಯ ಮಾಡದೆ, ಮೈದಾನದಲ್ಲಿದ್ದಷ್ಟು ಹೊತ್ತು ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡಿದರು ಪುನೀತ್.

ಗಿಲ್ಲಿ ಮೆಚ್ಚಿದ ಕ್ಯಾಪ್ಟನ್​ ಇವರು

ಅಂತಾರಾಷ್ಟ್ರೀಯ ಕ್ರಿಕೆಟಿಗರ ಜತೆ ಚಂದನವನದ ಕಲಾವಿದರು ಆಟವಾಡುತ್ತಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇನ್ನು, ಅಂಥ ಅನುಭವಿ ಕ್ರಿಕೆಟಿಗರಿಂದ ಮೆಚ್ಚುಗೆ ಮಾತುಗಳು ಕೇಳಿಬಂದರೆ? ಎಂಥವರಿಗಾದರೂ ಅದು ಮರೆಯಲಾರದ ವಿಚಾರ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ಕ್ರಿಸ್ಟ್ ಕಡೆಯಿಂದ ಶಿವರಾಜ್​ಕುಮಾರ್​ಗೆ ಅಂಥ ಪ್ರಶಂಸೆಯ ಮಾತುಗಳು ಸಿಕ್ಕಿವೆ. ‘ಹ್ಯಾಟ್ರಿಕ್ ಹೀರೋ’ ನಾಯಕತ್ವದ ‘ವಿಜಯನಗರ ಪೆಟ್ರಿಯಾಟ್ಸ್’ ತಂಡದಲ್ಲಿ ಗಿಲ್ಕ್ರಿಸ್ಟ್ ಆಟವಾಡಿದ್ದಾರೆ. ಈ ಟೂರ್ನಿಯಿಂದ ಅವರಿಗೆ ಅನಿಸಿದ್ದೇನೆಂದರೆ, ಶಿವಣ್ಣ ದಿ ಬೆಸ್ಟ್ ಕ್ಯಾಪ್ಟನ್ ಅಂತೆ! ಈ ವಿಚಾರವನ್ನು ಅವರು ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಕೆಸಿಸಿ ಕಂಪನ್ನು ಪ್ರಪಂಚಕ್ಕೆ ಹರಡುವ ಪ್ರಯತ್ನ ಮಾಡಿದ್ದಾರೆ. ಎಸ್​ಆರ್​ಕೆ ಜತೆಗಿರುವ ಸೆಲ್ಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿರುವ ಅವರು, ‘ವಾಟ್ ಎ ಕ್ಯಾಪ್ಟನ್; ಬೆಸ್ಟ್ ಡಾನ್ಸಿಂಗ್ ಸ್ಕಿಪ್ಪರ್ ಎವರ್’ ಎಂದು ಬರೆದುಕೊಂಡಿರುವುದನ್ನು ಕಂಡ ಅಭಿಮಾನಿಗಳು ಫುಲ್​ಖುಷ್. ಓಡಿಐನಲ್ಲಿ ಸ್ವತಃ ಕ್ಯಾಪ್ಟನ್ ಆಗಿದ್ದ, ಹತ್ತಾರು ಕ್ಯಾಪ್ಟನ್​ಗಳ ಜತೆ ಆಟವಾಡಿ ಅನುಭವ ಗಿಟ್ಟಿಸಿದ್ದ ಗಿಲ್ಕ್ರಿಸ್ಟ್ ಅವರು ಶಿವಣ್ಣನ ನಾಯಕತ್ವಕ್ಕೆ ಫಿದಾ ಆಗಲು ಕಾರಣವಾಗಿದ್ದೇ ಡಾನ್ಸ್. ಪ್ರತಿ ಪಂದ್ಯದ ಬಳಿಕ ‘ಟಗರು ಬಂತು ಟಗರು..’ ಹಾಡಿಗೆ ‘ಸೆಂಚುರಿ ಸ್ಟಾರ್’ ಹೆಜ್ಜೆ ಹಾಕಿದ ಪರಿ ಅವರಿಗೆ ಸಖತ್ ಇಷ್ಟವಾಗಿದೆ.

ಹರ್ಷಿಕಾ ಪಾಲಿಗೆ ವಿಶೇಷ ಟೂರ್ನಿ

ಇಡೀ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ನ ಮಜಾ ಸವಿದರು ನಟಿ ಹರ್ಷಿಕಾ ಪೂಣಚ್ಚ. ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವುದು ಈ ಟೂರ್ನಿ ಉದ್ದೇಶ ಆಗಿರುವುದರಿಂದ ಮೂಲತಃ ಕೊಡಗಿನವರಾದ ಹರ್ಷಿಕಾಗೆ ಈ ಬಾರಿಯ ಕೆಸಿಸಿ ನಿಜಕ್ಕೂ ಸ್ಪೆಷಲ್. ‘ನಮ್ಮ ಇಂಡಸ್ಟ್ರಿ ಎಷ್ಟು ಒಗ್ಗಟ್ಟಾಗಿದೆ ಎಂಬುದಕ್ಕೆ ಈ ಕ್ರಿಕೆಟ್ ಹಬ್ಬವೇ ಸಾಕ್ಷಿ. ಒಂದೊಳ್ಳೆಯ ಉದ್ದೇಶಕ್ಕಾಗಿ ನಮ್ಮ ಚಿತ್ರರಂಗದವರು ಒಂದಾಗಿದ್ದಾರೆ. ಸ್ಟೇಡಿಯಂನಲ್ಲಿ ಕುಳಿತು ಅವರೆಲ್ಲರನ್ನೂ ಹುರಿದುಂಬಿಸುವುದೇ ನಮಗೊಂದು ಸಂಭ್ರಮ. ಮಾತ್ರವಲ್ಲದೆ, ಸಮಾರೋಪ ಸಮಾರಂಭದಲ್ಲಿ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದು ಕೂಡ ನನ್ನ ಪಾಲಿನ ಅದೃಷ್ಟ’ ಎಂದು ‘ವಿಜಯವಾಣಿ’ ಜತೆ ಸಂತಸ ಹಂಚಿಕೊಂಡರು ಹರ್ಷಿಕಾ.

ಇನ್ನು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತವರ ತಂಡದಿಂದ ಹಲವು ಫೇಮಸ್ ಹಾಡುಗಳು ತೇಲಿಬಂದವು. ಭಾವನಾ ರಾವ್, ಕೃಷಿ ತಾಪಂಡ, ಸೋನು ಗೌಡ ಮೊದಲಾದ ನಟಿಯರು ಹಲವು ಸಿನಿಮಾ ಗೀತೆಗಳಿಗೆ ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *

Back To Top