21 C
Bengaluru
Thursday, January 23, 2020

ನೆಲ-ಜಲಗಳ ಪುನಶ್ಚೇತನಕ್ಕಾಗಿ ಕಾವೇರಿ ಕೂಗು ಅಭಿಯಾನ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಅಧ್ಯಯನಗಳು ಹೇಳುವ ಪ್ರಕಾರ, 10 ಸಾವಿರ ಮರಗಳು ಯಾವ ಪ್ರದೇಶವನ್ನು ಆವರಿಸಿರುತ್ತವೆಯೋ ಅಲ್ಲಿ ಒಂದು ವರ್ಷದಲ್ಲಿ 38 ದಶಲಕ್ಷ ಲೀಟರ್ ನೀರು ಶೇಖರಣೆಯಾಗುತ್ತದೆ. ಕಾವೇರಿ ನದಿಪಾತ್ರವು 83 ಸಾವಿರ ಚದರ ಕಿ.ಮೀ. ಹರವಿನ ಪ್ರದೇಶ, ಇಲ್ಲಿ ಶೇಕಡ 87 ಮರಗಳ ಹೊದಿಕೆಯನ್ನೇ ನಾಶ ಮಾಡಿದ್ದೇವೆ.

ಭಾರತದ ಶೇಕಡ 65 ಜನರು ಬೆಳೆ ಬೆಳೆಸುವುದನ್ನು ಅರಿತಿದ್ದಾರೆ. ಇದೇನೂ ಚಿಕ್ಕ ಸಂಗತಿಯಲ್ಲ. ಹನ್ನೆರಡು ತಿಂಗಳೂ ಬೆಳೆ ತೆಗೆಯುವ ದೇಶ ನಮ್ಮದು. ನಮ್ಮ ನೆಲ ಮತ್ತು ನೀರಿನ ನಿರ್ವಹಣೆ ಸರಿಯಾಗಿದ್ದರೆ ಮತ್ತು ರೈತರನ್ನು ಚೆನ್ನಾಗಿ ನೋಡಿಕೊಂಡರೆ ಇಡೀ ಜಗತ್ತಿಗೇ ಸಾಕಾಗುವಷ್ಟು ಆಹಾರ ಬೆಳೆಯಬಹುದು. ಆದರೀಗ ಸಮೀಕ್ಷೆ ಮಾಡಿ ಎಷ್ಟು ಮಂದಿ ರೈತರು ಮಕ್ಕಳನ್ನು ಬೇಸಾಯದಲ್ಲಿ ತೊಡಗಿಸಲು ತಯಾರೆಂದು ಕೇಳಿದರೆ, ಕೇವಲ ಶೇ.2-5 ರೈತರು ಸಿದ್ಧವಿದ್ದಾರೆ. ಅಂದರೆ, ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬೇಸಾಯಗಾರರೇ ಇರುವುದಿಲ್ಲ. ಹಲವು ವಿಧಗಳಲ್ಲಿ ಭಾರತದ ಭವಿಷ್ಯಕ್ಕೆ ಕುತ್ತು ತರುತ್ತಿದ್ದೇವೆ.

ತಮಿಳುನಾಡಿನಲ್ಲಿ ಶೇಕಡ 83 ರೈತರು ಸಾಲದಲ್ಲಿರುವರು. ಕರ್ನಾಟಕದಲ್ಲಿ ಶೇ.77 ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಅವರಲ್ಲಿ ಬಹುಪಾಲು ಜನರಿಗೆ ಸಾಲ ತೀರಿಸುವ ಯಾವುದೇ ದಾರಿಯೇ ಇಲ್ಲವಾಗಿದೆ. ಅದಕ್ಕಾಗಿಯೇ ಸಾಲ ಮನ್ನಾ ಬಗೆಗೆ ಚರ್ಚೆ ನಡೆದಿದೆ. ವಾಸ್ತವವಾಗಿ, ಸಾಲ ಮನ್ನಾ ಮಾಡುವುದು ನಮ್ಮ ಹಿತದಲ್ಲಿಲ್ಲ. ಏಕೆಂದರೆ, ಮತ್ತೊಮ್ಮೆ ಸಾಲ ಕೇಳಲು ರೈತ ಬ್ಯಾಂಕಿಗೆ ಹೋದರೆ ಅದು ಸಾಲ ಕೊಡದಿರಬಹುದು. ವರ್ಷಕ್ಕೆ 70% ಬಡ್ಡಿ ಕೇಳುವ ಸ್ಥಳೀಯ ಹಣವಂತರ ಬಳಿಗೆ ರೈತಾಪಿ ಜನರನ್ನು ನಾವಾಗಿಯೇ ತಳ್ಳುತ್ತಿದ್ದೇವೆ.

