ಕವಿತಾಳ: ವಳಬಳ್ಳಾರಿಯ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳು ನಡೆದಾಡಿದ ಗ್ರಾಮವಾದ ಪಾಮನಕಲ್ಲೂರಿನ ನೆಲವು ಪಾವನ ಗ್ರಾಮ ಎಂದು ಸುವರ್ಣಗಿರಿ ವಿರಕ್ತಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮಿಗಳು ಹೇಳಿದರು.
ಬುಧವಾರ ಚನ್ನಬಸವೇಶ್ವರ ಹುಟ್ಟೂರಾದ ಪಾಮನ ಕಲ್ಲೂರಿನಲ್ಲಿ 42ನೇ ಪುಣ್ಯಾರಾಧನೆ ನಿಮಿತ್ತ ಮೂರನೇ ವರ್ಷದ ಚನ್ನಬಸವೇಶ್ವರ ಸ್ವಾಮಿಗಳ ಪುರಾಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ನಡೆದಾಡುವ ದೇವರಾದ ಚನ್ನಬಸವೇಶ್ವರ ಸ್ವಾಮಿಗಳು ಇದೇ ಊರಲ್ಲಿ ಜನಿಸಿದವರು. ಇವರ ಕರ್ಮಭೂಮಿಯಾಗಿ ವಳಬಳ್ಳಾರಿಯನ್ನು ಆಯ್ಕೆಮಾಡಿಕೊಂಡು ಧಾರ್ಮಿಕ ಮಾರ್ಗದಲ್ಲಿ ನಡೆದರು. ಇವರು ಹಾಕಿದ ಮಾರ್ಗದಲ್ಲಿ ನಾವು ಮಠದ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇವೆ. ಚನ್ನಬಸವ ಶಿವಯೋಗಿಗಳು ನಡೆದಾಡಿದ ನೆಲದಲ್ಲಿ ಜನಿಸಿದ ಇಲ್ಲಿನವರು ಪುಣ್ಯವಂತರರು ಎಂದರು.
ಅಡವಿ ಅಮರೇಶ್ವರ ಸುಕ್ಷೇತ್ರದ ಶಾಂತಮಲ್ಲ ಸ್ವಾಮಿಗಳು, ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿಗಳು, ಅಡವಿ ಅಮರೇಶ್ವರ ಮಠದ ಉತ್ತರಾಧಿಕಾರಿ ತೋಂಟದಾರ್ಯಸ್ವಾಮಿ, ಸಂತೋಷ ರಾಜಗುರು, ಅಮರಯ್ಯಸ್ವಾಮಿ, ಶರಭಯ್ಯಸ್ವಾಮಿ, ಬಸವರಾಜ ವಿಶ್ವಕರ್ಮ, ಭಕ್ತರಾದ ರವಿ ಜಹಾಗೀರದಾರ, ಶಿವು ಜಹಾಗೀರದಾರ, ಶ್ರೀಶೈಲಪ್ಪ, ಬಸವರಾಜ ಜಂಗಮರಹಳ್ಳಿ, ಅಮರೇಗೌಡ ಪೋಪಾ, ವೆಂಕಟರಡ್ಡಿ ಕಾಸರಡ್ಡಿ, ಗೂಳಪ್ಪ ಕುರ್ಡಿ, ಶಶಿಧರ ಜಂಗಮರಹಳ್ಳಿ, ನಾಗಪ್ಪ ಹಡಪದ, ಡಾ ಕುಮಾರಸ್ವಾಮಿ, ಬಸವರಾಜ ಕುರ್ಡಿ, ಭೀಮಶೇಪ್ಪ ಈಳಿಗೇರ, ಶಿವುಕುಮಾರ ಕಾಡ್ಲೂರು, ಅಯ್ಯಪ್ಪ ಯದ್ದಲದೊಡ್ಡಿ, ವಿರೇಶ ಅಂಗಡಿ, ಶಿವುಕುಮಾರ ಬಳಿ, ವಿರೇಶ ಕಮತರ, ಅಮರೇಶ ಜಂಗರಮರಹಳ್ಳಿ, ಶರಣಪ್ಪ ಕಮತರ, ತಾಯಮ್ಮ ಹಿರೆಮಠ, ಶಕುಂತಲ ರಾಜಗುರು, ಶಶಿಕಲಾ ರಾಜಗುರು, ಅಂದಲಮ್ಮ ಗೌರಮ್ಮ ಪಲ್ಲೇದ, ಚನ್ನಮ್ಮ, ಶಾಂಬವಿ, ಶಾರದಮ್ಮ, ಅಂಬಮ್ಮ, ಗಂಗಮ್ಮ, ಕವಿತಾ, ಉಮಾ ದೇವಿ, ಶರಣಮ್ಮ, ಪಾರ್ವತಮ್ಮ, ಮಂಜುಳಾ, ಅನುಸೂಯಾ, ವಿಜಯಲಕ್ಷ್ಮಿ, ಈರಮ್ಮ, ಕಾಳಮ್ಮ, ಸಂಗೀತಾ, ಶಾರದ, ರೇಣುಕಮ್ಮ ಉಪಸ್ಥಿತರಿದ್ದರು.