17 C
Bangalore
Friday, December 13, 2019

ಚಿತ್ರ ವಿಮರ್ಶೆ: ನೋಡುಗರನ್ನು ಭಾವುಕವಾಗಿ ಆವರಿಸುವ ಕವಚ

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

| ಮದನ್ ಬೆಂಗಳೂರು

ಹೀರೋ ಎಂದರೆ ಹೀಗೆಯೇ ಇರಬೇಕು ಎಂಬ ಕೆಲವೊಂದಿಷ್ಟು ಸಿದ್ಧ ಸೂತ್ರಗಳು ಚಿತ್ರರಂಗದಲ್ಲಿವೆ. ಅವುಗಳನ್ನೆಲ್ಲ ಬದಿಗೊತ್ತಿ ತಯಾರಾಗಿದ್ದೇ ‘ಕವಚ’ ಚಿತ್ರದ ಜಯರಾಮ ಪಾತ್ರ. ಜಯರಾಮನಿಗೆ ಕಣ್ಣು ಕಾಣುವುದಿಲ್ಲ. ತಂಗಿಗೆ ಮದುವೆ ಮಾಡಿಸಬೇಕು, ಮನೆ ಅಡವಿಟ್ಟು ತೆಗೆದುಕೊಂಡ ಸಾಲವನ್ನು ತೀರಿಸಬೇಕು, ಕೊಲೆಗಾರನ ಸಂಚಿನಿಂದ ಬಾಲಕಿಯೊಬ್ಬಳನ್ನೂ ರಕ್ಷಿಸಬೇಕು… ಹೀಗೆ ಅವನಿಗೆ ಹಲವು ಜವಾಬ್ದಾರಿಗಳಿವೆ. ಕಣ್ಣಿರುವ ವ್ಯಕ್ತಿಯೇ ಇಂಥದ್ದನ್ನೆಲ್ಲ ನಿಭಾಯಿಸುವುದು ಕಷ್ಟ. ಹೀಗಿರುವಾಗ ಅಂಧನಾದ ಜಯರಾಮ ಹೇಗೆ ನಿಭಾಯಿಸುತ್ತಾನೆ? ಇದೇ ‘ಕವಚ’ ಕೌತುಕ. ಜಯರಾಮನಾಗಿ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ ಶಿವರಾಜ್​ಕುಮಾರ್. ಈ ಪಾತ್ರಕ್ಕೆ ಹೀರೋಗಿರಿಯ ಹಂಗಿಲ್ಲ. ನಾಯಕಿ ಜತೆ ಮರ ಸುತ್ತುತ್ತ ಡ್ಯುಯೆಟ್ ಹಾಡುವ ಅವಕಾಶವೂ ಇಲ್ಲ. ಬಿಲ್ಡಪ್ ಡೈಲಾಗ್​ಗಳಿಗಂತೂ ಜಾಗವೇ ಇಲ್ಲ. ಹಾಗಿದ್ದರೂ ಪ್ರೇಕ್ಷಕರಿಂದ ಭರಪೂರ ಶಿಳ್ಳೆ, ಚಪ್ಪಾಳೆ ಸಂದಾಯವಾಗುತ್ತದೆ. ಅದೇ ಈ ಪಾತ್ರದ ತಾಕತ್ತು ಮತ್ತು ಕಥೆಯಲ್ಲಿರುವ ಗಮ್ಮತ್ತು.