ಬೇಸಾಯವನ್ನು ಲಾಭದಾಯಕ ವೃತ್ತಿಯಾಗಿಸಬೇಕು. ಕಳೆದ ದಶಕದಿಂದ ನಾವು ಇದನ್ನೇ ಅನುಷ್ಠಾನಕ್ಕೆ ತರುತ್ತಿದ್ದೇವೆ. ರೂಢಿಗತ ಬೇಸಾಯಕ್ಕೆ ಬದಲಾಗಿ ಮರ ಬೇಸಾಯ ಮಾಡಲು 69,760 ರೈತರಿಗೆ ಸಹಾಯ ಮಾಡಿದ್ದೇವೆ. ಮರ ಬೇಸಾಯ ಎಂದರೆ, ಮಾಮೂಲು ಬೆಳೆಗಳ ಜೊತೆಗೆ ಮರಗಳನ್ನು ನೆಟ್ಟು ಬೆಳೆಸುವುದು. ಇದರಿಂದ ನೀರು ಮತ್ತು ನೆಲದ ಸ್ಥಿತಿ ಸುಧಾರಿಸುವುದರ ಜೊತೆಗೆ ರೈತರ ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮಗೊಳ್ಳುತ್ತದೆ. ಐದು-ಏಳು ವರ್ಷಗಳಲ್ಲಿ ಅವರ ಆದಾಯ ಶೇಕಡ 300-800ರಷ್ಟು ಹೆಚ್ಚುವುದು. ಇದನ್ನು ಆರಂಭಿಸಿದರೆ, ಮೂರು ತಿಂಗಳಿಗೊಮ್ಮೆ ನೆಲ ಉಳುವ ರೂಢಿಯ ಕೆಲಸ ತಪ್ಪುವುದು.

ಇದಕ್ಕೆ ಬೇಕಾಗಿರುವುದು ಒಂದೇ- ರೈತನಿಗೆ 3-4 ತಿಂಗಳಿಗೊಮ್ಮೆ ಉಳುವ ಸಾಂಪ್ರದಾಯಿಕ ಬೇಸಾಯವನ್ನು ಮರಗಳ ಆಧಾರದಲ್ಲಿನ ಬೆಳೆಗೆ ಬದಲಾಯಿಸಲು ಬೇಕಾಗುವ ಹಣವನ್ನು ಸರ್ಕಾರ ಕೊಟ್ಟು ಪ್ರೋತ್ಸಾಹಿಸಬೇಕು. ಇದು ರೈತರು ಆತ್ಮಹತ್ಯೆಗೆ ಅಥವಾ ಸಾಲದ ಸುಳಿಗೆ ಸಿಲುಕದಂತೆ ಖಚಿತಪಡಿಸುವ ಮಾರ್ಗ. ಕಾವೇರಿ ಜಲಾನಯನದ ಉದ್ದಕ್ಕೂ 83,000 ಚದರ ಕಿ.ಮೀ. ಪ್ರದೇಶವನ್ನು ಮರ ಬೇಸಾಯಕ್ಕೆ ಒಳಪಡಿಸುವುದು ನಮ್ಮ ಯೋಜನೆ. ನೆಲದ ಮೂರನೇ ಒಂದು ಭಾಗ ಮರಗಳ ನೆರಳಿಗೆ ಬಂದರೆ ಕಾವೇರಿ ಖಚಿತವಾಗಿ

ತುಂಬಿಹರಿಯುವಳು. ಮಾಹಿತಿ ಪ್ರಕಾರ, ನೆಟ್ಟ ಪ್ರತಿಯೊಂದು ಮರ ನೆಲದಲ್ಲಿ 3,800 ಲೀಟರ್ ನೀರನ್ನು ಹಿಡಿದಿಡುತ್ತದೆ.

