ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಶಹಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಭೀಮರಾಯನಗುಡಿ ಕಾಡಾ ಆಡಳಿತಾಧಿಕಾರಿ ವಿ.ಕೆ.ಪೋತ್ದಾರ್ ಹಾಗೂ ಪ್ರಭಾರಿ ಎಸ್. ಇ. ಜಗನ್ನಾಥ್ ವಿರುದ್ಧ ಕೇಸ್ ದಾಖಲಿಸಿ ಅಮಾನತುಗೊಳಿಸಬೇಕು. ಈ ಭಾಗದ ಎಸ್ಸಿ, ಎಸ್ಟಿ ಹಾಗೂ ಬಡ ರೈತರಿಗೆ ಸರ್ಕಾರದ ನಿಯಮಾನುಸಾರ ಅನುದಾನ ಬಳಸದೆ ಅನ್ಯಾಯ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.

ಈ ಕುರಿತು ಹೋರಾಟದ ಮೂಲಕ ರಾಜ್ಯ ಕಾಡಾ ನಿರ್ದೇಶಕರಿಂದ ನಿರ್ದೇಶನ ನೀಡಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ದೂರು ದಾಖಲಿಸಬೇಕು. ಸುರಪುರ ತಾಲೂಕಿನ ಹಸನಾಪುರ ಕಾಡಾ ವಿಭಾಗ ಎಫ್ಐಸಿ ಕ್ರಿಯಾ ಯೋಜನೆ ರದ್ದುಗೊಳಿಸಬೇಕು. ಈಗಾಗಲೇ ಟೆಂಡರ್ ಆಗಿರುವ ಕಾಮಗಾರಿಗಳನ್ನು ಒಪ್ಪಂದ ಮಾಡಿಕೊಳ್ಳದೆ ಇರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಬೇಕು. ಸರ್ಕಾರದ ನಿಯಮದಂತೆ ಅರ್ಹ ಫಲಾನುಭವಿಗಳಿಗೆ ಕಾಮಗಾರಿ ನೀಡಿಲ್ಲ ಈ ಬಗ್ಗೆ ಸಿಸಿಬಿ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಗೋಪಾಲ್ ಬಾಗಲಕೋಟ್, ಮಾನಯ್ಯ ದೊರೆ, ಕೃಷ್ಣ ದಿವಾಕರ್, ಅಣ್ಣಾ ದೊರೆ, ಬಸವರಾಜ ಕಟ್ಟಿ, ದೇವಪ್ಪ ದೇವರಮನೆ ಇದ್ದರು

Leave a Reply

Your email address will not be published. Required fields are marked *