‘ನನಗೆ ದೃಷ್ಟಿ ಇಲ್ಲದೆ ಇರಬಹುದು. ಆದರೆ ಸೃಷ್ಟಿಯಲ್ಲಿ ಏನೇನು ಇದೆ ಎಂಬುದನ್ನು ತಿಳಿದುಕೊಳ್ಳಬಲ್ಲೆ..’ ಎಂಬ ಸಂಭಾಷಣೆ ರೀತಿಯೇ ಇಡೀ ಸಿನಿಮಾದಲ್ಲಿ ವಿಶೇಷ ಚೇತನನಾಗಿ ಶಿವರಾಜ್​ಕುಮಾರ್ ಕಾಣಿಸುತ್ತಾರೆ. ಬಹುವರ್ಷಗಳ ಬಳಿಕ ಇಂಥ ಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿರುವ ಅವರು ಅಭಿನಯದ ಮೂಲಕ ಮೋಡಿ ಮಾಡುತ್ತಾರೆ. ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇದೆ. ಅಣ್ಣ-ತಂಗಿ ನಡುವಿನ ಭಾವನಾತ್ಮಕ ದೃಶ್ಯಗಳಿವೆ. ಅಪ್ಪನಿಗಾಗಿ ಕಾಯುವ ಅನಾಥ ಹುಡುಗಿಯ ಕಾತರವಿದೆ. ಎಷ್ಟೋ ವರ್ಷಗಳ ಹಿಂದೆ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರುವ ಅಮಾಯಕನ ಕೋಪವಿದೆ. ಇಂಥ ಹಲವಾರು ಅಂಶಗಳಿಂದಾಗಿ ಕೌಟುಂಬಿಕ ಪ್ರೇಕ್ಷಕರನ್ನು ‘ಕವಚ’ ಸೆಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಸರಣಿ ಕೊಲೆ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆಯಿಂದಾಗಿ ಚಿತ್ರದಲ್ಲಿ ಸಸ್ಪೆನ್ಸ್ ಕೂಡ ಉತ್ತುಂಗಕ್ಕೇರಿದೆ. ಮಾಸ್ ಪ್ರೇಕ್ಷಕರಿಗೆ ‘ಕವಚ’ ಹಿಡಿಸದೆ ಇರಬಹುದು. ಚಿತ್ರದ ಅವಧಿಯನ್ನು ಕೊಂಚ ಕಡಿಮೆಗೊಳಿಸಬಹುದಾದ ಅವಕಾಶವನ್ನು ಸಂಕಲನಕಾರ ಜೋ.ನಿ. ಹರ್ಷ ಕೈಚೆಲ್ಲಿದಂತಿದೆ. ಕೆಲವು ಲಾಜಿಕಲ್ ತಪು್ಪಗಳ ಕಡೆಗೆ ನಿರ್ದೇಶಕರು ಗಮನ ಹರಿಸುವ ಅವಶ್ಯಕತೆ ಇತ್ತು. ಫೈಟಿಂಗ್ ದೃಶ್ಯಗಳು ಚಿತ್ರದ ನೈಜತೆಗೆ ಅಡ್ಡಿ ಉಂಟು ಮಾಡಿದಂತೆ ಭಾಸವಾಗುತ್ತವೆ.

ಶಿವರಾಜ್​ಕುಮಾರ್ ನಂತರ ಪಾತ್ರವರ್ಗದಲ್ಲಿ ಅತಿಹೆಚ್ಚು ಆಕರ್ಷಕ ಎನಿಸುವುದು ವಸಿಷ್ಠ ಸಿಂಹ. ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆಯಾದರೂ ಅದನ್ನು ಮಾಮೂಲಿ ಸಿನಿಮಾಗಳ ವಿಲನ್​ಗಿಂತ ಭಿನ್ನವಾಗಿ ಕಟ್ಟಿಕೊಡಲಾಗಿದೆ. ಹೆಚ್ಚೇನೂ ಮಾತನಾಡದೆ, ದೊಡ್ಡ ದೊಡ್ಡ ಡೈಲಾಗ್​ಗಳ ಮೂಲಕ ಅಬ್ಬರಿಸದೆ, ಕಣ್ಣಿನಲ್ಲೇ ನಡುಕ ಹುಟ್ಟಿಸುತ್ತಾರೆ ವಸಿಷ್ಠ. ತಬಲ ನಾಣಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ನಗು ಉಕ್ಕಿಸುವಲ್ಲಿ ಹಿಂದೆ ಬಿದ್ದಿಲ್ಲ. ಸಿಡುಕಿನ ಪೊಲೀಸ್ ಅಧಿಕಾರಿಯಾಗಿ ರವಿ ಕಾಳೆ ಗುಡುಗಿದ್ದಾರೆ. ಬಾಲ ನಟಿ ಮೀನಾಕ್ಷಿ ಅಭಿನಯಕ್ಕೂ ಹೆಚ್ಚು ಅಂಕ ಸಲ್ಲಬೇಕು. ಇಶಾ ಕೊಪ್ಪಿಕರ್ ಮತ್ತು ಕೃತಿಕಾ ಜಯಕುಮಾರ್ ನಿಭಾಯಿಸಿರುವ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇಲ್ಲ. ರಾಹುಲ್ ಶ್ರೀವಾಸ್ತವ್ ಛಾಯಾಗ್ರಹಣ ಕೂಡ ಚಿತ್ರದ ಹೈಲೈಟ್​ಗಳಲ್ಲೊಂದು. ಭಾವುಕತೆ ಹೆಚ್ಚಿಸುವಲ್ಲಿ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಸಹಕಾರಿ ಆಗಿವೆ.

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...