ಈಗ, 242 ಕೋಟಿ ಮರಗಳನ್ನು ಕಾವೇರಿ ಬಯಲಿನಲ್ಲಿ ನೆಡಲು ರೈತರಿಗೆ ಸಹಾಯ ಒದಗಿಸುತ್ತಿದ್ದೇವೆ. ರೈತರು ಇದನ್ನು ಒಂದು ಆರ್ಥಿಕ ಚಟುವಟಿಕೆಯಾಗಿ ಮಾಡುವರು. ಸಸಿಗಳನ್ನು ಜನರ ಧನಸಹಾಯದಲ್ಲಿ ತರಲಾಗುವುದು. ಇಲ್ಲಿ ನಮಗೆ ಜನರ ಬೆಂಬಲ ಬಹಳವಾಗಿ ಬೇಕಿದೆ. ಅದಕ್ಕಾಗಿಯೇ 2017ರಲ್ಲಿ ‘ನದಿಗಳನ್ನು ರಕ್ಷಿಸಿ’ ಮತ್ತು ಈಗ ‘ಕಾವೇರಿ ಕೂಗು’ ಅಭಿಯಾನ. ನಿಮಗೆ ಸಾಧ್ಯವಾದ ರೀತಿಯಲ್ಲಿ, ನಿಮ್ಮ ಕೈಲಾದಷ್ಟು ಇದರಲ್ಲಿ ಭಾಗಿಗಳಾಗಿ.

ಏನಿದು ‘ಕಾವೇರಿ ಕೂಗು’?: ‘ಕಾವೇರಿ ಕೂಗು’ ಮೂಲತಃ ರೈತರಿಗೊಂದು ಆರ್ಥಿಕ ಯೋಜನೆ ಮತ್ತು ದೇಶಕ್ಕೆ ಪರಿಸರ ಯೋಜನೆ. ‘ಕಾವೇರಿ ಕೂಗು’ ‘ರ್ಯಾಲಿ ಫಾರ್ ರಿವರ್ಸ್’ಗಿಂತ ಭಿನ್ನ. ‘ರ್ಯಾಲಿ ಫಾರ್ ರಿವರ್ಸ್’ ಕಾನೂನು ನಿಯಮಗಳನ್ನು ಬದಲಿಸಲು ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಿತ್ತು. ಅದು ಕೈಗೂಡಿದೆ. ಕೇವಲ ಮೂವತ್ತು ದಿನಗಳಲ್ಲಿ 162 ಮಿಲಿಯನ್ ಜನರು ಇದನ್ನು ಬೆಂಬಲಿಸಿದರು. ಈಗ, ಇದನ್ನು ಅನುಷ್ಠಾನ ಮಾಡುವ ಯೋಜನೆ ಬಗ್ಗೆ ಹೇಳುತ್ತಿದ್ದೇವೆ. ರೈತರ ಆತ್ಮಹತ್ಯೆಯ ರಾಜಧಾನಿ ಎಂದು ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯಲ್ಲಿ ಯೋಜನೆ ಚಾಲನೆ ಪಡೆದಿದೆ. ಗೋದಾವರಿಗೆ ಉಪನದಿಯಾದ ವಾಘರಿಯನ್ನು ಯೋಜನೆಗೆ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರ ಸಚಿವಸಂಪುಟದ ಒಪ್ಪಿಗೆ ಪಡೆಯಲಾಗಿದೆ. ನಮ್ಮ ಸ್ವಯಂಸೇವಕರು ಅಲ್ಲಿಯೇ ತಂಗಿದ್ದು ಕಾರ್ಯನಿರತರಾಗಿದ್ದಾರೆ.

‘ರ್ಯಾಲಿ ಫಾರ್ ರಿವರ್ಸ್’ ಅರಿವು ಮೂಡಿಸುವ ಯೋಜನೆಯಾಗಿದ್ದರೆ, ವಾಘರಿ ಅನುಷ್ಠಾನಕ್ಕೆ ತರುವ ಯೋಜನೆಯಾಗಿದೆ. ಇವೆರಡಕ್ಕೆ ಮಧ್ಯದ್ದು ‘ಕಾವೇರಿ ಕೂಗು’. ಇದು ವಾಘರಿ ಯೋಜನೆಗಿಂತಲೂ ದೊಡ್ಡದು. ಏಕೆಂದರೆ, ‘ಕಾವೇರಿ ಕೂಗು’ ಸರ್ಕಾರ, ರೈತರು ಮತ್ತು ನಮಗೆ ಸಂಬಂಧ ಹೊಂದಿರುವುದು. ಇವು ಮೂರು ವಿವಿಧ ಹಂತಗಳ ಯೋಜನೆಗಳು ಮೊದಲಿನಿಂದಲೂ ನಮ್ಮ ಯೋಚನೆಯಲ್ಲಿದ್ದವು. ‘ರ್ಯಾಲಿ ಫಾರ್ ರಿವರ್ಸ್’ಗೂ ಮೊದಲೇ ಇವು ನನ್ನ ಮನಸ್ಸಿನಲ್ಲಿದ್ದ ಯೋಜನೆಗಳು. ಇವನ್ನು ಕಾರ್ಯಕ್ಕಿಳಿಸುವ ಸಾಧ್ಯತೆ ಕಂಡ ನಂತರವೇ ಜನರಿಗೆ ತಿಳಿಸಿದ್ದೇನೆ.

