ಬೆಂಗಳೂರು: ಕಾವ್ಯಮನೆ ಪ್ರಕಾಶನ ಪ್ರಕಟಿಸಿರುವ ದೀಪದ ಮಲ್ಲಿ ಅವರ ‘ಹುಣಸೇ ಚಿಗುರು’ ಮತ್ತು ಕಪಿಲ ಪಿ. ಹುಮನಾಬಾದೆ ಅವರ ‘ಬಣಮಿ’ಕಥಾ ಸಂಕಲನಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ (ಆ. 11ರಂದು) ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
ವಿಜಯನಗರ ಮೆಟ್ರೋ ನಿಲ್ದಾಣದ ಬಳಿಯ ಬೀಟೆಲ್ ಬುಕ್ ಶಾಪ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ‘ಹುಣಸೇ ಚಿಗುರು’ ಕೃತಿಯ ಕುರಿತು ಕತೆಗಾರ್ತಿ ಕಾವ್ಯ ಕಡಮೆ ಹಾಗೂ ‘ಬಣವಿ’ ಕೃತಿ ಕುರಿತು ಕವಿ ಎಂ.ಎಸ್. ಸಿದ್ಧಾರ್ಥ ಪರಿಚಯ ಮಾಡಿಕೊಡಲಿದ್ದಾರೆ. ಕಾವ್ಯಮನೆ ಪ್ರಕಾಶನದ ಅಧ್ಯಕ್ಷ ಅಬ್ದುಲ್ ಹೈ. ತೋರಣಗಲ್ಲು ಇತರರು ಭಾಗವಹಿಸಲಿದ್ದಾರೆ.