ಕವಿತಾಳ: ಪವಾಡ ಪುರುಷ ಶ್ರೀ ಮರಿಬಸವಲಿಂಗ ತಾತ ಶಿವಯೋಗಿಗಳ ಮೂಲಸಂಸ್ಥಾನ ಮಠ ಚಿಲ್ಕರಾಗಿ ಸುಕ್ಷೇತ್ರವಾಗಿದ್ದು, ಅಲ್ಲಿಯೇ ಮೊದಲು ಆಧ್ಯಾತ್ಮ ಬೋಧನೆ ಮಾಡಿ, ದೈವದ ಕಟ್ಟೆ ಕಟ್ಟಿ, ಜಾತ್ರೆ ಹಾಗೂ ರಥೋತ್ಸವ ಆಚರಿಸಿದ್ದರು ಎಂದು ಉಟಕನೂರು ಅಡವಿ ಸಿದ್ದೇಶ್ವರ ಸಂಸ್ಥಾನದ ಶ್ರೀ ಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಚಿಲ್ಕರಾಗಿ ಗ್ರಾಮದಲ್ಲಿ ಶ್ರೀ ಮರಿಬಸವಲಿಂಗ ತಾತನವರ 54ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಶಿವಾನುಭವಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು. ಮರಿಬಸವಲಿಂಗ ತಾತನವರು ಮೊದಲು ಚಿಲ್ಕರಾಗಿಯಲ್ಲಿ ನೆಲೆನಿಂತಿದ್ದು, ನಂತರ ವಿವಿಧೆಡೆ ಸಂಚಾರ ಮಾಡಿ 15ಕ್ಕೂ ಹೆಚ್ಚು ಕಡೆ ಕಟ್ಟೆ, ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ 250ಕ್ಕೂ ಹೆಚ್ಚು ಗ್ರಾಮಗಳಲ್ಲಿ ತಾತನವರ ಕಟ್ಟೆಗಳು, ದೇವಸ್ಥಾನಗಳು ನಿರ್ಮಾಣವಾಗಿವೆ ಎಂದರು.