ಆದರೆ, ಸರ್ಕಾರ ಸಬ್ಸಿಡಿ ಕೊಡಲು ಮುಂದಾಗದಿದ್ದರೆ ಈ ಯೋಜನೆ ಸಫಲವಾಗದು. ಅದೃಷ್ಟಕ್ಕೆ, ಇದಕ್ಕೆ ದೊಡ್ಡ ಮೊತ್ತವೇನು ಬೇಕಿಲ್ಲವಾದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಇದರ ಬಗ್ಗೆ ಸಕಾರಾತ್ಮ ಪ್ರತಿಕ್ರಿಯೆ ತೋರಿವೆ. ಕಾವೇರಿ ಮೊದಲ ಹೆಜ್ಜೆಯಷ್ಟೆ. ನಾನು ಐವತ್ತು ವರ್ಷಗಳ ಹಿಂದೆ ನೋಡಿದ್ದ ಶುಭ್ರವಾದ ಭರಪೂರ ಜಲರಾಶಿಯ ಕಾವೇರಿಯನ್ನು ನಮ್ಮ ಹೊಸ ಪೀಳಿಗೆಗೆ ಮರಳಿಕೊಡಬೇಕು. ಹನ್ನೆರಡು ವರ್ಷಗಳೊಳಗೆ ಕಾವೇರಿ ಬಯಲುಗಳಲ್ಲಿ ಈ ಯೋಜನೆಯನ್ನು ಮಾಡಿ ಮುಗಿಸಿದರೆ ರಾಷ್ಟ್ರದ ಮತ್ತು ಉಷ್ಣವಲಯದ ದೇಶಗಳ ಕೈಮೇಲಾಗುವುದು.

ನದಿಗಳು ನೀರಿನ ಮೂಲವಲ್ಲ್ಲ ಗಮ್ಯಸ್ಥಾನ: ತಮಿಳಿನಲ್ಲಿ ಕಾವೇರಿ ಬಗ್ಗೆ ಸುಂದರವಾದ ಗಾದೆಯಿದೆ: ‘ಕಾವೇರಿ ನಡೆಯುತ್ತ ಬಂದರೆ ಮಾತ್ರ ಸಂಪತ್ತು,

ಓಡುತ್ತ ಬಂದರೆ ಆಪತ್ತು’. ಜಲಾನಯನ ಪ್ರದೇಶಗಳಲ್ಲಿ ಗಣನೀಯ ವಾಗಿ ಸಸ್ಯಸಮೃದ್ಧಿ ಇದ್ದರೆ ಮಾತ್ರ ಕಾವೇರಿಯನ್ನು ‘ನಡೆಸಲು’ ಸಾಧ್ಯ. ಜಲಾನಯನ ಪ್ರದೇಶವೆಂದರೆ ನದಿ ಹುಟ್ಟುವ ಕಣಿವೆ ಪ್ರದೇಶವಷ್ಟೇ ಅಲ್ಲ. ಉಷ್ಣ ವಲಯದ ಪ್ರತಿಯೊಂದು ಅಡಿ

ಜಾಗವೂ ಜಲಾನಯನ ಪ್ರದೇಶವೇ. ಮರಗಳು ಎಲ್ಲಿರುತ್ತವೋ ಅಲ್ಲಿ ನೀರು

ಭೂಮಿಯ ಆಳಕ್ಕಿಳಿದು ಪಸರಿಸಲು ಸಾಧ್ಯವಾಗುತ್ತದೆ. ಮರಗಳಿಲ್ಲದಿದ್ದಲ್ಲಿ ನೀರು ನಿಲ್ಲದೇ ಹರಿದು ಹೋಗುತ್ತದೆ.

ನದಿ ನೀರಿನ ಮೂಲವಲ್ಲ, ಗಮ್ಯಸ್ಥಾನ. ಅದು ತನ್ನ ಗಮ್ಯವನ್ನು ಎಷ್ಟು ನಿಧಾನವಾಗಿ ತಲುಪುತ್ತದೆಯೋ, ಅದರ ಆಧಾರದ ಮೇಲೆ ನಮಗೆ ವರ್ಷದ ಎಷ್ಟು ದಿನ ನೀರಿನ ಪೂರೈಕೆಯಾಗುತ್ತದೆ ಎಂಬುದು ನಿರ್ಧಾರವಾಗುತ್ತದೆ. ಸದ್ಯಕ್ಕೆ, ಸಾಕಷ್ಟು ಸಸ್ಯಸಮೃದ್ಧಿಯಿಲ್ಲ, ಆದ್ದರಿಂದ ನೀರು ಬೇಗನೆ ನದಿಯನ್ನು ತಲುಪಿ ಪ್ರವಾಹ ಸ್ಥಿತಿ ಸೃಷ್ಟಿಯಾಗುತ್ತಿದೆ.

ಈ ನೀರನ್ನು ಅಣೆಕಟ್ಟುಗಳಿಂದ ತಡೆಹಿಡಿಯಲು ಪ್ರಯತ್ನಿಸುತ್ತಿದ್ದೇವೆ, ಇದು ಅಷ್ಟೇನು ಕೆಲಸ ಮಾಡುತ್ತಿಲ್ಲ. 20%ನಷ್ಟು ನಮ್ಮ ನದಿಗಳು ಹೂಳು ತುಂಬಿ ತತ್ತರಿಸುತ್ತಿವೆ. ಹಲವರು ನದಿ ಮತ್ತು ಕೊಳಗಳ ಆಳವನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಾರೆ. ನದಿ-ಸರೋವರಗಳಿಗೆ ಸಣ್ಣಸಣ್ಣ ತೊರೆಗಳು ವರ್ಷವಿಡೀ ನೀರು ಪೂರೈಸುತ್ತಿದ್ದವು. ಈಗ ಈ ತೊರೆಗಳೆಲ್ಲ ನಶಿಸಿ ಹೋಗಿವೆ, ಏಕೆಂದರೆ ನಾವು ಅವುಗಳ ಮೇಲೆಲ್ಲ ಕಟ್ಟಡಗಳನ್ನೂ, ಮನೆಗಳನ್ನೂ ಕಟ್ಟಿಬಿಟ್ಟಿದ್ದೇವೆ. ಸರೋವರಗಳ ಅಳ ಹೆಚ್ಚಿಸಿದರೆ, ಮಳೆಗಾಲದಲ್ಲಿ ಮಾತ್ರ ತುಂಬುತ್ತದೆ, ವರ್ಷದ ಬೇರೆ ಸಮಯದಲ್ಲಿ ನೀರಿನ ಹರಿವು ಇರುವುದಿಲ್ಲ. ಕೃತಕ ಪದ್ಧತಿಗಳು ದೀರ್ಘಾವಧಿಗೆ ಸಹಕಾರಿಯಲ್ಲ. ನೀರು ಇಂಗಿಸಲು ಸ್ಥಿರವಾದ ಮಾರ್ಗವೆಂದರೆ, ಭೂಮಿಯ ಸಸ್ಯ ಸಮೃದ್ಧಿ ವೃದ್ಧಿಸುವುದು. ನಮ್ಮ ಮಣ್ಣು, ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯದಿಂದ ದೊರೆಯುವ ಸಾವಯವಗಳಿಂದ ಶ್ರೀಮಂತವಾದರೆ, ಅದು ಹೆಚ್ಚು ನೀರನ್ನು ಹೀರಿ, ಅದನ್ನು ಅಂತರ್ಜಲವಾಗಿ ಜಿನುಗಿಸಿ, ನದಿಯನ್ನು ಸೇರಲು ಸಹಾಯ ಮಾಡುತ್ತದೆ. ಜಲಸಂಪನ್ಮೂಲದ ನಿರ್ವಹಣೆ ನಿರಂತರವಾಗಿ ಮಾಡಬೇಕಾಗುತ್ತದೆ. ಆದರೆ ಅದರ ಅವಶ್ಯಕತೆಯಿದ್ದಾಗ ಮಾತ್ರ ನೀರಿನ ಬಗ್ಗೆ ಯೋಚಿಸುತ್ತೇವೆ. ಯಾವುದೇ ಸಂಪನ್ಮೂಲವೂ ನಮಗೆ ನಿರಂತರ ಸಂಪನ್ಮೂಲಗಳಲ್ಲ, ಅದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ನೀರಿನ ಕೊರತೆ ಬೇಸಿಗೆಯಲ್ಲಿ ಮಾತ್ರ ಪರಿಗಣಿಸುವ ವಿಷಯವಲ್ಲ. ಮಳೆಗಾಲದ ನಂತರ ನೀರಿನ ಹರಿವನ್ನು ಗಮನಿಸಿ. ಅದೇ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು.

ಅಧ್ಯಯನಗಳು ಹೇಳುವ ಪ್ರಕಾರ, 10 ಸಾವಿರ ಮರಗಳು ಯಾವ ಪ್ರದೇಶವನ್ನು ಆವರಿಸುತ್ತವೆಯೋ ಅಲ್ಲಿ ಒಂದು ವರ್ಷದಲ್ಲಿ 38 ದಶಲಕ್ಷ ಲೀಟರ್ ನೀರು ಶೇಖರಣೆಯಾಗುತ್ತದೆ. ಕಾವೇರಿ ನದಿಪಾತ್ರ 83 ಸಾವಿರ ಚದರ ಕಿ.ಮೀ. ಹರವಿನ ಪ್ರದೇಶ, ಇಲ್ಲಿ ಶೇ.87 ಮರಗಳ ಹೊದಿಕೆಯನ್ನೇ ನಾಶ ಮಾಡಿದ್ದೇವೆ. ಈಗ ನೀವೇ ಊಹಿಸಿ, ನಾವು ಎಷ್ಟು ನೀರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು.

ಹಾಗಾದರೆ ಎಲ್ಲ ಕಡೆ ಕಾಡುಗಳನ್ನು ಮತ್ತೆ ಬೆಳೆಸಬೇಕೆ? ಇದು ಖಂಡಿತ ಅಸಾಧ್ಯ. ಇದಕ್ಕಿರುವ ಒಂದೇ ಮಾರ್ಗವೆಂದರೆ ಅರಣ್ಯ- ಕೃಷಿಪದ್ಧತಿ. ರೈತರಿಗೆ ಸಾವಯವ-ಮರಗಳ ಆಧಾರಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉತ್ತೇಜಿಸಿದರೆ, ಸಸ್ಯ ಹಾಗು ಪ್ರಾಣಿಗಳಿಂದ ಉತ್ಪನ್ನವಾಗುವ ಸಾವಯವ ತ್ಯಾಜ್ಯ ಮಣ್ಣಿನ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಮರ ಆಧಾರಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ, ನೆಲ-ಜಲಗಳು ಪುನಶ್ಚೇತನಗೊಳ್ಳುವುದಲ್ಲದೆ, ರೈತರ ಆದಾಯ ಹೆಚ್ಚುತ್ತದೆ.

ಇದಕ್ಕಾಗಿಯೇ ‘ಕಾವೇರಿ ಕೂಗು’ ಪ್ರಾರಂಭಿಸಿದ್ದೇವೆ. ನಮ್ಮ ಆದ್ಯತೆ ಕಾವೇರಿಯನ್ನು ಪುನಶ್ಚೇತನಗೊಳಿಸುವುದು. ಹತ್ತು-ಹನ್ನೆರಡು ವರ್ಷಗಳಲ್ಲಿ ಒಂದು ನದಿಯನ್ನು ಗಮನಾರ್ಹವಾಗಿ ಹೇಗೆ ಪುನಶ್ಚೇತನಗೊಳಿಸಬಹುದು ಮತ್ತು ರೈತರ ಆದಾಯವನ್ನು ವೃದ್ಧಿಸಬಹುದು ಎಂದು ಪ್ರಪಂಚಕ್ಕೆ ತಿಳಿಸಬೇಕಾಗಿದೆ. ಮುಖ್ಯವಾದ ವಿಷಯವೆಂದರೆ, ಇದು ಪರಿಸರದ ವಿರುದ್ಧ ಆರ್ಥಿಕತೆಯ ಹೋರಾಟವಲ್ಲ. ಪರಿಸರದ ಪುನಶ್ಚೇತನ ಭೂಮಾಲೀಕರಿಗೆ ಖಂಡಿತವಾಗಿ ಲಾಭದಾಯಕ. ನಮ್ಮ ಪ್ರಯತ್ನ ಕೂಡ ಇದನ್ನು ಜಾರಿಗೆ ತರವುದೇ ಆಗಿದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...